ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸದ ಬೆಂಗಳೂರಿನ 14 ಪಿಜಿಗಳಿಗೆ ಬೀಗ ಜಡಿದ ಜಿಬಿಎ

Public TV
3 Min Read

ಬೆಂಗಳೂರು: ವಸತಿ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ವಾಣಿಜ್ಯ/ವಸತಿಯೇತರ ಚಟುವಟಿಕೆಗಳನ್ನು ನಡೆಸುತ್ತಿರುವ ಮತ್ತು ಜಿಬಿಎ ಕಾಯ್ದೆ, 2024ರ ಅನ್ವಯ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳನ್ನು ಪಾಲಿಸದೇ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ 14 ಪೇಯಿಂಗ್ ಗೆಸ್ಟ್‌ಗಳಿಗೆ ಬೀಗ ಜಡಿಯಲಾಗಿದೆ.

ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ  ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆಯದೇ ಎಸ್‌ಒಪಿ ಮಾನದಂಡಗಳನ್ನು ಉಲ್ಲಂಘಿಸಿ, ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಪಿಜಿಗಳ ವಿರುದ್ಧ ಕಾರ್ಯಾಚರಣೆ ಹಾಗೂ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಡೆಸುವಂತೆ ಆರೋಗ್ಯ ವಿಭಾಗ ಅಧಿಕಾರಿಗಳಿಗೆ  ಆದೇಶಿಸಿರುವುದಾಗಿ ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಹೇಳಿದ್ದಾರೆ.

ಬೀಗ ಹಾಕಲಾದ  ವಸತಿಗೃಹಗಳ ವಿವರಗಳು
ಮಹದೇವಪುರ ವಿಧಾನಸಭಾ  ಕ್ಷೇತ್ರ
* ಎಸ್.ವಿ.ಕೆ. ಪಿ.ಜಿ ಪಟ್ಟಂದೂರು ಅಗ್ರಹಾರ, ಐಟಿಪಿಲ್ ಬ್ಯಾಕ್ ಗೇಟ್
* ವಂಶಿ ಕೃಷ್ಣ ಪಿಜಿ, ಪಟ್ಟಂದೂರು ಅಗ್ರಹಾರ  ಐಟಿಪಿಎಲ್ ಹಿಂದಿನ ಗೇಟ್
* ಡ್ವೆಲ್ ಕೋ-ಲಿವಿಂಗ್ ಪಿಜಿ ಲಕ್ಷ್ಮಿನಾರಾಯಣಪುರ, ನಾಗಪ್ಪ ರೆಡ್ಡಿ ಲೇಔಟ್
* ರಾಯಲ್ ಹೋಮ್ ಸ್ಟೇಸ್ ಪಿಜಿ ,ಮೈತ್ರಿ ಲೇಔಟ್, 3ನೇ ಅಡ್ಡರಸ್ತೆ, ಪ್ರಶಾಂತ್ ಲೇಔಟ್, ವೈಟ್‌ಫೀಲ್ಡ್
* ಡ್ರೀಮ್ ಲ್ಯಾಂಡ್ ಪಿಜಿ ವೆಂಟಕಾಮೃತ ನಿಲಯಂ, ಪ್ರಶಾಂತ್ ಲೇಔಟ್, ವೈಟ್‌ಫೀಲ್ಡ್
* ಝೋಲೋ ಅಸ್ಮಿ ಜೆಂಟ್ಸ್ ಪಿಜಿ,1ನೇ ಅಡ್ಡರಸ್ತೆ, ಯಶೋಮತಿ ಆಸ್ಪತ್ರೆಯ ಹಿಂದೆ, ರಾಘವೇಂದ್ರ ಲೇಔಟ್, ಮಾರತ್ ಹಳ್ಳಿ
* ಕೆ.ಆರ್.ಜೆಂಟ್ಸ್ ಪಿ.ಜಿ., 5ನೇ ಕ್ರಾಸ್, ರಾಮಾಂಜನೇಯಲೇಔಟ್  ಮಾರತ್ ಹಳ್ಳಿ  ಇದನ್ನೂ ಓದಿ:  ಆತ್ಮಾಹುತಿ ಬಾಂಬ್ ದಾಳಿಯೆಂಬುದು ಹುತಾತ್ಮರ ಕಾರ್ಯಾಚರಣೆ – ಬಾಂಬರ್ ಉಮರ್

ಕೆ.ಆರ್. ಪುರ ವಿಧಾನಸಭಾ  ಕ್ಷೇತ್ರ
* ಶ್ರೀ ಎಸ್.ಜಿ. ಜೆಂಟ್ಸ್ ಅಂಡ್ ಲೇಡೀಸ್ ಪಿ.ಜಿ, ನಂ.39 & 40, 8ನೇ ಕ್ರಾಸ್, ಮುನಿಯಪ್ಪ ಲೇಔಟ್ ಹೊರಮಾವು
* ಸೆಂಟ್ ಮರಿಯಾ, ಲೇಡೀಸ್ ಪಿಜಿ, ನಂ.109, ನಾಗಪ್ಪ ರೆಡ್ಡಿ ಲೇಔಟ್, ದೂರವಾಣಿನಗರ,
* ಎಸ್.ಎಲ್.ವಿ ಕಂಫರ್ಟ್ಸ್ ಜೆಂಟ್ಸ್ ಪಿ.ಜಿ., ಶರಾವತಿ ಲೇಔಟ್, ಕೆ.ಆರ್.ಪುರಂ
* ಶ್ರೀ. ಗಣೇಶ ಜೆಂಟ್ಸ್ ಪಿ.ಜಿ., ಕೃಷ್ಣ ಥಿಯೇಟರ್ ರಸ್ತೆ, ಬಸವನಪುರ
* ಎಸ್.ಎಸ್.ವಿ ಟವರ್  ಪಿಜಿ ಲಕ್ಷ್ಮೀ ಸಾಗರ ಲೇಔಟ್ ಮಹದೇವಪುರ
* ಬ್ಲಿಸ್ ಕೋ-ಲಿವಿಂಗ್ ಪಿ.ಜಿ. 20, 2ನೇ ಕ್ರಾಸ್ ಶ್ರೀ. ಕೃಷ್ಣ ಗಾರ್ಡನ್ ಲೇಔಟ್ ಬಿ ನಾರಾಯಣಪುರ.
* ವಿ.ಡಿ.ಎಸ್ ಲಕ್ಸುರಿ ಪಿಜಿ ಫಾರ್ ಲೇಡೀಸ್ ,ಸತ್ಯ ಬಡಾವಣೆ

ಉದ್ದಿಮೆ ಪರವಾನಗಿ ಅಭಿಯಾನ
ನಗರ ಪಾಲಿಕೆ ವ್ಯಾಪ್ತಿಯಲ್ಲಿ ನ.10 ರಿಂದ 15 ರವರೆಗೆ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಗರ ಪಾಲಿಕೆ ವ್ಯಾಪ್ತಿಯ 17 ವಾರ್ಡ್ ಕಚೇರಿಗಳಲ್ಲಿ ನಡೆಸಲಾಯಿತು. ಈ ಅವಧಿಯಲ್ಲಿ ನಗರ ಪಾಲಿಕೆಯ 17 ವಾರ್ಡ್‌ಗಳ ವ್ಯಾಪ್ತಿಯಲ್ಲಿ 466 ಉದ್ದಿಮೆದಾರರು ‘ಏಕ ಗವಾಕ್ಷಿ’ ಅಡಿಯಲ್ಲಿ ಒಟ್ಟು 25,52,800 ರೂ. ಶುಲ್ಕ ಪಾವತಿಸಿ, ಎಲ್ಲ ಅಗತ್ಯ ದಾಖಲೆಗಳನ್ನು ಮಧ್ಯವರ್ತಿಗಳ ಯಾವುದೇ ಹಸ್ತಕ್ಷೇಪವಿಲ್ಲದೇ ಅರ್ಜಿ ಸಲ್ಲಿಸಿದ ದಿನದಂದೇ ಉದ್ದಿಮೆ ಪರವಾನಗಿಯನ್ನು ಪಡೆದುಕೊಂಡರು ಎಂದು ಆಯುಕ್ತರು ತಿಳಿಸಿದರು.  ಇದನ್ನೂ ಓದಿ:  ಮದುವೆಯಾದ ಒಂದೇ ವರ್ಷದಲ್ಲಿ ಮೂರನೇ ಗಂಡನನ್ನೂ ಬಿಟ್ಟ ಖ್ಯಾತ ನಟಿ

ಅರ್ಜಿ ಸಲ್ಲಿಸಿದ ದಿನವೇ ಪರವಾನಗಿ

ಅಗತ್ಯ ದಾಖಲೆಗಳಾದ ವಾಣಿಜ್ಯ ಮಳಿಗೆ ಕರಾರು ಪತ್ರ ಹಾಗೂ ವಿದ್ಯುತ್ ಬಿಲ್  ಸಲ್ಲಿಸಿದ ದಿನವೇ ಉದ್ದಿಮೆದಾರರಿಗೆ ಉದ್ದಿಮೆ ಪರವಾನಗಿ ನೀಡಲು ಪೂರ್ವ ನಗರ ಪಾಲಿಕೆಯು ವ್ಯವಸ್ಥೆಯನ್ನು ಕಲ್ಪಿಸಿದ್ದು,  17 ವಾರ್ಡ್‌ಗಳೊಂದಿಗೆ ವಾಣಿಜ್ಯ ಪ್ರದೇಶಗಳಲ್ಲೂ ವಿಶೇಷ ಶಿಬಿರ ಏರ್ಪಡಿಸುವ ಮೂಲಕ ಪಾರದರ್ಶಕವಾಗಿ , ವೇಗವಾಗಿ ಮತ್ತು ನಾಗರಿಕ–ಸ್ನೇಹಿ  ಉದ್ದಿಮೆ ಪರವಾಗಿ ಸೇವೆಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ಮಹದೇವಪುರ ಹಾಗೂ ಕೃಷ್ಣರಾಜಪುರ ವಿಭಾಗಗಳ ಆರೋಗ್ಯ ವೈದ್ಯಾಧಿಕಾರಿಗಳು, ಆರೋಗ್ಯ ಮೇಲ್ವಿಚಾರಕರು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳು ತಂಡಗಳು ಅನಧಿಕೃತ ಪಿಜಿ ಕಾರ್ಯಾಚರಣೆ ಹಾಗೂ  ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ಕಾರ್ಯದಲ್ಲಿ ಪ್ರವೃತ್ತರಾಗಿರುತ್ತಾರೆ ಎಂದು ಆರೋಗ್ಯಾಧಿಕಾರಿಗಳು ಹೇಳಿದರು.

Share This Article