ನಮ್‌ ಕಡೆ ಬ್ರೇಸ್‌ಲೇಟ್‌ ಎಂಗೇಜ್‌ಮೆಂಟ್‌ಗೆ ಕೊಡ್ತಾರೆ: ಕಾವ್ಯ ತಂದೆ ಕೊಟ್ಟ ಗಿಫ್ಟ್‌ ಬಗ್ಗೆ ಸುದೀಪ್‌ ಬಳಿ ಗಿಲ್ಲಿ ಹೇಳಿದ್ದೇನು?

2 Min Read

ಬಿಗ್‌ ಬಾಸ್‌ (Bigg Boss) ಮನೆಯಲ್ಲಿ ಈಗ ಗಿಲ್ಲಿಯದ್ದೇ ಸುದ್ದಿ. ಫ್ಯಾಮಿಲಿ ವೀಕ್‌ನಲ್ಲಿ ಗಿಲ್ಲಿಗೆ ಕಾವ್ಯ ತಂದೆ ಕೊಟ್ಟ ಗಿಫ್ಟ್‌ ಬಗ್ಗೆ ಕಿಚ್ಚ ಸುದೀಪ್‌ (Kiccha Sudeep) ವಿಚಾರಿಸಿದ್ದಾರೆ. ಇದು ಎಂಗೇಜ್‌ಮೆಂಟ್‌ ಗಿಫ್ಟ್‌ ಅಂತ ಗಿಲ್ಲಿ (Gilli) ಕೊಟ್ಟ ಹೇಳಿಕೆಗೆ ಸುದೀಪ್‌ ಸೇರಿ ಮನೆಮಂದಿ ನಗೆಗಡಲಲ್ಲಿ ತೇಲಿದ್ದಾರೆ.

ಗಿಲ್ಲಿಗೆ ರಘು ಕೈಯಲ್ಲಿರುತ್ತಿದ್ದ ಬ್ರೇಸ್‌ಲೇಟ್‌ ಕಣ್ಣಿತ್ತು. ಆಗಾಗ ರಘು ಬ್ರೇಸ್‌ಲೇಟ್‌ ಪಡೆದು ಹಾಕಿಕೊಂಡು ತನಗೆ ಇದು ಇಷ್ಟ ಎಂದು ಹೇಳಿದ್ದರು. ಇದನ್ನು ಗಮನಿಸಿದ್ದ ಕಾವ್ಯ ತಂದೆ ಫ್ಯಾಮಿಲಿ ವೀಕ್‌ನಲ್ಲಿ ಮನೆಗೆ ಬಂದಿದ್ದಾಗ, ಗಿಲ್ಲಿಗೆ ಬ್ರೇಸ್‌ಲೇಟ್‌ ಗಿಫ್ಟ್‌ ಮಾಡಿದ್ದರು. ಗಿಫ್ಟ್‌ ಕೊಟ್ಟ ವಿಚಾರವನ್ನೂ ವೇದಿಕೆಯಲ್ಲಿ ಹಂಚಿಕೊಂಡಿದ್ದರು. ಈ ಉಡುಗೊರೆಗೆ ಗಿಲ್ಲಿ ಫುಲ್‌ ಖುಷ್‌ ಆಗಿದ್ದರು. ಇದನ್ನೂ ಓದಿ: ಗಿಲ್ಲಿ ಬೇಜವಾಬ್ದಾರಿ ಪರ್ಸನ್‌, ಪಕ್ಷಪಾತಿ – ಕ್ಯಾಪ್ಟನ್ಸಿ ಬಗ್ಗೆ ಕಿಚ್ಚನ ಮುಂದೆ ಮನೆ ಮಂದಿ ದೂರು!

ವಾರದ ಪಂಚಾಯ್ತಿಯಲ್ಲಿ ಬ್ರೇಸ್‌ಲೇಟ್‌ ಬಗ್ಗೆ ಗಿಲ್ಲಿ ಬಳಿ ಸುದೀಪ್‌ ವಿಚಾರಿಸಿದ್ದಾರೆ. ‘ಬ್ರೇಸ್‌ಲೇಟ್‌ನ ಎಂಗೇಜ್‌ಮೆಂಟ್‌ಗೆ ತಂದು ಕೊಡೋದು ನಮ್ಮನೆ ಸಂಪ್ರದಾಯ’ ಅಂತ ಗಿಲ್ಲಿ ರಿಯಾಕ್ಟ್‌ ಮಾಡ್ತಾರೆ. ಅದಕ್ಕೆ ಮಧ್ಯಪ್ರವೇಶಿಸಿ ‘ನಮ್‌ ಕಡೆ ಎಂಗೇಜ್‌ಮೆಂಟ್‌ಗೆ ರಿಂಗ್‌ ಕೊಡೋದು’ ಅಂತ ಹೇಳ್ತಾರೆ. ಈ ಮಾತಿಗೆ ಸುದೀಪ್‌ ನಕ್ಕು, ‘ಹಾಗಾದ್ರೆ ನೀವು ರಿಂಗ್‌ನ ದೊಡ್ಡದು ಮಾಡಿ ಬ್ರೇಸ್‌ಲೇಟ್‌ ಹಾಕ್ಬಿಟ್ಟಿದ್ದೀರಿ’ ಅಂತ ಹೇಳ್ತಾರೆ. ಕಿಚ್ಚನ ಮಾತಿಗೆ ಎಲ್ಲರೂ ನಗುತ್ತಾರೆ.

ಬಿಗ್‌ ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯ ಬಾಂಡಿಂಗ್‌ ಚೆನ್ನಾಗಿದೆ. ನಾಮಿನೇಷನ್‌ ಸೇರಿದಂತೆ (ಕಾವ್ಯ ಒಮ್ಮೆ ಮಾಡಿದ್ದು ಬಿಟ್ಟರೆ) ಯಾವ ವಿಚಾರದಲ್ಲೂ ಒಬ್ಬರನ್ನೊಬ್ಬರು ಮನೆಯಲ್ಲಿ ಬಿಟ್ಟುಕೊಟ್ಟಿಲ್ಲ. ಇವರಿಬ್ಬರ ಜೋಡಿ ಬಗ್ಗೆ ಮನೆಯಲ್ಲಿ ಉಳಿದವರಿಗೆ ಅಸಮಾಧಾನ ಇದೆ. ಸದ್ಯಕ್ಕೆ ಇವರಿಬ್ಬರ ಜೋಡಿ ಫುಲ್‌ ಟ್ರೆಂಡಿಂಗ್‌ನಲ್ಲಿದೆ. ಮನೆಯಿಂದ ಹೊರಬಂದ ಮೇಲೆ ಇಬ್ಬರು ಪರಸ್ಪರ ಬಾಂಡಿಂಗ್‌ ಹೇಗೆ ನಿರ್ವಹಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ನಿಯಮ ಉಲ್ಲಂಘಿಸಿದ್ರೂ ಮನೆ ಮಂದಿಯ ಸಹಾಯದಿಂದ ಮತ್ತೆ ನಾಯಕನಾದ ಧನುಷ್‌

Share This Article