‘ಗೀತಾ ಗೋವಿಂದಂ’ ಸಿನಿಮಾ 5 ವರ್ಷ ಪೂರೈಸಿದ ಖುಷಿಯಲ್ಲಿ ವಿಜಯ್, ರಶ್ಮಿಕಾ: ‘ಪಾರ್ಟ್‌ 2’ಗೆ ಸಿದ್ಧತೆ?

Public TV
1 Min Read

ಟಾಲಿವುಡ್‌ನ (Tollywood) ಆನ್ ಸ್ಕ್ರೀನ್ ಬೆಸ್ಟ್ ಜೋಡಿ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಇದೀಗ ‘ಗೀತಾ ಗೋವಿಂದಂ’ ಸಿನಿಮಾ 5 ವರ್ಷ ಪೂರೈಸಿದ ಸಂತಸದಲ್ಲಿದ್ದಾರೆ. ಇದೇ ಖುಷಿಯಲ್ಲಿ ಚಿತ್ರದ ನಿರ್ದೇಶಕ ಪರಶುರಾಮ್ ಜೊತೆ ವಿಜಯ್-ರಶ್ಮಿಕಾ(Rashmika Mandanna) ಕ್ಯಾಮೆರಾಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ಇಬ್ಬರ ಫೋಟೋ ವೈರಲ್‌ ಆಗಿರೋ ಬೆನ್ನಲ್ಲೇ ಗೀತಾ ಗೋವಿಂದಂ ‘ಪಾರ್ಟ್‌ 2’ಗೆ ಸಿದ್ಧತೆ ಮಡುತ್ತಿದ್ದಾರಾ? ಎಂಬ ಸುದ್ದಿ ಈಗ ಸದ್ದು ಮಾಡ್ತಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರುತ್ತ, ಗೀತಾ ಗೋವಿಂದಂ ಚಿತ್ರಕ್ಕೆ 5 ವರ್ಷ ಪೂರೈಸಿರುವ ಬಗ್ಗೆ ನಟಿ ರಶ್ಮಿಕಾ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. 5 ವರ್ಷ ಅಂತಾ ಕೈಯಲ್ಲಿ ಸಿಂಬಲ್ ತೋರಿಸುವ ಮೂಲಕ ನಿರ್ದೇಶಕ ಪರಶುರಾಮ್, ವಿಜಯ್, ರಶ್ಮಿಕಾ ಜೊತೆಯಾಗಿ ಫೋಟೋ ಕ್ಲಿಕ್ಕಿಸಿದ್ದಾರೆ. ಇದನ್ನೂ ಓದಿ:ಆಗಸ್ಟ್ 16ರಂದು ಸ್ಪಂದನಾ ಉತ್ತರಕ್ರಿಯೆ- ನಾಳೆಗೆ ಸಿದ್ಧತೆ ಹೇಗಿದೆ?

ವಿಜಯ್- ರಶ್ಮಿಕಾ ಮಂದಣ್ಣ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಟ್ಟಂತಹ ಸಿನಿಮಾ ಅಂದರೆ ಗೀತಾ ಗೋವಿಂದಂ. ಚಿತ್ರ ಕಥೆ, ಸಾಂಗ್ಸ್, ಗೀತಾ ಗೋವಿಂದನ ಪ್ರಣಯ ಪ್ರಸಂಗ ಎಲ್ಲವೂ ಸಿನಿಮಾದಲ್ಲಿ ಕಮಾಲ್ ಮಾಡಿತ್ತು. ಅಂದು ಈ ಹೊಸ ಜೋಡಿ, ಸೆನ್ಸೇಷನ್ ಕ್ರಿಯೆಟ್ ಮಾಡಿತ್ತು. ಇದೀಗ ಹಿಸ್ಟರಿ ಕ್ರಿಯೇಟ್ ಮಾಡಿದ ಈ ಚಿತ್ರಕ್ಕೆ 5 ವರ್ಷ ತುಂಬಿದೆ.

ನಿರ್ದೇಶಕರು ಮತ್ತೆ ವಿಜಯ್(Vijay Devarakonda)- ರಶ್ಮಿಕಾ ಮತ್ತೆ ಒಟ್ಟಾಗಿರೋದು ನೋಡಿ, ಈ ಮೂವರಿಂದ ಮತ್ತೆ ಸಿನಿಮಾ ಬರಬಹುದಾ ಅಂತಾ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಕೆಲ ದಿನಗಳಿಂದ ವಿಜಯ್- ರಶ್ಮಿಕಾ ಒಟ್ಟಿಗೆ ನಟಿಸುತ್ತಾರೆ ಎಂಬ ಸುದ್ದಿಯಿದೆ. ಈಗ ಮತ್ತೆ ಭೇಟಿಯಾಗಿರೋದನ್ನ ನೋಡಿ ಗೀತಾ ಗೋವಿಂದಂ ಪಾರ್ಟ್‌ 2ಗೆ ಸೂಚನೆನಾ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಈ ಬಗ್ಗೆ ಪ್ಲ್ಯಾನ್ ನಡೆಯುತ್ತಿದ್ಯಾ ಎಂದು ಚಿತ್ರತಂಡ ಹೇಳುವವರೆಗೂ ಕಾಯಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್