ಏಪ್ರಿಲ್ 14 ರಂದು ‘ಗೌಜಿ ಗಮ್ಮತ್’ ತುಳು ಸಿನಿಮಾ ರಿಲೀಸ್

Public TV
2 Min Read

ಮೋವಿನ್ ಫಿಲಂಸ್ ಲಾಂಛನದಲ್ಲಿ ಮೋಹನ್ ಭಟ್ಕಳ್, ವಿನಾಯಕ್ ತೀರ್ಥಹಳ್ಳಿ ನಿರ್ಮಾಣದಲ್ಲಿ, ಮಣಿ ಎಜೆ ಕಾರ್ತಿಕೇಯನ್  ನಿರ್ದೇಶನದಲ್ಲಿ ತಯಾರಾದ ‘ಗೌಜಿ ಗಮ್ಮತ್’ (Gauji Gammath) ತುಳು ಸಿನಿಮಾ ಏಪ್ರಿಲ್ 14 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.  ಮಂಗಳೂರು, ಉಡುಪಿ, ಮಣಿಪಾಲ, ಪಡುಬಿದ್ರೆ, ಪುತ್ತೂರು, ಮೂಡಬಿದ್ರೆ, ಕಾರ್ಕಳ ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ತುಳುರಂಗಭೂಮಿಯ ಹಿರಿಯ ನಟ ದೇವದಾಸ್ ಕಾಪಿಕಾಡ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಗೌಜಿ ಗಮ್ಮತ್ ಸಿನಿಮಾ ಹಾಸ್ಯ ಮನರಂಜನೆಯ ಚಿತ್ರವಾಗಿದ್ದು,  ಈಗಿನ ಪೀಳಿಗೆ ಇಷ್ಟ ಪಡುವ ಕತೆಯನ್ನು ಇಲ್ಲಿ ಹಾಸ್ಯಭರಿತವಾಗಿ ನಿರ್ದೇಶಕರು ಹೆಣೆದಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶವೂ ಈ ಸಿನಿಮಾದಲ್ಲಿದೆ ಎನ್ನುತ್ತಾರೆ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಮೋಹನ್ ಭಟ್ಕಳ್. ಗೌಜಿ ಗಮ್ಮತ್ ಹೆಸರು ಸೂಚಿಸುವಂತೆ ಇದು ಹಾಸ್ಯ ಪ್ರಧಾನ ಸಿನಿಮಾ. ಪ್ರೇಕ್ಷಕರ ನಾಡಿಮಿಡಿತವನ್ನು ಅರಿತು ನಿರ್ದೇಶಕ ಮಣಿ ಎಜೆ ಕಾರ್ತಿಕೇಯನ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆ ಸಂಭಾಷಣೆಯನ್ನು ಸಂದೀಪ್ ಬೆದ್ರ ಬರೆದಿದ್ದಾರೆ.

ತಾರಾಬಳಗದಲ್ಲಿ ಖ್ಯಾತ ನಾಮ ಕಲಾವಿದರಿದ್ದಾರೆ. ಮುಖ್ಯವಾಗಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ (Devdas Kapikad). ಕುಸಲ್ದರಸೆ  ನವೀನ್ ಡಿ ಪಡೀಲ್ (Naveen D Padil),   ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ (Arvind Bolar) ಪ್ರಮುಖ ಪಾತ್ರದಲ್ಲಿದ್ದಾರೆ.  ನಾಯಕ  ನಟನಾಗಿ  ಕರ್ಣ ಉದ್ಯಾವರ್  ನಾಯಕಿಯಾಗಿ  ಸ್ವಾತಿ ಪ್ರಕಾಶ್  ಶೆಟ್ಟಿ ಅಭಿನಯಿಸಿದ್ದಾರೆ.

ಇನ್ನುಳಿದಂತೆ ಪ್ರಸನ್ನ ಶೆಟ್ಟಿ ಬೈಲೂರ್,  ಉಮೇಶ್ ಮಿಜಾರ್,   ಜಯಶೀಲಾ ಮರೋಳಿ, ಪ್ರಭಾಕರ್ ಬ್ರಹ್ಮಾವರ,  ಚಂದ್ರಹಾಸ ಶೆಟ್ಟಿ ಮಾಣಿ , ಸುಜಾತ ಶಕ್ತಿನಗರ,  ಕಿಶೋರ್ ಶೆಟ್ಟಿ ಪಿಲಾರ್,  ಹರೀಶ್ ಪೂಜಾರಿ ಕಡ್ತಲ,  ಹರೀಶ್ಚಂದ್ರ ಪೆರಾಡಿ ಪ್ರಭಾಕರ್ ಆಚಾರ್‍ಯ ಮೂಡುಬೆಳ್ಳೆ,  ಅಶ್ವತ್ ಶೆಟ್ಟಿ ವಿಕ್ಕಿ ರಾವ್ ಮಿರ್ಚಿ ಸಂದೇಶ್ ದೇವಾಡಿಗ ಅಶ್ವತ್ಥಪುರ ಶಿವರಾಮ್ ವಿಟ್ಲ ರಾಧಿಕಾ ಭಟ್  ವನಿತಾ ಸುವರ್ಣ ನರಸಿಂಹ ನಾಯಕ್, ರಶ್ಮಿತಾ ಸಾಲಿಯಾನ್ ಪಿಲಾರ್ ಸುರಕ್ಷಾ ಕೋಟ್ಯಾನ್ ಪಿಲಾರ್ , ಲೊಕೇಶ್ ಮಾಣಿಲ  ಅನುಷಾ ಶೆಟ್ಟಿ ,  ಬೇಬಿ ಚಿತ್ರಿತಾ ದೇವಾಡಿಗ ಹಳೆಯಂಗಡಿ  , ಲೊಕೇಶ್ ಶೆಟ್ಟಿ  , ಜ್ಞಾನೇಶ್ ಆಚಾರ್ಯ, ಶಶಿರಾಜ್ ಆಚಾರ್ಯ  ಮಧು ಪೂಜಾರಿ ವಿಷ್ಣುನಗರ ನಿಲೇಶ್ ಶೆಟ್ಟಿ ಮೊದಲಾದವರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಮಣಿಕಾಂತ್ ಕೆ.ಎನ್., ಜಯಶೀಲ ಮರೋಳಿ, ನಿರ್ಮಾಪಕರಾದ ವಿನಾಯಕ ತೀರ್ಥಹಳ್ಳಿ, ಮೋಹನ್ ಭಟ್ಕಳ್, ನಾಯಕಿ ಸ್ವಾತಿ ಪ್ರಕಾಶ್ ಶೆಟ್ಟಿ, ಖ್ಯಾತ ರಂಗಭೂಮಿ ಕಲಾವಿದರಾದ ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್ ಮತ್ತಿತರರು ಉಪಸ್ಥಿತರಿದ್ದರು.

Share This Article