ಬಿಜೆಪಿ ರ‍್ಯಾಲಿಯಿಂದ ಟ್ರಾಫಿಕ್ ಜಾಮ್ – Get Out From Here ಎಂದು`ಮಹಾ’ ಸಚಿವರನ್ನೇ ತರಾಟೆಗೆ ತೆಗೆದುಕೊಂಡ ಮಹಿಳೆ

1 Min Read
ಮುಂಬೈ: ಬಿಜೆಪಿಯ ಪ್ರತಿಭಟನಾ ರ‍್ಯಾಲಿಯಿಂದ ಉಂಟಾದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಮಹಿಳೆ ಸಚಿವರಿಗೆ ತರಾಟೆ ತೆಗೆದುಕೊಂಡ ಘಟನೆ ಮುಂಬೈನ (Mumbai) ವರ್ಲಿ ಪ್ರದೇಶದಲ್ಲಿ ನಡೆದಿದೆ.

ಮಹಿಳಾ ಮೀಸಲಾತಿಗೆ ಲೋಕಸಭೆಯಲ್ಲಿ ಸೋಲಾಗಿದ್ದಕ್ಕೆ ವಿಪಕ್ಷಗಳ ವಿರುದ್ಧ ಮಹಾರಾಷ್ಟ್ರ (Maharashtra) ಬಿಜೆಪಿ (BJP) ಪ್ರತಿಭಟನೆ ಆಯೋಜಿಸಿತ್ತು. ಶಾಲೆಯಿಂದ ತನ್ನ ಮಗುವನ್ನು ಕರೆತರಲು ತೆರಳುತ್ತಿದ್ದ ಮಹಿಳೆಯೊಬ್ಬರು ಈ ಟ್ರಾಫಿಕ್ ಜಾಮ್‌ನಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡಿದ್ದರು. ಟ್ರಾಫಿಕ್‌ನಿಂದ ಬೇಸತ್ತ ಮಹಿಳೆ, ನೇರವಾಗಿ ವಾಹನದಿಂದ ಕೆಳಗಿಳಿದು ಪ್ರತಿಭಟನಾಕಾರರ ಮಧ್ಯೆ ನುಗ್ಗಿದ್ದಾರೆ. ಇದನ್ನೂ ಓದಿ: ತಮಿಳುನಾಡು, ಪಶ್ಚಿಮ ಬಂಗಾಳ ಚುನಾವಣೆ – 1,000 ಕೋಟಿ ಮೌಲ್ಯದ ವಸ್ತುಗಳು ಜಪ್ತಿ

- Advertisement -

- Advertisement -

ರಸ್ತೆ ಮಧ್ಯೆಯೇ ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್ (Girish Mahajan) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ಇಲ್ಲಿಂದ ಜಾಗ ಖಾಲಿ ಮಾಡಿ, ನಿಮ್ಮಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಕಿಡಿಕಾರಿದ್ದಾರೆ.

- Advertisement -

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆದ ಬಳಿಕ ಸಚಿವ ಗಿರೀಶ್ ಮಹಾಜನ್ ಕ್ಷಮೆ ಕೋರಿದ್ದಾರೆ. ನಮ್ಮಿಂದ ಸಾರ್ವಜನಿಕರಿಗೆ ಅಡಚಣೆ ಆಗಿದ್ದು ನಿಜ. ಆದರೆ ಆ ಮಹಿಳೆಯ ಪದಬಳಕೆ ಸರಿ ಇರಲಿಲ್ಲ. ಎಷ್ಟೇ ಸಮಾಧಾನಪಡಿಸಲು ಯತ್ನಿಸಿದರು ಅವರು ಕೋಪಗೊಂಡಿದ್ದರು ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ರೋಷಾವೇಶಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ನಾಳೆ ಮೊದಲ ಹಂತದ ಚುನಾವಣೆ

- Advertisement -

Share This Article