ಬಾಲಿವುಡ್‌ನಲ್ಲಿ 7 ಸಿನಿಮಾಗಳು ಫ್ಲಾಪ್, ಮತ್ತೆ ಸೌತ್‌ನತ್ತ ‘ಗಿಲ್ಲಿ’ ನಟಿ

Public TV
1 Min Read

ನ್ನಡದ ‘ಗಿಲ್ಲಿ’ ಸಿನಿಮಾ (Gilli Film) ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಸೌತ್ ಸಿನಿಮಾ ಬಿಟ್ಟು ಬಾಲಿವುಡ್‌ಗೆ ಹಾರಿದ್ದರು. ಸತತ 7 ಸಿನಿಮಾಗಳ ಸೋಲಿನ ನಂತರ ಈಗ ಮತ್ತೆ ದಕ್ಷಿಣ ಸಿನಿಮಾಗಳತ್ತ ರಾಕುಲ್ ಮುಖ ಮಾಡಿದ್ದಾರೆ. ತಮಿಳಿನ ನಟ ಶಿವಕಾರ್ತಿಕೇಯನ್‌ಗೆ ‘ಗಿಲ್ಲಿ’ ಬ್ಯೂಟಿ ಹೀರೋಯಿನ್ ಆಗಿದ್ದಾರೆ.

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆಯಿರುವಾಗಲೇ ಇಲ್ಲಿನ ಸಿನಿಮಾ ಬೇಡ ಅಂತಾ ಕಡೆಗಣಿಸಿ ಬಾಲಿವುಡ್ ಚಿತ್ರಗಳಿಗೆ ರಾಕುಲ್ ಮಣೆ ಹಾಕಿದ್ದರು. 2014ರಿಂದಲೇ ಹಿಂದಿ ಸಿನಿಮಾರಂಗದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದರು. ಬಳಿಕ ಅಟ್ಯಾಕ್, ರನ್‌ವೇ 34, ಕಟ್‌ಪುತ್ಲಿ, ಡಾಕ್ಟರ್ ಜಿ, ಥ್ಯಾಂಕ್ ಗಾಡ್, ಐ ಲವ್ ಯೂ, ಛತ್ರಿವಾಲಿ ಸಿನಿಮಾಗಳು ಮಕಾಡೆ ಮಲಗಿವೆ. ಇದನ್ನೂ ಓದಿ:ಯಾವ ಬಾಲಿವುಡ್ ಹೀರೋಯಿನ್‌ಗೂ ಕಮ್ಮಿಯಿಲ್ಲದಂತೆ ಮಿಂಚಿದ ಮೇಘಾ ಶೆಟ್ಟಿ

ಬಾಲಿವುಡ್‌ನ 7 ಸಿನಿಮಾಗಳು ಸೋತ ಮೇಲೆ ಈಗ ಸೌತ್ ಸಿನಿಮಾಗಳಿಗೆ ನಟಿ ಮಣೆ ಹಾಕಿದ್ದಾರೆ. ಶಿವಕಾರ್ತಿಕೇಯನ್ (Sivakarthikeyan) ನಟನೆಯ ‘ಅಲಾಯನ್’ (Ayalaan) ಸಿನಿಮಾಗೆ ರಾಕುಲ್ ನಾಯಕಿಯಾಗಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ. ಕಮಲ್ ಹಾಸನ್ ನಟನೆಯ ಇಂಡಿಯನ್ 2ನಲ್ಲಿ (Indian 2) ಹೀರೋಯಿನ್ ಆಗಿ ಸಾಥ್ ನೀಡಿದ್ದಾರೆ. 7 ಸಿನಿಮಾ ಸೋತ ಮೇಲೆ ಬುದ್ಧಿ ಬಂತಾ ಎಂದು ನೆಟ್ಟಿಗರು ರಾಕುಲ್ ಕಾಲೆಳೆದಿದ್ದಾರೆ.

ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ರಾಕುಲ್, ಪಾಕೆಟ್ ಮನಿಗಾಗಿ ‘ಗಿಲ್ಲಿ’ ಸಿನಿಮಾ ಮಾಡಿದೆ ಎಂದು ಮಾತನಾಡಿದ್ದರು. ಅಂದು ಅವರ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್