ದುಲ್ಕರ್ ಸಲ್ಮಾನ್ ಜೊತೆ `ಗಟ್ಟಿಮೇಳ’ ನಿಶಾ ರವಿಕೃಷ್ಣನ್

Public TV
1 Min Read

ನ್ನಡ ಕಿರುತೆರೆಯ `ಗಟ್ಟಿಮೇಳ’ ಸೀರಿಯಲ್ ಮೂಲಕ ಮನೆ ಮಾತಾಗಿರುವ ನಟಿ ನಿಶಾ ರವಿಕೃಷ್ಣನ್ ತೆಲುಗು ಕಿರುತೆರೆಯಲ್ಲೂ ಛಾಪೂ ಮೂಡಿಸುತ್ತಿದ್ದಾರೆ. ಸದ್ಯ ಮಾಲಿವುಡ್ ಸ್ಟಾರ್ ದುಲ್ಕರ್ ಸಲ್ಮಾನ್‌ಗೆ ನಿಶಾ ರವಿಕೃಷ್ಣನ್ ಜೊತೆಯಾಗಿದ್ದಾರೆ.

`ಗಟ್ಟಿಮೇಳ’ ಸೀರಿಯಲ್‌ನ ಅಮೂಲ್ಯ ಆಗಿ ಸಾಕಷ್ಟು ಅಭಿಮಾನಿಗಳ ಮನಗೆದ್ದಿರುವ ನಿಶಾ ರವಿಕೃಷ್ಣನ್ ಈಗ ತೆಲುಗು ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಈ ವೇಳೆ ತೆಲುಗಿನ ಶೋವೊಂದರಲ್ಲಿ ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ `ಸೀತಾ ರಾಮಂ’ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದರು. ಈ ವೇಳೆ ದುಲ್ಕರ್ ಸಲ್ಮಾನ್ ಅವರನ್ನು ನಿಶಾ ಭೇಟಿಯಾಗಿದ್ದಾರೆ. ಇದನ್ನೂ ಓದಿ:ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ

ಶೋನಲ್ಲಿ ಸಹನಟ ಸಿದ್ದು ಜತೆ ನಿಶಾ ಹೆಜ್ಜೆ ಹಾಕಿದ್ದರು. ನಿಶಾ ಅವರ ಡ್ಯಾನ್ಸ್ ನೋಡಿ ದುಲ್ಕರ್ ಸಲ್ಮಾನ್ ಕೂಡ ಮೆಚ್ಚುಗೆ ಸೂಚಿಸಿದ್ದರು. ಈ ವೇಳೆ ದುಲ್ಕರ್ ಸಲ್ಮಾನ್ ಮಾತಿಗೆ ನಿಶಾ ಸಖತ್ ಖುಷಿಪಟ್ಟಿದ್ದಾರೆ. ಇಂದು 36ನೇ ವಸಂತಕ್ಕೆ ಕಾಲಿಟ್ಟಿರುವ ದುಲ್ಕರ್ ಸಲ್ಮಾನ್‌ಗೆ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ದುಲ್ಕರ್ ಜತೆಗಿನ ಫೋಟೋ ಹಂಚಿಕೊಂಡು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *