ಗೌತಮ್ ಅದಾನಿ ಈಗ ವಿಶ್ವದ 2ನೇ ಅತ್ಯಂತ ಶ್ರೀಮಂತ ವ್ಯಕ್ತಿ

Public TV
2 Min Read

ವಾಷಿಂಗ್ಟನ್: ಭಾರತದ(India) ಕೈಗಾರಿಕೋದ್ಯಮಿ, ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ(Gautam Adani) ಅವರು ಅಮೆಜಾನ್‌ನ(Amazon) ಮುಖ್ಯಸ್ಥ ಜೆಫ್ ಬೆಜೋಸ್(Jeff Bezos) ಅವರನ್ನು ಹಿಂದಿಕ್ಕಿ ಇದೀಗ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಅಮೆರಿಕದ ನಿಯತಕಾಲಿಕೆ ಫೋರ್ಬ್ಸ್ ಪ್ರಕಾರ, ಟೆಸ್ಲಾ ಸಿಇಒ ಎಲೋನ್ ಮಸ್ಕ್(Elon Musk) ಅವರು 273.5 ಬಿಲಿಯನ್ ಡಾಲರ್(ಸುಮಾರು 21 ಲಕ್ಷ ಕೋಟಿ ರೂ.) ನಿವ್ವಳ ಆಸ್ತಿ ಹೊಂದಿದ್ದು, ವಿಶ್ವದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. ಗೌತಮ್ ಅದಾನಿ ಅವರು ಪ್ರಸ್ತುತ 154.7 ಬಿಲಿಯನ್ ಡಾಲರ್(12.33 ಲಕ್ಷ ಕೋಟಿ ರೂ.) ಆಸ್ತಿಯನ್ನು ಹೊಂದಿದ್ದು, ವಿಶ್ವದ 2ನೇ ಶ್ರೀಮಂತ ವ್ಯಕ್ತಿಯೆನಿಸಿಕೊಂಡಿದ್ದಾರೆ.

ಕಳೆದ ತಿಂಗಳಷ್ಟೇ ಅದಾನಿ ಅವರು ಲೂಯಿ ವಿಟಾನ್‌ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ವಿಶ್ವದ 3ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಅರ್ನಾಲ್ಟ್ ಈಗ ಅವರ ಕುಟುಂಬದ ಒಟ್ಟು ನಿವ್ವಳ ಮೌಲ್ಯ 153.5 ಬಿಲಿಯನ್ ಡಾಲರ್(12.24 ಲಕ್ಷ ಕೋಟಿ ರೂ.) ಇದ್ದು, 3ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬೆಜೋಸ್ ಅವರ ಆಸ್ತಿ 149.7 ಬಿಲಿನ್ ಡಾಲರ್‌ಗೆ(11.93 ಲಕ್ಷ ಕೋಟಿ ರೂ.) ಕುಸಿತವಾಗಿದ್ದು, 4ನೇ ಸ್ಥಾನದಲ್ಲಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು 92 ಬಿಲಿಯನ್ ಡಾಲರ್(7.33 ಲಕ್ಷ ಕೋಟಿ ರೂ.) ಆಸ್ತಿ ಹೊಂದಿದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಡ್ಯಾಮ್ ನಿರ್ಮಾಣಕ್ಕೆ ಸಂಗ್ರಹಿಸಿದ್ದು 300 ಕೋಟಿ, ಜಾಹೀರಾತಿಗೆ ಖರ್ಚಾಗಿದ್ದು 500 ಕೋಟಿ

ಆದಾನಿಗೆ 2ನೇ ಸ್ಥಾನ ಸಿಕ್ಕಿದ್ದು ಹೇಗೆ?
ಅಮೆರಿಕದಲ್ಲಿ ಹಣದುಬ್ಬರ ಏರಿಕೆಯಾಗುತ್ತಿದ್ದು ಆಗಸ್ಟ್ ನಲ್ಲಿ ಶೇ.8.3ರಷ್ಟಿದೆ. ನಿತ್ಯ ಬಳಕೆ ವಸ್ತುಗಳ ಬೆಲೆಯೇರಿಕೆಯಿಂದ ಅಮೆರಿಕದ ಜನತೆ ಈಗಾಗಲೇ ಹೈರಾಣಾಗಿದ್ದಾರೆ. ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿಲ್ಲ. ಮುಂದಿನ ವಾರ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಇನ್ನಷ್ಟು ಏರಿಕೆ ಮಾಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಈ ಕಾರಣಕ್ಕೆ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹಣವನ್ನು ಷೇರು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯುತ್ತಿದ್ದಾರೆ.

ಹೂಡಿಕೆದಾರರು ಷೇರು ಮಾರಾಟ ಮಾಡುತ್ತಿರುವುದರಿಂದ ಅಮೆರಿಕದ ಉದ್ಯಮಿಗಳ ಸಂಪತ್ತಿನ ಮೌಲ್ಯ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಕಳೆದ ತಿಂಗಳಷ್ಟೇ ಅಮೆರಿಕದ ಇದೇ ಬಿಲಿಯನೇರ್ ಗಳು ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೋಮ್ ಪೊವೆಲ್ ಅವರ 8 ನಿಮಿಷಗಳ ಭಾಷಣದ ಬಳಿಕ ಒಂದೇ ದಿನದಲ್ಲಿ 78 ಬಿಲಿಯನ್ ಡಾಲರ್ ಕಳೆದುಕೊಂಡಿದ್ದರು. ವಿಶ್ವದ 500 ಶ್ರೀಮಂತ ವ್ಯಕ್ತಿಗಳು ಈ ವರ್ಷದ ಪ್ರಾರಂಭಕ್ಕೆ ಹೋಲಿಸಿದರೆ 1.2 ಟ್ರಿಲಿಯನ್ ಡಾಲರ್ ಕಳೆದುಕೊಂಡಿದ್ದರು. ಇದನ್ನೂ ಓದಿ: ವಾಹನ ಸವಾರರೇ ಎಚ್ಚರ- ಹೆಡ್ ಲೈಟ್‌ಗಳಲ್ಲಿ ಹೈ ಬೀಮ್ ಹಾಕಿ ವಾಹನ ಚಲಾಯಿಸಿದರೆ ಕೇಸ್: ಶ್ರೀರಾಮುಲು

ಗೌತಮ್ ಅದಾನಿಯವರು ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳನ್ನು ಮನಗಂಡು, ತಮ್ಮ ಉದ್ಯಮಗಳಲ್ಲಿ ವೇಗವಾಗಿ ಸಮಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತ ಬಂದಿರುವುದೇ ಇಂದು ಅವರು ಅತ್ಯಂತ ಕಡಿಮೆ ಸಮಯದಲ್ಲಿ ಶ್ರೀಮಂತ ವ್ಯಕ್ತಿಗಳನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಬಂದಿದ್ದಾರೆ. ಜೊತೆ ಅದಾನಿ ಕಂಪನಿಯ ಷೇರುಗಳ ಮೌಲ್ಯ ಭಾರೀ ಏರಿಕೆಯಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಅದಾನಿ ಸಂಪತ್ತಿನ ಮೌಲ್ಯ ಏರಿಕೆಯಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *