ಡೈನಾಮಿಕ್ ಪ್ರಿನ್ಸ್ ಗೆ ಸರ್ಪ್ರೈಸ್ ಕೊಟ್ಟ ಜಂಟಲ್‍ಮನ್!

Public TV
1 Min Read

ಬೆಂಗಳೂರು: ಪ್ರಜ್ವಲ್ ದೇವರಾಜ್ ಪಾಲಿಗೆ ಈ ಹುಟ್ಟುಹಬ್ಬ ನಿಜಕ್ಕೂ ಸ್ಪೆಷಲ್. ಜೊತೆ ಜೊತೆಗೇ ಮೂರ್ನಾಲಕ್ಕು ಚಿತ್ರಗಳನ್ನು ಒಪ್ಪಿಕೊಂಡಿರೋ ಪ್ರಜ್ವಲ್‍ಗೆ ಆ ಚಿತ್ರ ತಂಡಗಳ ಕಡೆಯಿಂದ ಸರ್ಪ್ರೈಸ್ ಕೊಡುಗೆಗಳೇ ಸಿಗುತ್ತಿವೆ. ಅದೇ ರೀತಿ ಅವರು ನಟಿಸುತ್ತಿರೋ ಜಂಟಲ್‍ಮನ್ ಚಿತ್ರತಂಡವೂ ಟೀಸರ್ ಲಾಂಚ್ ಮಾಡೋ ಮೂಲಕ ಸರ್ಪ್ರೈಸ್ ಕೊಟ್ಟಿದೆ.

ಈ ಹಿಂದೆ ರಾಜಹಂಸ ಚಿತ್ರ ನಿರ್ದೇಶನ ಮಾಡಿದ್ದ ಜಡೇಶ್ ಕುಮಾರ್ ಹಂಪಿ ಜಂಟಲ್‍ಮನ್ ಚಿತ್ರವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಗುರುದೇಶಪಾಂಡೆ ನಿರ್ಮಾಣ ಮಾಡುತ್ತಿದ್ದಾರೆ. ರಾಜಾಹುಲಿಯಂಥಾ ಸೂಪರ್ ಹಿಟ್ ಸಿನಿಮಾಗಳ ಮೂಲಕ ಯಶಸ್ವಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ಗುರು ದೇಶಪಾಂಡೆ. ಅವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಹೊರ ಹೊಮ್ಮಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಸರ್ಕಾರಿ ಶಾಲೆ ದತ್ತು ಪಡೆದ ಪ್ರಜ್ವಲ್ – ನಟ ದರ್ಶನ್ ಮೆಚ್ಚುಗೆ

ಜಂಟಲ್‍ಮನ್ ಟೀಸರ್ ಅಂತೂ ಅದ್ಧೂರಿಯಾಗಿಯೇ ಮೂಡಿ ಬಂದಿದೆ. ಒಂದು ಅಪರೂಪದ ಕಾಯಿಲೆಯ ಹಿನ್ನೆಲೆಯಲ್ಲಿ ಮಾಸ್ ಕಥೆ ಹೇಳ ಹೊರಟಿರೋ ವಿಚಾರವನ್ನೂ ಈ ಟೀಸರ್ ಮೂಲಕವೇ ಚಿತ್ರತಂಡ ಜಾಹೀರು ಮಾಡಿದಂತಿದೆ. ಇಲ್ಲಿ ಪ್ರಜ್ವಲ್ ದೇವರಾಜ್ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಕಾಯಿಲೆಯಿರೋ ವ್ಯಕ್ತಿಯಾಗಿ ನಟಿಸಿದ್ದಾರೆ. ಇದು ಜಗತ್ತಿನಲ್ಲಿ ಕೆಲವರಿಗೆ ಮಾತ್ರವೇ ಇರೋ ಕಾಯಿಲೆ. ಸಿಕ್ಕ ಜಾಗದಲ್ಲಿಯೇ ಹದಿನೆಂಟು ಗಂಟೆ ಕುಂಭಕರ್ಣನಂಥಾ ನಿದ್ರೆ ಮಾಡಿ ಬಿಡುವ ನಾಯಕ ದಿನದ ಆರು ಘಂಟೆ ಮಾತ್ರ ಆಕ್ಟೀವ್ ಆಗಿರುತ್ತಾನೆ.

ಈ ಆರು ಘಂಟೆಯ ಅವಧಿಯಲ್ಲಿ ಪ್ರೀತಿಯನ್ನು ಬೆರೆಸಿಕೊಂಡ ಮಾಸ್ ಕಥೆಯೊಂದು ಘಟಿಸುತ್ತೆ. ಅದರ ಸುತ್ತಲೇ ಈ ಕಥೆ ಚಲಿಸುತ್ತದೆ. ಇಂಥಾದ್ದೊಂದು ಅಪರೂಪದ ಕಥೆಯೊಂದಿಗೆ ನಿರ್ದೇಶಕರ ಜಡೇಶ್ ಕುಮಾರ್ ಹಂಪಿ ಮತ್ತೆ ಮರಳಿದ್ದಾರೆ. ಗುರುದೇಶಪಾಂಡೆ ಈ ಮೂಲಕವೇ ನಿರ್ಮಾಪಕರಾಗಿಯೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿರೋ ಈ ಚಿತ್ರದ ತಾರಾಗಣ, ತಾಂತ್ರಿಕ ವಿವರಗಳು ಸೇರಿದಂತೆ ಇನ್ನಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಚಿತ್ರತಂಡ ಇಷ್ಟರಲ್ಲಿಯೇ ಪ್ರೇಕ್ಷಕರ ಮುಂದಿಡಲಿದೆ.

Share This Article
Leave a Comment

Leave a Reply

Your email address will not be published. Required fields are marked *