ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ – ಗಗನಕ್ಕೇರಿದ ಹೂವುಗಳ ದರ

Public TV
1 Min Read

– ಮಾರ್ಕೆಟ್‌ನಲ್ಲಿ ಜೋರಾದ ಖರೀದಿ ಭರಾಟೆ

ಬೆಂಗಳೂರು: ಶ್ರಾವಣಮಾಸ ಅಂದ್ರೆನೇ ಸಾಲು ಸಾಲು ಹಬ್ಬಗಳು, ಸಮಾರಂಭಗಳು. ಮೊನ್ನೆ ತಾನೆ ವರಮಹಾಲಕ್ಷ್ಮಿ, ಕೃಷ್ಣ ಜನ್ಮಾಷ್ಟಮಿ ಹಬ್ಬ ಮುಗಿದಿದೆ. ಇಂದು ಗೌರಿ ಹಬ್ಬವಿದ್ದು, ನಾಳೆ ಗಣೇಶ (Gowri Festival) ಹಬ್ಬವಿದೆ. ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಿಲಿಕಾನ್ ಸಿಲಿಕಾನ್ ಸಿಟಿ ಸಜ್ಜಾಗಿದ್ದು, ಹಬ್ಬದ ಖರೀದಿಗೆ ಜನ ಮಾರ್ಕೆಟ್‌ಗೆ ಮುಗಿಬೀಳುತ್ತಿದ್ದಾರೆ.

ಹಬ್ಬ ಬಂತೆಂದರೆ ಸಾಕು, ಹಬ್ಬದ ತಯಾರಿ, ವಿವಿಧ ಬಗೆಯ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಮಾರ್ಕೆಟ್‌ನಲ್ಲಿ ಜೋರಾಗಿದೆ. ವರಮಹಾಲಕ್ಷ್ಮಿ ಹಬ್ಬದ ನಂತರ ಬರುವ ದೊಡ್ಡ ಹಬ್ಬ ಅಂದ್ರೆ ಗೌರಿ – ಗಣೇಶ ಹಬ್ಬ. ಗೌರಿ ಗಣೇಶ ಹಬ್ಬವನ್ನ ಇಡೀ ರಾಜ್ಯಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದ್ರಲ್ಲೂ ಇಂದಿನ ಹಬ್ಬಕ್ಕೆ ಸೋಮವಾರದಿಂದಲೇ ತಯಾರಿ ಆರಂಭ ಆಗಿದ್ದು, ಕೆಆರ್ ಮಾರ್ಕೆಟ್ (KR Market) ಸೋಮವಾರ ಸಂಜೆಯಿಂದಲೇ ಪುಲ್ ರಶ್ ಆಗಿದೆ. ಜನ ಹಬ್ಬದ ಖರೀದಿಗಾಗಿ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದ ಕ್ರಾಂತಿಕಾರಿ ನಡೆ – ರಾಜಕಾರಣ ಶುದ್ಧೀಕರಣಕ್ಕೆ ಹೊಸ ಮಸೂದೆ!

ಗೌರಿ ಗಣೇಶ ಹಬ್ಬದ ಹಿನ್ನೆಲೆ ಹಣ್ಣುಗಳ ಬೆಲೆ ಅಷ್ಟಾಗಿ ಏರಿಕೆ ಕಂಡಿಲ್ಲ. ಆದ್ರೆ ಹೂವುಗಳ ಬೆಲೆ ಮಳೆ ಹಾಗೂ ಹಬ್ಬದಿಂದ ವಿಪರೀತ ಗಗನಕ್ಕೇರಿದೆ. ಇದನ್ನೂ ಓದಿ: ಮಗುವಿಗೆ ಜನ್ಮನೀಡಲಿದೆ ರೊಬೋಟ್‌ – ಅಚ್ಚರಿಯ ಸಂಶೋಧನೆಯತ್ತ ಚೀನಾ

ಹೂವುಗಳ ಬೆಲೆ (ಕೆ.ಜಿಗೆ):
ಕನಕಾಂಬರ-3,000-4,000 ರೂ.
ಮಲ್ಲಿಗೆ-1,200-1,600 ರೂ.
ಸೇವಂತಿ-500-600 ರೂ.
ಗುಲಾಬಿ-600-800 ರೂ.

ಒಟ್ಟಾರೆಯಾಗಿ ನಗರದೆಲ್ಲೆಡೆ ಗೌರಿ ಗಣೇಶ ಹಬ್ಬದ ತಯಾರಿ ಆರಂಭ ಆಗಿದ್ದು, ಹೂವು ಹಣ್ಣಿನ ಜೊತೆ ಹಬ್ಬದ ಸಾಮಗ್ರಿಗಳನ್ನು ಕೊಳ್ಳುತ್ತಿದ್ದಾರೆ. ಎಲ್ಲರೂ ಈ ಭಾರಿ ಮಣ್ಣಿನ ಗೌರಿ- ಗಣೇಶ ಮೂರ್ತಿ ಬಳಸಿ ಪರಿಸರಕ್ಕೆ ಹಾನಿ ಮಾಡದೇ ಹಬ್ಬ ಆಚರಿಸಲಿ. ಗೌರಿ ಹಬ್ಬ ಬದುಕಿನಲ್ಲಿ ಹೊಸ ಚೈತನ್ಯ ತುಂಬಲಿ. ಇದನ್ನೂ ಓದಿ: ಅಮಿತ್ ಶಾ ಹೇಳಿಕೆ ದುರದೃಷ್ಟಕರ – ನಿವೃತ್ತ ನ್ಯಾಯಾಧೀಶರ ಖಂಡನೆ

Share This Article