– ಜಿಬಿಎಯಿಂದ ಹೊಸ ಸಾಫ್ಟ್ವೇರ್ ತಯಾರು
ಬೆಂಗಳೂರು: ಇಲ್ಲಿನ ನಗರವಾಸಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಗುಡ್ನ್ಯೂಸ್ ಕೊಟ್ಟಿದೆ. ಬಿ – ಖಾತಾಗಳಿಗೆ ಎ-ಖಾತಾ ಮಾನ್ಯತೆ ನೀಡಲು ಜಿಬಿಎ ಹೊಸದೊಂದು ಸಾಫ್ಟ್ವೇರ್ ಸಿದ್ಧಪಡಿಸಿದೆ. ಈಗಾಗಲೇ ಸಾಫ್ಟ್ವೇರ್ ನಿರ್ಮಿಸುವ ಕಾರ್ಯ ಸಂಪೂರ್ಣ ಮುಕ್ತಾಯ ಆಗಿದೆ. ಇನ್ನು ಹೊಸ ತಂತ್ರಜ್ಞಾನದ ಆಪ್ ಸಿದ್ಧಪಡಿಸಿರುವುದನ್ನು ಲೋಕಾರ್ಪಣೆ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಅಂಗಳಕ್ಕೆ ತಲುಪಿದೆ. ಡಿಸಿಎಂ ಒಪ್ಪಿಗೆ ಕೊಟ್ಟ ಬಳಿಕ ಎ – ಖಾತಾ (A Khata) ವಿತರಣೆ ಆಗಲಿದೆ. ಎ ಖಾತಾ ವಿತರಣೆಗೆ ಸಣ್ಣಪುಟ್ಟ ಕೆಲಸ ಅಷ್ಟೇ ಬಾಕಿ ಶೀಘ್ರದಲ್ಲೇ ಎ ಖಾತಾ ವಿತರಣೆ ಆಗಲಿದೆ.
ಬೆಂಗಳೂರಿನ (Bengaluru) ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿತ್ತು. ಇದರ ಬೆನ್ನಲ್ಲೇ ನಗರದ ಎಲ್ಲಾ ಬಿ ಖಾತಾಗಳಿಗೆ ಎ ಖಾತಾ ಮಾನ್ಯತೆ ನೀಡಲು ಕಳೆದ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ನಗರದಲ್ಲಿರುವ ಅಕ್ರಮ ಮತ್ತು ಅನಿಯಂತ್ರಿತ ಕಟ್ಟಡ ಮತ್ತು ವಿನ್ಯಾಸಗಳನ್ನು ನಿಯಂತ್ರಿಸಲು ಈ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. ಆದ್ರೆ ಆದೇಶ ಆಗಿ ಒಂದು ತಿಂಗಳು ಸಮೀಪಿಸುತ್ತಾ ಇದ್ದರೂ ಎ-ಖಾತಾ ವಿತರಣೆ ಆಗಿರಲಿಲ್ಲ. ಹೀಗಾಗಿ ಜಿಬಿಎಯಿಂದ ಹೊಸ ಸಾಫ್ಟ್ವೇರ್ ಸಿದ್ಧಪಡಿಸುತ್ತಾ ಇದ್ದರು. ಈಗ ಹೊಸ ಸಾಫ್ಟ್ವೇರ್ ಸಿದ್ಧಪಡಿಸುವ ಕಾರ್ಯಮುಕ್ತಾಯ ಆಗಿದ್ದು. ಗ್ರೀನ್ ಸಿಗ್ನಲ್ಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಅಂಗಳಕ್ಕೆ ರವಾನೆ ಆಗಲಿದೆ. ಇದನ್ನೂ ಓದಿ: ಗಣಪತಿ ಆತ್ಮಹತ್ಯೆ ಕೇಸ್ ನ್ಯಾ.ಕೆ.ಎನ್.ಕೇಶವ ನಾರಾಯಣ ಸಲ್ಲಿಸಿದ್ದ ವರದಿ ರಿಜೆಕ್ಟ್- ಕ್ಯಾಬಿನೆಟ್ನಲ್ಲಿ ಕೈಗೊಂಡ ತೀರ್ಮಾನಗಳು ಏನು?
ಕ್ರಮಬದ್ಧವಲ್ಲದ ನಿವೇಶನ ಅಥವಾ ಆಸ್ತಿಗಳಿಗೆ ಬಿಬಿಎಂಪಿಯಿಂದ 2009ರಿಂದ ಈಚೆಗೆ ಬಿ ಖಾತಾವನ್ನು ನೀಡಲಾಗಿತ್ತು, ಬಿ-ಖಾತಾ ನೀಡುವ ಪ್ರಕ್ರಿಯೆಯನ್ನು 2024 ರಂದು ಸ್ಥಗಿತಗೊಳಿಸಲಾಗಿತ್ತು, ಹೀಗಾಗಿ ಈ ನಡುವಿನ ಬಿಖಾತಾ ಆಸ್ತಿ ಸಮಸ್ಯೆ ಬಗೆಹರಿಸಲು ಈ ನಿರ್ಧಾರವನ್ನು ಮಾಡಲಾಗಿದೆ, ಇನ್ನು ಜಿಬಿಎಯಿಂದ ಹೊಸ ಸಾಫ್ಟ್ವೇರ್ ಸಿದ್ಧಪಡಿಸಿದ್ದು ಖಾತಾದಾರರೇ ಅಪ್ಲೈ ಮಾಡಿ ಹಣ ಪಾವತಿ ಮಾಡುವ ವ್ಯವಸ್ಥೆ ಇರಲಿದೆ. ಜೊತೆಗೆ ಸೈಟ್, ಕಟ್ಟಡ ಮಾಹಿತಿಯನ್ನ ಒಳಗೊಂಡ ಅಂಶವನ್ನ ಕೂಡ ಉಲ್ಲೇಖ ಮಾಡಿ ಎ-ಖಾತಾಗೆ ಅಪ್ಲೈ ಮಾಡಬೇಕಾಗುತ್ತೆ. ಒಂದಷ್ಟು ಅಂಶಗಳನ್ನ ಒಳಗೊಂಡಂತಹ ಸಾಫ್ಟ್ವೇರ್ ಸಿದ್ಧವಾಗಿದ್ದು ಸಾಫ್ಟ್ವೇರ್ ಸಿದ್ಧವಾದ ಬಳಿಕ ಮುಂದಿನ ತಿಂಗಳು ಎ-ಖಾತಾ ವಿತರಣೆ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಸಮೀಕ್ಷೆಯಿಂದ ವಿದ್ಯುತ್ ಬಿಲ್ ವ್ಯತ್ಯಯವಾಗದು, ಗೃಹಜ್ಯೋತಿ ಫಲಾನುಭವಿಗಳಿಗೆ ತೊಂದರೆ ಇಲ್ಲ: ಬೆಸ್ಕಾಂ
ಹೊಸ ಸಾಫ್ಟ್ವೇರ್ ಜೊತೆಗೆ ಒಂದಷ್ಟು ಮಾರ್ಗಸೂಚಿಗಳು ಎ-ಖಾತಾ ಪಡೆಯಲು ಜಾರಿಯಾಗಲಿವೆ. ಈ ಮೂಲಕ ಬಿ-ಖಾತಾಗಳಿದ್ದ ಬಿಬಿಎಂಪಿ ನಕ್ಷೆ ಅನುಮೋದನೆ ಓಸಿ ಹಾಗೂ ಸಿಸಿ ಸಮಸ್ಯೆಗೆ ಮುಕ್ತಿ ನೀಡಲು ಸರ್ಕಾರ ಮುಂದಾಗಿದೆ. ಇನ್ನು ಎ ಖಾತಾ ನೀಡಲು ಮಾರ್ಗಸೂಚಿ ಹೇಗಿರಲಿದೆ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ವಿಪ್ರೋ ಕ್ಯಾಂಪಸ್ನಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲ್ಲ- ಸಿಎಂ ಮನವಿಯನ್ನು ತಿರಸ್ಕರಿಸಿದ ಅಜೀಂ ಪ್ರೇಮ್ಜಿ