ಕೇದಾರನಾಥ ಯಾತ್ರಿಗಳಿಗೆ ಗುಡ್ ನ್ಯೂಸ್ – 12.9 ಕಿಮೀ ರೋಪ್‌ವೇ ನಿರ್ಮಿಸಲಿದೆ ಅದಾನಿ ಕಂಪನಿ

Public TV
1 Min Read

ಮುಂಬೈ: ಕೇದಾರನಾಥ (Kedarnath Dham) ಯಾತ್ರಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. 12.9 ಕಿಮೀ ರೋಪ್‌ವೇ ನಿರ್ಮಿಸುವುದಾಗಿ ಅದಾನಿ ಕಂಪನಿ ಘೋಷಿಸಿದೆ.

ಭಕ್ತರಿಗೆ ತೀರ್ಥಯಾತ್ರೆ ಸುಲಭ ಮತ್ತು ಸುರಕ್ಷಿತವಾಗಿಸುವ ಉದ್ದೇಶದಿಂದ ಕೇದಾರನಾಥ ಧಾಮಕ್ಕೆ ಹೊಸ ರೋಪ್‌ವೇ ನಿರ್ಮಾಣ ಮಾಡುವುದಾಗಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ (Gautam Adani) ಬುಧವಾರ ತಿಳಿಸಿದ್ದಾರೆ.

ಕೇದಾರನಾಥ ಧಾಮಕ್ಕೆ ಕಠಿಣವಾದ ಆರೋಹಣವು ಈಗ ಸುಲಭವಾಗಲಿದೆ. ಈ ಯೋಜನೆ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ. ಎಲ್ಲರಿಗೂ ಭಗವಾನ್‌ ಮಹಾದೇವನ ಆಶೀರ್ವಾದ ಇರಲಿ. ಜೈ ಬಾಬಾ ಕೇದಾರನಾಥ ಎಂದು ಅದಾನಿ ಎಕ್ಸ್‌ ಪೋಸ್ಟ್‌ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.‌ ಇದನ್ನೂ ಓದಿ: Vizag ನಲ್ಲಿರುವ ‘G’ ಅಂದರೆ ಅದು ಗೂಗಲ್‌- ಅತಿ ಕಿರಿಯ ರಾಜ್ಯದಲ್ಲಿ ಹೆಚ್ಚು ಹೂಡಿಕೆ: ನಾಯ್ಡು ಸಂಭ್ರಮ

ಶಿವನಿಗೆ ಅರ್ಪಿತವಾದ ಕೇದಾರನಾಥ ದೇವಾಲಯವು ಹಿಮಾಲಯದಲ್ಲಿ 11,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದೆ. ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿದೆ. ಅ.23 ರಂದು ಚಳಿಗಾಲ ಹಿನ್ನೆಲೆ ಕೇದಾರನಾಥ ಧಾಮದ ದ್ವಾರಗಳನ್ನು ಮುಚ್ಚಲಾಗುವುದು ಎಂದು ಶ್ರೀ ಬದರಿನಾಥ ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ತಿಳಿಸಿದೆ.

ದ್ವಾರಗಳನ್ನು ಮುಚ್ಚುವ ದಿನಾಂಕ ನಿರ್ಧರಿಸಲು ಬದರಿನಾಥ ದೇವಾಲಯದ ಆವರಣದಲ್ಲಿ ಮಧ್ಯಾಹ್ನ ಒಂದು ಭವ್ಯ ಧಾರ್ಮಿಕ ಸಮಾರಂಭ ನಡೆಸಲಾಯಿತು. ಈ ಕಾರ್ಯಕ್ರಮದ ಸಂದರ್ಭದಲ್ಲಿ, ಧರ್ಮಾಧಿಕಾರಿ ಮತ್ತು ವೇದ ವಿದ್ವಾಂಸರು BKTCಯ ಅಧಿಕಾರಿಗಳ ಸಮ್ಮುಖದಲ್ಲಿ ಪಂಚಾಂಗ ಲೆಕ್ಕಾಚಾರಗಳ ಆಧಾರದ ಮೇಲೆ ದಿನಾಂಕ ಅಂತಿಮಗೊಳಿಸಲಾಯಿತು. ಇದನ್ನೂ ಓದಿ: ಹಿಂದಿ ಸಿನಿಮಾ, ಹಾಡುಗಳನ್ನು ನಿಷೇಧಿಸುವ ಮಸೂದೆಗೆ ವಿರೋಧ- ಯೂಟರ್ನ್‌ ಹೊಡೆದ ತಮಿಳುನಾಡು ಸರ್ಕಾರ

Share This Article