ಬೆಂಗಳೂರು| ರೋಡ್ ಸೈಡ್ ಪಾರ್ಕಿಂಗ್‌ಗೆ ಕಟ್ಟಬೇಕು ಕಾಸು – ಜಿಬಿಎ ಪೇ & ಪಾರ್ಕಿಂಗ್ ರೂಲ್ಸ್ ಶೀಘ್ರ ಜಾರಿ?

1 Min Read

ಬೆಂಗಳೂರು: ಸಿಲಿಕಾನ್‌ ಸಿಟಿ ಜನರಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಶೀಘ್ರದಲ್ಲೇ ಸ್ಟ್ರೀಟ್‌ ಪಾರ್ಕಿಂಗ್‌ ನಿಯಮ (Parking Rules) ಜಾರಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಮುಂದಾಗಿದೆ.

ಬೆಂಗಳೂರಿನಲ್ಲಿ (Bengaluru) ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್‌ ಮಾಡುವುದಕ್ಕೂ ಕಾಸು ಕೊಡಬೇಕಾಗುತ್ತದೆ. ಸದ್ಯ ಪ್ರಾಯೋಗಿಕವಾಗಿ ಸ್ಟ್ರೀಟ್‌ನಲ್ಲಿ ಪೇ & ಪಾರ್ಕಿಂಗ್ ರೂಲ್ಸ್ ಜಾರಿಗೆ ತರಲು ಜಿಬಿಎ ಸಿದ್ಧತೆ ನಡೆಸಿದೆ. ಇದನ್ನೂ ಓದಿ: ನನಗೆ ಜೀವ ಬೆದರಿಕೆ ಇದೆ, Z ಶ್ರೇಣಿ ಭದ್ರತೆ ಕೊಡಿ: ಅಮಿತ್ ಶಾ, ಸಿದ್ದರಾಮಯ್ಯಗೆ ಜನಾರ್ದನ ರೆಡ್ಡಿ ಪತ್ರ

ಎಲ್ಲೆಲ್ಲಿ ಆರಂಭ?
ಹೆಬ್ಬಾಳ, ಕಮರ್ಷಿಯಲ್ ಸ್ಟ್ರೀಟ್, ಯಲಹಂಕದಲ್ಲಿ ಜಾರಿಗೆ ಸಜ್ಜು.

ಸ್ಟ್ರೀಟ್ ಪಾರ್ಕಿಂಗ್ ದರ ಎಷ್ಟು‌?
1 ಗಂಟೆಗೆ ಫೋರ್ ವ್ಹೀಲರ್‌ಗೆ – 30 ರೂ.
ದಿನಕ್ಕೆ – 150 ರೂ.
ತಿಂಗಳ ಪಾಸ್ ವ್ಯವಸ್ಥೆ – 3,000 ರೂ.

ದ್ವಿಚಕ್ರ ವಾಹನಕ್ಕೆ 1 ಗಂಟೆಗೆ – 15 ರೂ.
ದಿನಕ್ಕೆ – 75 ರೂ.
ತಿಂಗಳಿಗೆ – 1,500 ರೂ.

ಸದ್ಯ 35 ರಸ್ತೆಯಲ್ಲಿ ಪೇ & ಪಾರ್ಕ್ ಪ್ಲ್ಯಾನ್ ರೂಪಿತವಾಗಿದ್ದು, 16 ಕೋಟಿ ಆದಾಯದ ನಿರೀಕ್ಷೆಯಲ್ಲಿ ಜಿಬಿಎ ಇದೆ.

Share This Article