GDP: ಜುಲೈ-ಸೆಪ್ಟೆಂಬರ್‌ 2ನೇ ತ್ರೈಮಾಸಿಕದಲ್ಲಿ ಶೇ. 8.4ರಷ್ಟು ಬೆಳವಣಿಗೆ

Public TV
1 Min Read

ನವದೆಹಲಿ: 2021-22ರ ಆರ್ಥಿಕ ವರ್ಷದ ಜುಲೈ-ಸೆಪ್ಟೆಂಬರ್‌ ಎರಡನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ. 8.4 ರಷ್ಟು ಬೆಳವಣಿಗೆ ಸಾಧಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಭಾರತ ಶೇ. 7.4 ರಷ್ಟು ಜಿಡಿಪಿ ದಾಖಲಿಸಿತ್ತು. ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಬೆಳವಣಿಗೆ ಕೊಂಚ ಕ್ಷೀಣಿಸಿತ್ತು. ಈಗ ಧನಾತ್ಮಕ ರೀತಿಯಲ್ಲಿ ಬೆಳವಣಿಗೆಯತ್ತ ಸಾಗಿದೆ ಎಂಬುದನ್ನು ಅಂಕಿ ಅಂಶದಿಂದ ತಿಳಿಯಬಹುದು. ಇದನ್ನೂ ಓದಿ: ಮಧ್ಯವರ್ತಿಗಳಿಗೆ ಅವಕಾಶವಿಲ್ಲ, ನೇರವಾಗಿ ರೈತರ ಖಾತೆಗಳಿಗೆ ಬೆಳೆ ಪರಿಹಾರ- ಅಶೋಕ್

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯ ವೇಗವು ಮುಖ್ಯವಾಗಿ ಕೃಷಿ, ಗಣಿಗಾರಿಕೆ, ಉತ್ಪಾದನೆ, ವಿದ್ಯುತ್‌ ಮತ್ತು ನೀರು ಸರಬರಾಜು, ಸಾರಿಗೆ, ಸಂವಹನ ಮತ್ತು ರಿಯಲ್‌ ಎಸ್ಟೇಟ್‌ನಂತರ ಪ್ರಮುಖ ಕ್ಷೇತ್ರಗಳಲ್ಲಿ ಕಂಡುಬಂದ ಸಕಾರಾತ್ಮಕ ಬೆಳವಣಿಗೆಯಿಂದಾಗಿದೆ.

ತ್ರೈಮಾಸಿಕದಲ್ಲಿ ದೇಶದ ಉತ್ಪಾದನಾ ವಲಯ ಶೇ. 5.5ರಷ್ಟು ಹೆಚ್ಚಿದ್ದರೆ, ನಿರ್ಮಾಣ ವಿಭಾಗ ಶೇ. 7.5 ರಷ್ಟು ಬೆಳವಣಿಗೆ ಕಂಡಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಕಂಗನಾ ರಣಾವತ್‌ಗೆ ಕೊಲೆ ಬೆದರಿಕೆ- ಯಾವ ಬೆದರಿಕೆಗಳಿಗೂ ಅಂಜುವುದಿಲ್ಲ ಎಂದ ನಟಿ

ಕೋವಿಡ್‌ ಲಾಕ್‌ಡೌನ್‌ ತೆರವಾದ ನಂತರ ಭಾರತದ ಆರ್ಥಿಕತೆ ಪುನಶ್ಚೇತನ ಕಂಡಿದೆ. ಇದು ಆರ್ಥಿಕ ವಲಯದಲ್ಲಿ ಧನಾತ್ಮಕ ಬೆಳವಣಿಗೆಯಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *