ಡೈನಾಮಿಕ್ ಪ್ರಿನ್ಸ್ ‘ಜಂಟಲ್ ಮ್ಯಾನ್’ ಅವತಾರಕ್ಕೆ ಪ್ರೇಕ್ಷಕ ಫಿದಾ- ಕಥೆಯ ಫ್ರೆಶ್‍ನೆಸ್ ಚಿತ್ರದ ಹೈಲೈಟ್

Public TV
2 Min Read

ಡೈನಾಮಿಕ್ ಪ್ರಿನ್ ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು ಅಭಿನಯದ ‘ಜಂಟಲ್‍ಮ್ಯಾನ್’ ಚಿತ್ರ ಸಖತ್ ಕ್ರೇಜ್ ಕ್ರಿಯೇಟ್ ಮಾಡಿತ್ತು. ಸಾಕಷ್ಟು ನಿರೀಕ್ಷೆಯನ್ನು ಚಿತ್ರ ಹುಟ್ಟುಹಾಕಿತ್ತು. ಇಂದು ಬಹು ನಿರೀಕ್ಷಿತ ಚಿತ್ರ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಂಡಿದೆ.

ಹೊಸತನದ ಪ್ರಯತ್ನಗಳಿಗೆ ಕನ್ನಡ ಸಿನಿ ಪ್ರೇಕ್ಷಕ ಯಾವಾಗಲೂ ಫುಲ್ ಮಾರ್ಕ್ಸ್ ನೀಡುತ್ತಾನೆ ಅನ್ನೋದಕ್ಕೆ ಮತ್ತೊಂದು ಎಕ್ಸಾಂಪಲ್ ‘ಜಂಟಲ್‍ಮ್ಯಾನ್’ ಚಿತ್ರ. ಚಿತ್ರದ ಕಥೆಯಲ್ಲಿರೋ ಪ್ರೆಶ್‍ನೆಸ್ ಹಾಗೂ ಅದನ್ನು ತೆರೆ ಮೇಲೆ ಪ್ರಸ್ತುತ ಪಡಿಸಿರೋ ರೀತಿಗೆ ಪ್ರೇಕ್ಷಕ ಪ್ರಭು ಫಿದಾ ಆಗಿದ್ದಾನೆ.

‘ಜಂಟಲ್‍ಮ್ಯಾನ್’ ಚಿತ್ರದಲ್ಲಿ ಸಿನಿರಸಿಕರಿಗೆ ಬೇಕಾದ ಎಲ್ಲಾ ಎಲಿಮೆಂಟ್‍ಗಳು ಸಮಾನವಾಗಿ ದೊರೆತಿದೆ. ಕಥೆ ಹಾಗೂ ಎಲ್ಲೂ ಬೋರ್ ಹೊಡಿಸದ ಸ್ಕ್ರೀನ್ ಪ್ಲೇ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಪ್ರಮುಖ ಪಾತ್ರವಹಿಸಿದೆ.

ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್‍ನಿಂದ ಬಳಲೋ ನಾಯಕ ಭರತ್ ದಿನದ ಹದಿನೆಂಟು ಗಂಟೆ ಮಲಗಿಯೇ ಇರುತ್ತಾನೆ. ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಅನ್ನೋ ಅರಿವು ಆತನಿಗೆ ಇರೋದಿಲ್ಲ. ಇದರ ನಡುವೆ ಕಳೆದು ಹೋದ ಅಣ್ಣನ ಮಗಳನ್ನು ಹುಡುಕೋ ಜವಾಬ್ದಾರಿ, ಜೊತೆಗೆ ಪ್ರೀತಿಸಿದವಳನ್ನು ಕಾಪಾಡಿಕೊಳ್ಳೋ ಜವಾಬ್ದಾರಿ. ಪ್ರತಿಬಾರಿ ಈ ಜವಾಬ್ದಾರಿ ನಿರ್ವಹಿಸುವಾಗ ಎದುರಾಗೋ ನಿದ್ರೆ ಏನೆಲ್ಲ ಸಮಸ್ಯೆ ಉಂಟುಮಾಡುತ್ತೆ. ಇದನ್ನೆಲ್ಲ ಮೀರಿ ಭರತ್ ಎಲ್ಲರನ್ನು ಕಾಪಾಡುತ್ತಾನಾ? ಎನ್ನುವುದು ಜಂಟಲ್ ಮ್ಯಾನ್ಸ್ ಸ್ಟೋರಿ ಲೈನ್.

ಇದನ್ನು ತೆರೆ ಮೇಲೆ ಪ್ರೇಕ್ಷಕರನ್ನು ಹಿಡಿದಿಡುವಂತೆ ಕಟ್ಟಿಕೊಟ್ಟಿದ್ದಾರೆ. ಪ್ರತಿ ಹಂತದಲ್ಲೂ ಕುತೂಹಲ ಹುಟ್ಟಿಸಿರೋ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. `ಜಂಟಲ್‍ಮ್ಯಾನ್’ ಚಿತ್ರ ಪ್ರಜ್ವಲ್ ಸಿನಿ ಕರಿಯರ್‍ಗೆ ದೊಡ್ಡ ಬ್ರೇಕ್ ನೀಡುವುದರಲ್ಲಿ ಡೌಟೇ ಇಲ್ಲ. ಅಷ್ಟರ ಮಟ್ಟಿಗೆ ತೆರೆ ಮೇಲೆ ಅಭಿನಯ ಮಾಡಿದ್ದಾರೆ ಪ್ರಜ್ವಲ್ ದೇವರಾಜ್.

ಸಂಚಾರಿ ವಿಜಯ್ ನಟನೆ ಬಗ್ಗೆ ಎರಡು ಮಾತಿಲ್ಲ. ನಿಶ್ವಿಕಾ ನಾಯ್ಡು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದು, ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದ ಸಂಗೀತ, ಎಲ್ಲಾ ಪಾತ್ರವರ್ಗ ಚಿತ್ರದ ಕಥೆಗೆ ಪೂರಕವಾಗಿ ಮೂಡಿ ಬಂದಿದೆ.

ಚಿತ್ರ: ಜಂಟಲ್‍ಮ್ಯಾನ್
ನಿರ್ದೇಶನ: ಜಡೇಶ್ ಕುಮಾರ್
ನಿರ್ಮಾಪಕ: ಗುರುದೇಶಪಾಂಡೆ
ಸಂಗೀತ: ಅಜನೀಶ್ ಲೋಕನಾಥ್
ಛಾಯಾಗ್ರಹಣ: ಸುಧಾಕರ್ ಶೆಟ್ಟಿ
ತಾರಾಬಳಗ: ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಸಂಚಾರಿ ವಿಜಯ್, ಆರಾಧ್ಯ, ಇತರರು.

Rating: 4/5

Share This Article
Leave a Comment

Leave a Reply

Your email address will not be published. Required fields are marked *