ಬೇಗ ಮದ್ವೆ ಆಗಿ, ನಾವು ಕಾಯ್ತಿದ್ದೇವೆ – ರಾಹುಲ್‌ ಗಾಂಧಿಗೆ ಅಂಗಡಿ ಮಾಲೀಕ ಮನವಿ

Public TV
2 Min Read
  • ದೀಪಾವಳಿಗೆ 235 ವರ್ಷ ಹಳೆಯ ದೆಹಲಿ ಬೇಕರಿಗೆ ವಿಪಕ್ಷ ನಾಯಕ ಭೇಟಿ

ನವದೆಹಲಿ: ದೇಶದೆಲ್ಲೆಡೆ ದೀಪಾವಳಿ (Deepavali) ಸಂಭ್ರಮ ಮನೆ ಮಾಡಿದೆ. ಇನ್ನೂ ಎರಡು ದಿನಗಳ ಕಾಲ ಪಟಾಕಿ ಸದ್ದು, ದೀಪಗಳ ಹೊಂಬೆಳಕು ಕಣ್ಣಿಗೆ ರಾಚುತ್ತಲೇ ಇರುತ್ತವೆ.

ದೀಪಾವಳಿ ಹಬ್ಬದ ಹಿನ್ನೆಲೆ ಇಂದು 235 ವರ್ಷ ಹಳೆಯ ದೆಹಲಿ ಬೇಕರಿಗೆ (Delhi Sweet Shop) ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಭೇಟಿ ನೀಡಿದ್ದರು. ಈ ವೇಳೆ ಅಂಗಡಿ ಮಾಲೀಕ ಸುಶಾಂತ್‌ ಜೈನ್‌, ರಾಹುಲ್‌ ಜಿ ಬೇಗ ಮದ್ವೆ ಆಗಿ, ನಿಮ್ಮ ಮದ್ವೆಗೆ ಸಿಹಿ ತಿಂಡಿ ಆರ್ಡರ್‌ ಪಡೆಯಲು ನಾವು ಕಾಯ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು – 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಆರ್‌ಜೆಡಿ

ಈ ಕುರಿತು ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಸುಶಾಂತ್‌ ಜೈನ್‌ (Sushant Jain), ರಾಹುಲ್‌ ಗಾಂಧಿ ಅವರು ಅತ್ಯಂತ ಅರ್ಹ ಬ್ರಹ್ಮಚಾರಿ. ತಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಸಿಹಿತಿಂಡಿಗಳನ್ನ ಖರೀದಿಸಲು ಬಂದಿದ್ದರು. ನಾನು ಸರ್‌ ಇದು ನಿಮ್ಮ ಸ್ವಂತ ಅಂಗಡಿ ಸ್ವಾಗತ ಎಂದು ಹೇಳಿದ್ದಾಗಿ ತಿಳಿಸಿದರು. ಇದನ್ನೂ ಓದಿ: ಐಎನ್‌ಎಸ್‌ ವಿಕ್ರಾಂತ್‌ ಪಾಕ್‌ಗೆ ನಿದ್ರೆಯಿಲ್ಲದಂತೆ ಮಾಡಿತು, ಬ್ರಹ್ಮೋಸ್‌ ತನ್ನ ಸಾಮರ್ಥ್ಯ ತೋರಿತು – ನರೇಂದ್ರ ಮೋದಿ

ರಾಹುಲ್‌ ಜಿ ಬಂದಾಗ ತಿಂಡಿಗಳನ್ನು ತಾವೇ ತಯಾರಿಸೋದಾಗಿ ಮತ್ತು ಅವುಗಳ ರುಚಿ ನೋಡುವುದಾಗಿ ಹೇಳಿದ್ರು. ಆಗ ʻಸರ್‌ ರಾಜೀವ್‌ ಗಾಂಧಿ ಅವರು ಇಮಾರ್ತಿ (ಜಹಾಂಗಿರ್‌) ಹಾಗೂ ಬೇಸನ್‌ ಲಡ್ಡುಗಳನ್ನು ಇಷ್ಟಪಡುತ್ತಿದ್ದರು. ಅವುಗಳನ್ನ ತಯಾರಿಸಬಹುದು ಎಂದು ಹೇಳಿದೆ. ಅವರೇ ಖುದ್ದು ತಯಾರಿಸಿ ರುಚಿ ನೋಡಿದ್ರು ಎಂದು ಹೇಳಿದರು.

ಇಂದು ಇಡೀ ದೇಶವೇ ಅತ್ಯಂತ ಅರ್ಹ ಬ್ರಹ್ಮಚಾರಿ ಎಂದು ಮಾತನಾಡುತ್ತಿದೆ. ಹಾಗಾಗಿ ನಾನು ರಾಹುಲ್‌ ಜಿಗೆ ಹೇಳಿದೆ. ದಯವಿಟ್ಟು ಬೇಗ ಮದ್ವೆ ಆಗಿ, ನಿಮ್ಮ ಮದ್ವೆಯ ಸಿಹಿತಿಂಡಿಗಳ ಆರ್ಡರ್‌ಗಾಗಿ ನಾವು ಕಾಯ್ತಿದ್ದೇವೆ ಎಂದು ಮನವಿ ಮಾಡಿಕೊಂಡೆ ಎಂದು ಹೇಳಿದರು. ಇದನ್ನೂ ಓದಿ: ಬೆಳಕಿನ ಹಬ್ಬ ಎಲ್ಲರ ಜೀವನವನ್ನು ಸಾಮರಸ್ಯ, ಸಂತೋಷ, ಸಮೃದ್ಧಿಯಿಂದ ಬೆಳಗಲಿ – ದೀಪಾವಳಿಗೆ ಮೋದಿ ವಿಶ್

Share This Article