ನನ್ನ ಮಗಳ ಹತ್ಯೆ ತನಿಖೆಗೆ ಸಿಬಿಐ ಬೇಡ್ವೇ ಬೇಡ: ಇಂದಿರಾ ಲಂಕೇಶ್

Public TV
1 Min Read

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣ ಯಾವುದೇ ಕಾರಣಕ್ಕೂ ಸಿಬಿಐ ತನಿಖೆಗೆ ಬೇಡ. ಸಿಬಿಐ ಮೇಲೆ ನಮಗೆ ನಂಬಿಕೆಯಿಲ್ಲ. ಈ ತನಿಖೆಯನ್ನು ಎಸ್‍ಐಟಿಯೇ ನಡೆಸಲಿ. ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಸಿಎಂ ಸಿದ್ದರಾಮಯ್ಯರ ಬಳಿ ಇಂದಿರಾ ಲಂಕೇಶ್ ಮನವಿ ಮಾಡಿಕೊಂಡಿದ್ದಾರೆ.

ಸಿಎಂ ನಿವಾಸಕ್ಕೆ ಆಗಮಿಸಿದ್ದ ಇಂದಿರಾ ಲಂಕೇಶ್ ಮತ್ತು ಕವಿತಾ ಲಂಕೇಶ್ ಅವರು ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಈ ತನಿಖೆಯನ್ನು ಎಸ್‍ಐಟಿಯೇ ನಡೆಸಲಿ ಎಂದು ಹೇಳಿದ್ದಾರೆ.

ಇಂದಿರಾ ಲಂಕೇಶ್ ಅವರು ಎಸ್‍ಐಟಿ ತನಿಖೆಯನ್ನೇ ಮುಂದುವರಿಸಿ ಎಂದು ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸೋನಿಯಾ ಗಾಂಧಿ ಅವರು ಕೂಡ ಕರೆ ಮಾಡಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿವರಗಳನ್ನು ಪಡೆದಿದ್ದಾರೆ. ಇವತ್ತು ಗೌರಿ ಲಂಕೇಶ್ ಕುಟುಂಬದ ವರ್ಗದವರು ಭೇಟಿಯಾಗಿ ಮಾಹಿತಿ ಕೇಳಿದ್ರು. ಅವರಿಗೂ ಎಸ್‍ಐಟಿ ತನಿಖೆಯ ಮಾಹಿತಿ ನೀಡಿದ್ದೇನೆ. ಆದಷ್ಟು ಶೀಘ್ರದಲ್ಲಿ ಹಂತಕರ ಬಂಧನ ಮಾಡುವ ಭರವಸೆ ನೀಡಿ ಸಾಂತ್ವನ ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

https://www.youtube.com/watch?v=xUHQ0QzTWJo

https://www.youtube.com/watch?v=5W9fExnZhM4

https://www.youtube.com/watch?v=9i4m_pe6Ir4

https://www.youtube.com/watch?v=JatNCXlFzmo

https://www.youtube.com/watch?v=E-2vEpV_WFE

 

Share This Article
Leave a Comment

Leave a Reply

Your email address will not be published. Required fields are marked *