ರಾಮಾಯಣ ಫಸ್ಟ್ ಗ್ಲಿಮ್ಸ್ ನೋಡಲು ತಯಾರಾಗಿ ಎಂದ ಯಶ್

Public TV
1 Min Read

ಕೊನೆಗೂ ರಾಮಾಯಣ (Ramayana) ಫಸ್ಟ್ ಗ್ಲಿಮ್ಸ್ ಅಫಿಷಿಯಲ್ ರಿಲೀಸ್‌ಗೆ ಕಾಲ ಕೂಡಿಬಂದಿದೆ. ಇದೇ ಜುಲೈ 3 ರಂದು ಯಶ್ (Yash) ನಟಿಸಿ ನಿರ್ಮಿಸುತ್ತಿರುವ ಮಹಾತ್ವಾಕಾಂಕ್ಷೆಯ ಪ್ರಾಜೆಕ್ಟ್ ರಾಮಾಯಣ ಚಿತ್ರದ ಅಫಿಷಿಯಲ್ ಟೈಟಲ್ ಲುಕ್ ರಿವೀಲ್ ಆಗಲಿದೆ.

ಒಂದ್ಕಡೆ ರಾಮಾಯಣ ಫಸ್ಟ್ ಗ್ಲಿಮ್ಸ್ ಬಿಡುಗಡೆಗೆ ಸಮಯ ನಿಗದಿಯಾದ್ರೆ ಅತ್ತ ಯಶ್ ಏಕಾಂಗಿಯಾಗಿ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸ್ಕೊಂಡಿದ್ದಾರೆ. ಕಾರಣ ಯಶ್ ಅಮೆರಿಕಾಗೆ ಪ್ರವಾಸಕ್ಕೆ ತೆರಳಿದ್ದಾರೆ. ಈಗಾಗ್ಲೇ ಯಶ್ ಕುಟುಂಬ ಅಮೆರಿಕಾ ತಲುಪಿದ್ದು, ಯಶ್ ಇದೀಗ ಮುಂಬೈನಿಂದ ಹೊರಟು ಕುಟುಂಬದೊಂದಿಗೆ ಸೇರಿಕೊಂಡಿದ್ದಾರೆ.

ಜುಲೈ 3 ರಂದು ಅಫಿಷಿಯಲ್ ಆಗಿ ರಿಲೀಸ್ ಆಗಲಿರುವ ರಾಮಾಯಣ ಫಸ್ಟ್ ಗ್ಲಿಮ್ಸ್ ಶೆಡ್ಯೂಲ್ ಮಾಡಿ ಮುಗಿಸಿ ಇದೀಗ ಯಶ್ ಯುಎಸ್ ತೆರಳಿದ್ದಾರೆ. ಮುಂಬೈನ ವಿಮಾನ ನಿಲ್ದಾಣದಲ್ಲಿ ಯಶ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸ್ಕೊಂಡ್ರು. ಹಲವು ದಿನ ಕುಟುಂಬದ ಜೊತೆ ಪ್ರವಾಸ ಮುಗಿಸಿ ವಾಪಸ್ಸಾಗಲಿದ್ದಾರೆ ಯಶ್.

ಟಾಕ್ಸಿಕ್ ಹಾಗೂ ರಾಮಾಯಣ, ಎರಡೂ ಚಿತ್ರಗಳ ನಿರ್ಮಾಣ ಹಾಗೂ ನಟನೆಯಲ್ಲಿ ಯಶ್ ಬ್ಯುಸಿ ಇದ್ದಾರೆ. ಹೀಗಾಗಿ ಟೈಟ್ ಶೆಡ್ಯೂಲ್ ಶೂಟಿಂಗ್ ಮುಗಿಸಿ ಇದೀಗ ಅಲ್ಪ ಸಮಯದಲ್ಲಿ ಪ್ರವಾಸಕ್ಕೆಂದು ಹೊರಟಿದ್ದಾರೆ ಯಶ್. ಅಂದಹಾಗೆ ಈಗ ರಿಲೀಸ್ ಆಗ್ತಿರುವ ಫಸ್ಟ್ ಗ್ಲಿಮ್ಸ್ ಇದು ರಾಮಾಯಣ ಚಿತ್ರದ ಅಫಿಷಿಯಲ್ ಫಸ್ಟ್ ಗ್ಲಿಮ್ಸ್ ಆಗಿರುತ್ತದೆ.

Share This Article