ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

Public TV
1 Min Read

ಲಕ್ನೋ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‍ನಲ್ಲಿ (Ghaziabad) ನಡೆದಿದೆ.

ಮೃತ ವ್ಯಕ್ತಿಯನ್ನು ನಾತು ಅಕಾ ಅಫ್ಜಲ್ ಎಂದು ಗುರುತಿಸಲಾಗಿದೆ. ದೀಪಾವಳಿ ಆಚರಣೆ ವೇಳೆ ಆತನ ಮೇಲೆ ಪಟಾಕಿ ಹಚ್ಚಿ ಎಸೆಯಲಾಗಿದೆ. ವ್ಯಕ್ತಿ ಪಟಾಕಿ ಸಿಡಿದ ಶಬ್ದದಿಂದ ಆತಂಕಕ್ಕೊಳಗಾಗಿ ಕುಸಿದು ಬಿದ್ದಿದ್ದಾನೆ. ಬಳಿಕ ಅಲ್ಲಿಯೇ ಸಾವಿಗೀಡಾಗಿದ್ದಾನೆ. ಇದನ್ನೂ ಓದಿ: ಮದುವೆಯಾಗಿ 3 ವರ್ಷವಾದ್ರೂ ಮಕ್ಕಳಾಗಿಲ್ಲ ಅಂತ ಪತ್ನಿಯ ಹತ್ಯೆ?

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆರೆಯಾದ ವೀಡಿಯೋದಲ್ಲಿ ಇಬ್ಬರು ಮತ್ತೊಂದು ಗುಂಪಿನ ಜನರೊಂದಿಗೆ ಮಾತನಾಡಿ, ಅವರು ಹೊರಡಲು ತಿರುಗಿದಾಗ ಇದ್ದಕ್ಕಿದ್ದಂತೆ ಒಬ್ಬರ ಮೇಲೆ ಪಟಾಕಿ ಹಚ್ಚಿ ಎಸೆದಿರುವುದು ಸೆರೆಯಾಗಿದೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆತನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಪೊಲೀಸರು (Police) ಆರೋಪಿಯನ್ನು ಪ್ರದೀಪ್ ಎಂದು ಗುರುತಿಸಿದ್ದಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಹಬ್ಬಕ್ಕೆ ಬಟ್ಟೆ ಕೊಂಡೊಯ್ಯುತ್ತಿದ್ದ ಪುರಸಭೆ ಸದಸ್ಯನ ತಡೆದು ಮಾರಕಾಸ್ತ್ರದಿಂದ ಹಲ್ಲೆ

Share This Article