ಗಿಲ್ಲಿ ನಟನೇ ಬಿಗ್‌ಬಾಸ್ ಗೆದ್ದು ಬರಲಿ – ಶಾಸಕ ನಂಜೇಗೌಡ ಶುಭಹಾರೈಕೆ

1 Min Read

ಕೋಲಾರ: ಈ ಬಾರಿ ಬಿಗ್‌ಬಾಸ್ ಗಿಲ್ಲಿ ನಟನೇ (Gilli Nata) ಗೆದ್ದು ಬರಲಿ ಎಂದು ಮಾಲೂರು ಶಾಸಕ ನಂಜೇಗೌಡ ಹಾಗೂ ಕೋಲಾರದ ಯುವಕರು, ಅಲ್ಲಿನ ಅಭಿಮಾನಿಗಳು ಶುಭಹಾರೈಸಿದ್ದಾರೆ.

ಜಿಲ್ಲೆಯಲ್ಲಿ ಮಾತನಾಡಿದ ಅವರು, ಗಿಲ್ಲಿ ಮಂಡ್ಯ ಜಿಲ್ಲೆಯ ಸಣ್ಣ ಹಳ್ಳಿಯ ರೈತರ ಕುಟುಂಬದಿಂದ ಬಂದಿರುವ ಹಳ್ಳಿ ಪ್ರತಿಭೆ. ಈ ಬಾರಿ ಬಿಗ್‌ಬಾಸ್‌ನಲ್ಲಿ ಗಿಲ್ಲಿ ಗೆದ್ದು ಬರಬೇಕು. ಸಹಜ ಕಲೆಯಿಂದಲೇ ಪ್ರಖ್ಯಾತಿ ಪಡೆದಿರುವ ಗಿಲ್ಲಿ ನಟ ಗೆಲ್ಲಲಿ, ರಾಜ್ಯ, ದೇಶ, ವಿದೇಶಗಳಿಂದಲೂ ಗಿಲ್ಲಿಗೆ ಶುಭ ಹಾರೈಕೆ ಬರುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: Bigg Boss: 12ರ ಗ್ರ‍್ಯಾಂಡ್ ಫಿನಾಲೆಗೆ ಕೌಂಟ್‌ಡೌನ್; ಯಾರಾಗ್ತಾರೆ ಬಿಗ್ ಬಾಸ್ 12ರ ವಿನ್ನರ್?

ಇನ್ನೂ ಗಿಲ್ಲಿ ನಟನಿಗೆ ಕೋಲಾರದ ಯುವಕರು ಶುಭ ಹಾರೈಸಿದ್ದು, ಕೋಲಾರದ ಹೊಸ ಬಸ್ ನಿಲ್ದಾಣದ ಬಳಿ ಗಿಲ್ಲಿ ನಟನ ದೊಡ್ಡ ಭಾವಚಿತ್ರ ಹಾಕಿ, ಪಟಾಕಿ ಸಿಡಿಸಿದ್ದಾರೆ. ಬಿಗ್‌ಬಾಸ್‌ನಲ್ಲಿ ಗಿಲ್ಲಿ ಗೆಲ್ಲಬೇಕು ಅನ್ನೋದು ನಮ್ಮೆಲ್ಲರ ಹಾರೈಕೆ, ಗಿಲ್ಲಿ ನಟನಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.

ಇಂದು ನಡೆಯುವ ಗ್ರ್ಯಾಂಡ್‌ ಫೀನಾಲೆಯಲ್ಲಿ ಗಿಲ್ಲಿ ನಟ ವಿಜೇತರಾಗಬೇಕು, ಡಮಾಲ್ ಡಿಮಿಲ್ ಡಕ್ಕ, ಗಿಲ್ಲಿ ಗೆಲ್ಲೋದು ಪಕ್ಕಾ ಎಂದು ಘೋಷಣೆ ಕೂಗಿ ಯುವಕರು, ಅಭಿಮಾನಿಗಳು ವಿಶ್ ಮಾಡಿದ್ದಾರೆ.ಇದನ್ನೂ ಓದಿ: ಬಿಗ್‌ ಬಾಸ್‌ ವಿನ್ನರ್‌ ಯಾರು ಅನ್ನೋದು ಇಂದು ಸೂರ್ಯಾಸ್ತದ ಬಳಿಕ ಗೊತ್ತಾಗುತ್ತೆ: ಸುದೀಪ್‌

Share This Article