BBK 12: ಬಿಗ್‌ಬಾಸ್ ಗಿಲ್ಲಿಯ ಅಭಿಮಾನಿ ಕೈ ಮೇಲೆ ಟ್ಯಾಟೂ!

1 Min Read

ಬಿಗ್‌ಬಾಸ್ (Bigg Boss) ಸೀಸನ್ 12ರ ಸ್ಪರ್ಧಿ ಗಿಲ್ಲಿ (Gilli) ನಟನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ತಮ್ಮ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಬಿಗ್‌ಬಾಸ್ ಮನೆಗೆ ಗಿಲ್ಲಿ ಪ್ರವೇಶ ಮಾಡುವ ವೇಳೆ ಗಿಲ್ಲಿಯ ಇನ್‌ಸ್ಟಾ ಅಕೌಂಟ್‌ನ ಪಾಲೋವರ್ಸ್ ಸಂಖ್ಯೆ ಕೇವಲ ಒಂದು ಲಕ್ಷವಾಗಿತ್ತು. ಈಗ ಗಿಲ್ಲಿಯ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಪಾಲೋವರ್ಸ್ ಸಂಖ್ಯೆ ಹತ್ತು ಲಕ್ಷದ ಗಡಿ ದಾಟಿದೆ.

ಫಿನಾಲೆ ಸಮೀಪವಾಗುತ್ತಿದ್ದಂತೆ ಗಿಲ್ಲಿ ನಟನ ಕ್ರೇಜ್ ಕೂಡಾ ಜಾಸ್ತಿಯಾಗುತ್ತಿದೆ. ಹೀಗಾಗಿ, ಅವ್ರ ಕ್ರೇಜ್ ನೋಡಿ ಫಿದಾ ಆದ ಅಭಿಮಾನಿಯೊಬ್ಬರು ಗಿಲ್ಲಿಯ ಟ್ಯಾಟೂವನ್ನ ಕೈಮೇಲೆ ಹಾಕಿಸಿಕೊಂಡಿದ್ದಾರೆ. ಈ ವಿಡಿಯೋ ಈಗ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಗೆಲ್ಲಬೇಕು ಅನ್ನೋ ಪೋಸ್ಟ್‌ಗಳು ವೈರಲ್ ಆಗ್ತಿವೆ. ಇದನ್ನೂ ಓದಿ: ನಿಂಗೆ ಗಿಲ್ಲಿ ಬೇಕು: ರಕ್ಷಿತಾ ವಿರುದ್ಧ ಗುಡುಗಿ ಕಳಪೆ ಕೊಟ್ಟ ರಾಶಿಕಾ

ಗಿಲ್ಲಿಯ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಪರವಾದ ಪೋಸ್ಟ್‌ಗಳನ್ನು ಅವ್ರ ಅಭಿಮಾನಿಗಳು ಹಂಚುತ್ತಿದ್ದಾರೆ. ಗಿಲ್ಲಿಯ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಕೂಡಾ ಗಿಲ್ಲಿ ಗೆಲ್ಲಬೇಕು ಎಂದಿದ್ದಾರೆ. ಇಡೀ ಕರುನಾಡ ಮನ ಗೆದ್ದಿರೋ ಗಿಲ್ಲಿ ಈ ಸಲ ಬಿಗ್‌ಬಾಸ್ ಗೆಲ್ಲುವ ನಿರೀಕ್ಷೆ ಕೂಡಾ ಹೆಚ್ಚಾಗಿದೆ.

Share This Article