ಸಿಹಿಯಾದ ಶುಂಠಿ ಬರ್ಫಿ ಸವಿದು ಆನಂದಿಸಿ

Public TV
2 Min Read

ಶುಂಠಿ ಹಲವು ಔಷಧೀಯ ಗುಣಗಳನ್ನು ಒಳಗೊಂಡಿದೆ. ಶುಂಠಿಯನ್ನು ಸೇವಿಸುವುದರಿಂದ ಶೀತ, ವಾಕರಿಕೆ, ಸಂಧಿವಾತ, ಮೈಗ್ರೇನ್ ಮತ್ತು ಅಧಿಕ ರಕ್ತದೊತ್ತಡದಂತಹ ಹಲವಾರು ಕಾಯಿಲೆಗಳನ್ನು ಹತೋಟಿಗೆ ತರಬಹುದು. ಆದ್ದರಿಂದಲೇ ಈ ರೀತಿಯ ಕಾಯಿಲೆಗಳ ಚಿಕಿತ್ಸೆಗಳಲ್ಲಿ ಶುಂಠಿಯನ್ನು ಬಳಸಲಾಗುತ್ತದೆ. ಶುಂಠಿ ತುಂಬಾ ಖಾರವನ್ನು ಹೊಂದಿರುವುದರಿಂದ ಅದನ್ನು ಹಾಗೇ ತಿನ್ನುವುದು ಕಷ್ಟ. ಆದ್ದರಿಂದ ಇವತ್ತಿನ ನಮ್ಮ ರೆಸಿಪಿಯಲ್ಲಿ ಸಿಹಿಯಾದ ಶುಂಠಿ ಬರ್ಫಿಯನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಸಖತ್ ಕ್ರಂಚಿ ಟೋಫು ನಗ್ಗೆಟ್ಸ್ ರೆಸಿಪಿ

ಬೇಕಾಗುವ ಸಾಮಗ್ರಿಗಳು:
ಉಪ್ಪು – 1 ಚಮಚ
ಸಕ್ಕರೆ – 2 ಕಪ್
ಹಾಲು – 2 ಕಪ್
ಏಲಕ್ಕಿ ಪೌಡರ್ – 1 ಚಮಚ
ತುಪ್ಪ – 4 ಚಮಚ
ಶುಂಠಿ -200 ಗ್ರಾಂ

ಮಾಡುವ ವಿಧಾನ:
* ಮೊದಲಿಗೆ ಶುಂಠಿಯನ್ನು ಚೆನ್ನಾಗಿ ತೊಳೆದು ಒಂದು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಬಳಿಕ ಒಂದು ಬಾಣಾಲೆಯಲ್ಲಿ ತುಪ್ಪ ಹಾಕಿ ಬಿಸಿಗಿಡಿ. ಬಿಸಿಯಾದ ಬಳಿಕ ಅದಕ್ಕೆ ರುಬ್ಬಿಕೊಂಡ ಶುಂಠಿ ಪೇಸ್ಟ್ ಅನ್ನು ಹಾಕಿಕೊಂಡು ಅದರ ಹಸಿವಾಸನೆ ಹೋಗಿ ಎಣ್ಣೆ ಬಿಟ್ಟುಕೊಳ್ಳುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
* ಈಗ ಅದಕ್ಕೆ ಸಕ್ಕರೆ ಸೇರಿಸಿ ಶುಂಠಿ ಪೇಸ್ಟ್ನೊಂದಿಗೆ ಹೊಂದಿಕೊಳ್ಳುವಂತೆ 10ರಿಂದ 12 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ.
* ಈ ಪಾಕ ಚೆನ್ನಾಗಿ ಹೊಂದಿಕೊಂಡು ದಪ್ಪವಾಗಲು ಪ್ರಾರಂಭವಾದ ಬಳಿಕ ಅದಕ್ಕೆ ಅರ್ಧ ಕಪ್ ಹಾಲನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡುತ್ತಲೇ ಇರಬೇಕು. ಇಲ್ಲವಾದಲ್ಲಿ ತಳ ಹಿಡಿಯುವ ಸಾಧ್ಯತೆಗಳಿವೆ.
* ಬಳಿಕ ಇದಕ್ಕೆ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಮತ್ತು ಏಲಕ್ಕಿ ಪೌಡರ್ ಅನ್ನು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ.
* ಎಲ್ಲಾ ಪದಾರ್ಥಗಳು ಚೆನ್ನಾಗಿ ಹೊಂದಿಕೊಂಡ ಬಳಿಕ ಅದನ್ನು ಒಂದು ಅಗಲವಾದ ಪ್ಲೇಟ್‌ಗೆ ವರ್ಗಾಯಿಸಿಕೊಂಡು ಸಮವಾಗಿ ಹರಡಿಕೊಳ್ಳಿ.
* ನಂತರ ಈ ಮಿಶ್ರಣವನ್ನು 20 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ನಿಮಿಗಿಷ್ಟವಾದ ಆಕಾರದಲ್ಲಿ ಕತ್ತರಿಸಿ ಸವಿಯಲು ಕೊಡಿ. ಇದನ್ನೂ ಓದಿ: ಸವಿಯಿರಿ ಆರೋಗ್ಯಕರ ಬಾಳೆಹಣ್ಣಿನ ಖೀರ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್