ಗವಿಸಿದ್ದಪ್ಪ ಕೊಲೆ ಪ್ರಕರಣ ಎನ್‌ಐಎಗೆ ವಹಿಸಿ – ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು

Public TV
1 Min Read

ಬೆಂಗಳೂರು: ಕೊಪ್ಪಳದಲ್ಲಿ (Koppal) ಎಸ್‌ಟಿ ಸಮುದಾಯದ ಯುವಕ ಗವಿಸಿದ್ದಪ್ಪ ಮರ್ಡರ್ ಕೇಸ್ (Gavisiddappa Murder Case) ತನಿಖೆಯ ಜವಾಬ್ದಾರಿಯನ್ನು ಎನ್‌ಐಎಗೆ (NIA) ವಹಿಸುವಂತೆ ಆಗ್ರಹಿಸಿ ಬಿಜೆಪಿ (BJP) ನಿಯೋಗ ರಾಜ್ಯಪಾಲರಲ್ಲಿ ಮನವಿ ಮಾಡಿದೆ.

ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್ ಅಶೋಕ್, ಸಿ.ಟಿ ರವಿ ಹಾಗೂ ಕೊಲೆಯಾದ ಗವಿ ಸಿದ್ದಪ್ಪ ಪೋಷಕರು, ಮಗನ ಕೊಲೆಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮಗನ ಸಾವಿಗೆ ಸರ್ಕಾರ ನ್ಯಾಯ ಕೊಡಿಸುತ್ತೆ ಅನ್ನೋ ನಂಬಿಕೆ ಇಲ್ಲ. ಹಾಗಾಗಿ ಪ್ರಕರಣದ ತನಿಖೆಯ ಜವಾಬ್ದಾರಿ ಎನ್‌ಐಎಗೆ ಕೊಟ್ಟು ನ್ಯಾಯಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಆವರಣದಲ್ಲೇ ಶ್ವಾನ ಪ್ರಿಯನ ಕೆನ್ನೆಗೆ ಬಾರಿಸಿದ ಲಾಯರ್‌

ಬಳಿಕ ಮಾತನಾಡಿದ ವಿಜಯೇಂದ್ರ, ಕೊಲೆಯಾದ ಯುವಕನ ಕುಟುಂಬಕ್ಕೆ 50 ಲಕ್ಷ ಪರಿಹಾರ, ಎರಡು ಎಕರೆ ಜಮೀನು, ಮನೆಯಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುವ ಕೆಲಸ ಸರ್ಕಾರ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು. ಇದನ್ನೂ ಓದಿ: ಈಚೆಗಷ್ಟೇ ಆರಂಭವಾದ ಯೆಲ್ಲೋ ಲೈನ್‌ ಮೆಟ್ರೋ – ರೈಲು ಮಿಸ್‌ ಮಾಡಿಕೊಂಡ ಪ್ರಯಾಣಿಕನಿಗೆ ಬಿತ್ತು ದಂಡ!

ಆರ್ ಅಶೋಕ್ ಮಾತನಾಡಿ, ಗವಿಸಿದ್ದಪ್ಪ ನಾಯಕ್ ಕೊಲೆ ಕೇಸ್ ಎನ್‌ಐಎಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ದಿನದಿಂದ ಹಿಂದೂ ಕಾರ್ಯಕರ್ತರ ಕೊಲೆಗಳು ನಡೆಯುತ್ತಿವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಟೋ ಚಾಲಕನ ಕೊಲೆಗೈದು ಮೂಟೆ ಕಟ್ಟಿ ಎಸೆದ ಪ್ರಕರಣ – ಆರೋಪಿ ಪತ್ನಿ, ಪುತ್ರ, ಪ್ರಿಯಕರ ಅರೆಸ್ಟ್

Share This Article