ಮೇ ತಿಂಗಳಿಗೆ ಜಿಬಿಎ ಚುನಾವಣೆ ನಡೆಯುತ್ತೆ: ರಾಮಲಿಂಗಾರೆಡ್ಡಿ

2 Min Read

ಬೆಂಗಳೂರು: ಮೇ ತಿಂಗಳಿಗೆ ಜಿಬಿಎ ಚುನಾವಣೆ (GBA Elections) ನಡೆಯುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 6ಕ್ಕೆ ಜಿಬಿಎ ಎಲೆಕ್ಷನ್ ಸಂಬಂಧ ಅಧಿಸೂಚನೆ ಮಾಡುತ್ತೇವೆ. ಅದಾಗಿ ತಿಂಗಳಿಗೆ ಚುನಾವಣೆ ನಡೆಯುತ್ತೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಉಡುಪಿಯ ಹಲವೆಡೆ ಉಪಲೋಕಾಯುಕ್ತ ದಿಢೀರ್ ದಾಳಿ – ಜೀನ್ಸ್ ಪ್ಯಾಂಟ್ ಧರಿಸಿ ಬಂದ ಸರ್ಕಾರಿ ನೌಕರರಿಗೆ ತರಾಟೆ

ಕರಗ ಉತ್ಸವ ಕುರಿತು ಮಾತನಾಡಿ, ಸಿ ಗ್ರೇಡ್ ದೇವಾಲಯದ ಅಭಿವೃದ್ಧಿಗೆ ವಿಷನ್ ಗ್ರೂಪ್ ಮಾಡಿದ್ವಿ. ವಿಷನ್ ಗ್ರೂಪ್ ಸಭೆಯನ್ನು ಇವತ್ತು ಕರೆದಿದ್ದೇವೆ. ಮುಜರಾಯಿ ಆಸ್ತಿಯನ್ನು ಮತ್ತೆ ಸುಪರ್ದಿಗೆ ತೆಗೆದುಕೊಳ್ಳುವ ಕೆಲಸ ಆಗುತ್ತಿದೆ. ಆಸ್ತಿ ಹಿಂಡೀಕರಣ ಮಾಡಿ ಗೆಜೆಟ್ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಕಂದಾಯ ಇಲಾಖೆಗೂ ಸೂಚನೆ ಕೊಟ್ಟಿದ್ದೇವೆ. ಗ್ರಾಮೀಣ ಭಾಗದಲ್ಲಿ ಇನ್ಮುಂದೆ ಸಿ ಗ್ರೇಡ್ ದೇವಸ್ಥಾನದ ದತ್ತು ಪ್ರಕ್ರಿಯೆ ಸರಳೀಕರಣಕ್ಕೆ ನಿರ್ಧಾರ ಮಾಡಲಾಗಿದೆ. ಜಿಯೋ ಪೆನ್ಸಿಂಗ್ ದೇವಸ್ಥಾನದ ಪ್ರಾಪರ್ಟಿಗೆ ಮಾಡಲಿದ್ದೇವೆ. ಏ.1 ರಂದು ಕರಗ. ಎಂಟು ಜನ ಸದಸ್ಯರು, ನಾರಾಯಣಸ್ವಾಮಿ ಅಧ್ಯಕ್ಷರಾಗಿದ್ದಾರೆ. ಮುಜರಾಯಿ ಇಲಾಖೆಗೆ ಹಣ ಟೆಂಡರ್ ಪ್ರಕ್ರಿಯೆ ಮಾಡಲ್ಲ. ಜಿಬಿಎಗೆ ಎಲ್ಲಾ ಹೊಣೆ. ಮೈಸೂರು ಬ್ಯಾಂಕ್ ಸರ್ಕಲ್ ಅವಿನ್ಯೂ ರೋಡ್ ಹಡ್ಸನ್ ಸರ್ಕಲ್ ಸೇರಿದಂತೆ ಕಾಟನ್ ಪೇಟೆಯಲ್ಲಿ ವಿದ್ಯುತ್ ದೀಪದ ಅಲಂಕಾರ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಾಧ್ಯವಾ ಅಂತಾ ಯೋಚನೆ ಮಾಡ್ತಾ ಇದ್ದೀವಿ. ಮೈಸೂರು ದಸರಾ ಮಾದರಿಯಲ್ಲಿಯೇ ಮಾಡೋಣ ಅಂತಾ ಅಂದುಕೊಂಡಿದ್ದೇವೆ. ಪೊಲೀಸರಿಗೆ ಜಾಗ ಸೂಚನೆಗೆ ತಿಳಿಸಿದ್ದೇವೆ. ಜಿಬಿಎಗೆ ಅನುದಾನ ಅವರೇ ಖರ್ಚಿನ ಹೊಣೆ ಎಂದು ಹೇಳಿದರು.

ಕರಗ ಹೊರುವವರು ಯಾರು ಅನ್ನೋದನ್ನು ಸಮಿತಿ ನಿರ್ಧಾರ ಮಾಡಲಿದೆ. ಕರಗಕ್ಕೆ ಸಂಬಂಧಪಟ್ಟಂತೆ ಸಚಿವರು ಇದುವರೆಗೆ ಯಾರೂ ಸಭೆ ಮಾಡಿಲ್ಲ. ಗೊಂದಲ ಸೃಷ್ಟಿಯಾಗಬಾರದು ಅಂತಾ ನಾವೇ ಚೆನ್ನಾಗಿ ಆಗಬೇಕು ಅಂತಾ ಕರಗದ ವಿಚಾರದಲ್ಲಿ ಎಚ್ಚರಿಕೆ ವಹಿಸಿದ್ದೇವೆ ಎಂದರು. ಇದನ್ನೂ ಓದಿ: ಏಪ್ರಿಲ್‌ 1 ರಂದು ಬೆಂಗಳೂರು ಐತಿಹಾಸಿಕ ಕರಗ ಮಹೋತ್ಸವ

ಮಾರ್ಚ್ 24 ಕರಗ ಧ್ವಜಾರೋಹಣ ನಡೆಯಲಿದೆ. ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ಫಿಕ್ಸ್ ಆಗಿದೆ. ಏಪ್ರಿಲ್ 1 ರಂದು ಮಧ್ಯರಾತ್ರಿ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವ ಜರುಗಲಿದೆ. 16ನೇ ಬಾರಿ ಬೆಂಗಳೂರು ಕರಗವನ್ನು ಎ.ಜ್ಞಾನೇಂದ್ರ ಸ್ವಾಮಿ ಹೊರಲಿದ್ದಾರೆ. ಇವರು ಕಳೆದ ವರ್ಷ 15ನೇ ಬಾರಿ ಕರಗ ಹೊತ್ತಿದ್ದರು. 11 ದಿನಗಳ ಕಾಲ ಉತ್ಸವ ನಡೆಯಲಿದೆ. ಮಾ.24 ರಿಂದ ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಚಾಲನೆ ಸಿಗಲಿದೆ. ಮಾ.30 ರಂದು ಹಸಿ ಕರಗ ನಡೆಯಲಿದೆ ಎಂದು ತಿಳಿಸಿದರು.

Share This Article