ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಓಡಿಸಿ: ಮೋದಿ ವಿರುದ್ಧ ದೊರೆಸ್ವಾಮಿ ಗುಡುಗು

Public TV
1 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಎಲ್ಲರಿಗೂ ಕಾಮನ್ ಎನಮಿ ಆಗಿದ್ದು, ನಾವು ಪ್ರತಿಜ್ಞೆ ಮಾಡುವ ಮೂಲಕ ಕರ್ನಾಟಕದಲ್ಲಿ ಅವರಿಗೆ ಅವಕಾಶ ನೀಡಬಾರದು ಎಂದು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ಹೇಳಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್‍ಗೆ ಜನ್ಮದಿನ ಪ್ರಯುಕ್ತ ಆಚರಿಸಲಾಗಿದ್ದ `ಗೌರಿ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಹಾಗೂ ಗೌರಿ ಲಂಕೇಶ್ ಅವರ ಒಡನಾಟ ಕೆಲ ದಿನಗಳಾದರೂ, ನಮ್ಮ ನಡುವಿನ ಸಂಪರ್ಕ ಬಹಳಗಾಢವಾದದ್ದು. ಅವರ ಕೆಲವು ದೌರ್ಬಲ್ಯಗಳ ನಡುವೆಯೂ ದೊಡ್ಡ ಮಟ್ಟದ ಅಲೋಚನೆಗಳು, ಕೆಲಸಗಳು ಮಾಡುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ಗೌರಿ ದಿನಕ್ಕೆ ಸರ್ಕಾರ ಪ್ರಯೋಜಕತ್ವ ನೀಡಿಲ್ಲ, ಪೊಲೀಸ್ ತನಿಖೆ ತೃಪ್ತಿ ನೀಡಿದೆ : ಕವಿತಾ ಲಂಕೇಶ್

ಸಮಾರಂಭದಲ್ಲಿ ಸೇರಿರುವ ಎಲ್ಲರೂ ಗೌರಿ ಲಂಕೇಶ್ ಅವರ ಮೇಲಿನ ಅಭಿಮಾನದಿಂದ ಇಲ್ಲಿಗೆ ಆಗಮಿಸಿದ್ದೀರಾ. ಆದರೆ ನೀವು ನಿಮ್ಮ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ಮೂಲಕ ಪ್ರಧಾನಿ ಮೋದಿ ಅವರಿಗೆ ಇಲ್ಲಿ ಅವಕಾಶವನ್ನು ನೀಡದಿರುವ ಪ್ರತಿಜ್ಞೆಯನ್ನು ಮಾಡಬೇಕು. ಇಂತಹ ಸಮಾರಂಭವನ್ನು ಏರ್ಪಡಿಸುವ ಶಕ್ತಿ ನಮಗೇ ಇದೇಯಾ ಎಂಬುವುದರ ಬಗ್ಗೆ ಚರ್ಚೆ ನಡೆಸಬೇಕು. ಬೇರೆ ಬೇರೆ ಪಕ್ಷದಲ್ಲಿ ಇರುವ ನಾಯಕರನ್ನು ಸಂಪರ್ಕಿಸಿ ಅವರಿಗೂ ಇದನ್ನು ಮುಟ್ಟಿಸಿ, ಕಾಮನ್ ಎನಿಮಿಯನ್ನು ತೊಲಗಿಸುವ ಕಾರ್ಯವನ್ನು ಮಾಡಬೇಕು. ಇದು ಒಂದು ಪಕ್ಷದ ಒಲೈಕೆಗಲ್ಲ, ವೇದಿಕೆಯಲ್ಲಿ ಚಪ್ಪಾಳೆ ಸಿಳ್ಳೆ ಪಡೆಯುದಕ್ಕೂ ಅಲ್ಲ. ಇದು ಖಚಿತ ಅಭಿಪ್ರಾಯ ಎಂದರು. ಇದನ್ನೂ ಓದಿ:  ಗೌರಿಯನ್ನು ಮೌನ ಮಾಡಿದಾಗ ನಾನು, ನನ್ನಂತಹ ಹಲವರು ಹುಟ್ಟುತ್ತಾರೆ: ಪ್ರಕಾಶ್ ರೈ

ಇದೇ ವೇಳೆ ಗೌರಿ ಹಂತಕರ ಕುರಿತು ದಕ್ಷಿಣ ಕನ್ನಡದ ಮೇಲೆ ಒಂದು ಕಣ್ಣಿಡಬೇಕು. ಪೊಲೀಸರು ಯಾರೋ ಇಬ್ಬರನ್ನೂ ಹಿಡಿದಿದ್ದೇವೆ ಎಂದು ಹೇಳುತ್ತಿದ್ದಾರೆ. ಅವರು ಬಂದೂಕು ತಯಾರಿಸುವವರು ಇರಬೇಕು, ಆದರೆ ಬಂದೂಕಿಗೆ ಸುಪಾರಿ ಕೊಟ್ಟವರು ಯಾರು ಎನ್ನುವುದು ಗೊತ್ತಾಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: `ಗೌರಿ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದ ಸಹೋದರ ಇಂದ್ರಜಿತ್ ಲಂಕೇಶ್

https://www.youtube.com/watch?v=GA_pyPUe6h4

Share This Article
Leave a Comment

Leave a Reply

Your email address will not be published. Required fields are marked *