`ಘಾರ್ಗಾ’ ಚಿತ್ರದ ಟ್ರೈಲರ್ ರಿಲೀಸ್‌ – ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಂಡು ಸಿನಿಪ್ರಿಯರು ಫುಲ್‌ ಖುಷ್‌

3 Min Read

ಅರುಣ್ ರಾಮ್​ ಪ್ರಸಾದ್ (Arun Ramprasad) ನಟನೆಯ ‘ಘಾರ್ಗಾ’ ಸಿನಿಮಾದ ಟ್ರೈಲರ್‌ (Ghagra Movie Trailer) ಬಿಡುಗಡೆಯಾಗಿದೆ. ಹಾರರ್, ಸಸ್ಪೆನ್ಸ್, ಥಿಲ್ಲರ್‌ನಿಂದ ಕೂಡಿದ ಟ್ರೈಲರ್‌ ಸಿನಿ ರಸಿಕರನ್ನ ಅಚ್ಚರಿಗೊಳಿಸಿದೆ.

ಹೌದು. `ಜೋಗಿ’, `ಪ್ರೀತಿ ಏಕೆ ಭೂಮಿ’ ಮೇಲಿದೆ ಮೊದಲಾದ ಚಿತ್ರಗಳ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ (Ashwini Ramprasad) ನಿರ್ಮಾಣದ ಬಹುನಿರೀಕ್ಷಿತ `ಘಾರ್ಗಾ’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಒರಾಯನ್ ಮಾಲ್ ಆವರಣದಲ್ಲಿ ನೆರವೇರಿತು. ಅವರ ಪುತ್ರ ಅರುಣ್ ರಾಮ್‌ಪ್ರಸಾದ್‌ ಈ ಚಿತ್ರದ ನಾಯಕನಾಗಿ ಸಿನಿ ರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ʻಫಾರ್ಗಾʼ ಒಂದು ಊರಿನ ಹೆಸರಾಗಿದ್ದು, ʻದಿ ಲ್ಯಾಂಡ್ ಆಫ್ ಶಾಡೋʼ ಎಂಬ ಅಡಿಬರಹ ಚಿತ್ರಕ್ಕಿದೆ.

ಪ್ರಮುಖ ಪಾತ್ರದಲ್ಲಿ ಸಾಯಿಕುಮಾರ್ (Saikumar) ಹಾಗೂ ನಾಯಕಿ ಪಾತ್ರದಲ್ಲಿ ರೆಹಾನ ಅಭಿನಯಿಸಿದ್ದಾರೆ. ಎಂ. ಶಶಿಧರ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಆ ವೇದಿಕೆಯಲ್ಲಿ ಪೊಲೀಸ್ ಸ್ಟೋರಿ ಚಿತ್ರದ (Police Story Movie) ಡೈಲಾಗ್ ಹೇಳಿದ ಸಾಯಿ ಕುಮಾರ್ ಅವರ ಅಪ್ಟಟ ಅಭಿಮಾನಿಯ ಕೈಲಿ ಚಿತ್ರದ ಟ್ರೈಲರ್ ರಿಲೀಸ್ ಮಾಡಿಸಲಾಯಿತು.

ನಂತರ ಮಾತನಾಡಿದ ಸಾಯಿಕುಮಾರ್, ಶಶಿ ನನಗೆ ಈ ಕಥೆ ಹೇಳಿದ ತಕ್ಷಣ ನನಗೆ ಇದರಲ್ಲಿ ಆ್ಯಕ್ಟ್ ಮಾಡಬೇಕು ಅನಿಸಿತು. ನಾನು ಘಸ್ಟ್ ಟೈಮ್ ಇಂಥ ರೋಲ್ ಮಾಡಿರೋದು. ಇನ್ ವೆಸ್ಟಿಗೇಷನ್ ಥರದ ಪಾತ್ರ. ಇಂಥ ಡೈರೆಕ್ಟರ್ ಮುಂದೆ ಬರಬೇಕು. ನಿರ್ಮಾಪಕರು ಅಶ್ವಿನಿ ರಾಮ್ ಪ್ರಸಾದ್ ಅಂದಾಗ ಖುಷಿಯಾಯ್ತು. ಅವರು ಕನ್ನಡಕ್ಕೆ ಒಳ್ಳೊಳ್ಳೆ ಚಿತ್ರಗಳನ್ನ ಕೊಟ್ಟವರು. ಸಿನಿಮಾ ತುಂಬಾ ರಿಚ್ ಆಗಿದೆ ಎಂದು ಶ್ಲಾಘಿಸಿದರು.

ಮುಂದಿನ ತಿಂಗಳೇ ಸಿನಿಮಾ ರಿಲೀಸ್‌
ಬಳಿಕ ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್ ಮಾತನಾಡುತ್ತಾ, ಕಥೆಗೋಸ್ಕರ ನಾನು ಈ ಸಿನಿಮಾ ಮಾಡಿದೆ. ಏನೋ ಒಂದು ಕ್ರಿಯೇಟಿವಿಟಿ, ತುಂಬಾ ಸತ್ವ ಇದೆ. ಶಶಿ ಕಥೆ ಹೇಳಿದ ರೀತಿ, ಸ್ಕ್ರೀನ್ ಪ್ಲೇ ನನಗೆ ತುಂಬಾ ಇಷ್ಟವಾಯ್ತು. ಇದು ಮಾಮೂಲಿ ಸಿನಿಮಾ ಅಲ್ಲ, ವಿಭಿನ್ನ ರೀತಿಯಲ್ಲಿದೆ. ಸಿನಿಮಾ ರಿಲೀಸಾದ ಮೇಲೆ ನೀವೇ ನೋಡ್ತೀರಾ, ಮುಂದಿನ ತಿಂಗಳು ರಿಲೀಸ್ ಮಾಡುತ್ತಿದ್ದೇವೆ ಎಂದರು.

ವಿತರಕ ಕೆಸಿಎನ್ ಕುಮಾರ್ (KCN Kumar) ಮಾತನಾಡಿ, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಫೆ.6 ರಂದು ರಿಲೀಸ್‌ ಆಗ್ತಿದೆ. ನಿರ್ದೇಶಕ ಶಶಿ ತುಂಬಾ ಪ್ರತಿಭಾವಂತ. ಈಗಾಗಲೇ ನನ್ನ ಮುಂದಿನ ಸಿನಿಮಾಗೆ ಅವರಿಗೆ ಅಡ್ವಾನ್ಸ್ ಮಾಡಿದ್ದೇನೆ ಎಂದರು.

ನಿರ್ದೇಶಕ ಶಶಿಧರ್ (M Shashidhar) ಮಾತನಾಡಿ, ನಿರ್ಮಾಪಕರು ಒಂದೊಳ್ಳೆ ಅವಕಾಶ ಕೊಟ್ಟಿದ್ದಾರೆ. ಸದುಪಯೋಗ ಮಾಡಿಕೊಂಡಿದ್ದೇನೆ. ಜನ‌ ಮೆಚ್ಚುವಂಥ ಸಿನಿಮಾ ಮಾಡಿದ್ದೇನೆ. ಚಿತ್ರದಲ್ಲಿ ನಾಯಕನಿಗೆ 3 ಗೆಟಪ್‌ಗಳಿವೆ. ಈ ಟ್ರೈಲರ್ ನೋಡಿದಾಗ ನಿಮಗೆಲ್ಲ ನಂಬಿಕೆ ಬಂದಿರುತ್ತೆ, ಸಿನಿಮಾ ಕೂಡ ಅದೇ ಥರ ಮಾಡಿದ್ದೇನೆ. ನೀವೆಲ್ಲ ಸಿನಿಮಾ ನೋಡಿ, ನನ್ನ ನಂಬರ್ ಕೊಡ್ತೀನಿ, ಚೆನ್ನಾಗಿದ್ರೆ, ಚೆನ್ನಾಗಿಲ್ಲ ಅಂದ್ರೂ ಕಾಲ್ ಮಾಡಿ ಎಂದರು.

ನಾಯಕ ಅರುಣ್ ಮಾತನಾಡಿ, ನನಗೆ ಡೈರೆಕ್ಟರ್ ಈ ಕಥೆ ಹೇಳಿದಾಗಲೇ ಕಾನ್ಫಿಡೆನ್ಸ್ ಬಂತು. ನನ್ನ ಪಾತ್ರ ತುಂಬಾ ವಿಭಿನ್ನವಾಗಿದ್ದು, ಇದಕ್ಕೆ ರೈಟರ್, ಅಂಡರ್‌ವರ್ಲ್ಡ್‌ ಹೀಗೆ ಹಲವಾರು ಶೇಡ್ಸ್ ಇದೆ. ಇದೊಂದು ಹಾರರ್, ಕ್ರೈಮ್ ಥ್ರಿಲ್ಲರ್ ಸಬ್ಜೆಕ್ಟ್. ನಾನು ಬಣ್ಣ ಹಚ್ಚುವ ಮೊದಲೇ ಕಲರಿಫೈಟ್ಸ್, ಆಕ್ಷನ್, ಡಾನ್ಸ್ ಎಲ್ಲವನ್ನೂ ಕಲಿತು ಬಂದಿದ್ದೇನೆ ಎಂದು ಹೇಳಿದರು.

‌ವೇದಿಕೆಯಲ್ಲಿ ಚಿತ್ರದ ಸಂಗೀತ ಸಂಯೋಜಕ, ಆರ್.ಪಿ.ಪಟ್ನಾಯಕ್ ತಾವೇ ಕಂಪೋಜ್ ಮಾಡಿದ ಹಾಡನ್ನು ಹಾಡಿದರು. ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಸೇರಿದಂತೆ ಸಾಕಷ್ಟು ಗಣ್ಯರು ಹಾಜರಿದ್ದರು. ಘಾರ್ಗಾ ಒಂದು ಅಡ್ವೆಂಚರಸ್ ಡ್ರಾಮಾ, ಹಾರರ್ ಚಿತ್ರವಾಗಿದ್ದು, ಅರುಣ್ ಒಬ್ಬ ರೈಟರ್, ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನ ಎನ್. ಕುಮಾರ್ ಅವರು ರಿಲೀಸ್ ಮಾಡುತ್ತಿದ್ದಾರೆ. ಹಾರರ್, ಸಸ್ಪೆನ್ಸ್, ಥಿಲ್ಲರ್, ಆಕ್ಷನ್ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿದ್ದು, ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಹಾಗೂ ಬೆಂಗಳೂರಲ್ಲಿ ಚಿತ್ರೀಕರಿಸಲಾಗಿದೆ.

Share This Article