ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಸಿಲಿಂಡರ್‌ ಸ್ಫೋಟ – ಮನೆ ಗೋಡೆ ಛಿದ್ರ

1 Min Read

ಬೆಂಗಳೂರು: ರಾಮಮೂರ್ತಿ ನಗರದ ಬಳಿಕ ಬೆಂಗಳೂರಿನ (Bengaluru) ಮತ್ತೊಂದು ಸ್ಥಳದಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡರ್‌ ಸ್ಫೋಟಗೊಂಡಿರುವ (Cylinder Blast) ಘಟನೆ ನಡೆದಿದೆ.

ಇಲ್ಲಿನ ರಾಮಮೂರ್ತಿ ನಗರದಲ್ಲಿ ಇತ್ತೀಚೆಗಷ್ಟೇ ಸಿಲಿಂಡರ್ ಸ್ಫೋಟಗೊಂಡು ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಯಲಹಂಕದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಬಾಗೇಪಲ್ಲಿ ಮೂಲದ ದಂಪತಿಗಳಿಬ್ಬರು ಗಾಯಗೊಂಡಿದ್ದಾರೆ. ಕೃಷ್ಣಮ್ಮ-ರಾಜು ಗಾಯಗೊಂಡ ಪತಿ ಪತ್ನಿ. ಇದನ್ನೂ ಓದಿ: ಬೆಂಗಳೂರು | ಡಿವೈಡರ್‌ ಹಾರಿ ಬಸ್‌ಗೆ ಡಿಕ್ಕಿಯಾದ ಕಾರು – ಐವರು ದುರ್ಮರಣ

ಇಂದು (ಭಾನುವಾರ) ಬೆಳಗ್ಗೆ 6 ಗಂಟೆ ಸುಮಾರಿಗೆ ಯಲಹಂಕದ ಚೌಡೇಶ್ವರಿ ಲೇಔಟ್‌ನ ಮನೆಯೊಂದರಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡರ್‌ ಸ್ಫೋಟಗೊಂಡಿದೆ. ಸ್ಫೋಟ ಹೇಗಾಯಿತು ಅನ್ನೋದರ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ. ಆದ್ರೆ ಬೆಳಗ್ಗೆ ಗ್ಯಾಸ್‌ ಹಚ್ಚುವಾಗ ಅಥವಾ ಲೈಟ್‌ ಆನ್‌ ಮಾಡಿದಾಗ ಗ್ಯಾಸ್‌ ಸಂಭವಿಸಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಸ್ಪೋಟದ ತೀವ್ರತೆಗೆ ಮನೆಗೋಡೆಯ ಒಂದು ಭಾಗವೇ ಛಿದ್ರವಾಗಿದೆ. ಬಳಿಕ ಘಟನೆಯಲ್ಲಿ ಗಾಯಗೊಂಡಿದ್ದ ಕೃಷ್ಣಮ್ಮ-ರಾಜು ದಂಪತಿಯನ್ನ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಬಾಗೇಪಲ್ಲಿ ಕೃಷ್ಣಮ್ಮ-ರಾಜು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇನ್ನೂ ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ – ಐವರು ಯುವತಿಯರ ರಕ್ಷಣೆ, ಇಬ್ಬರು ಅರೆಸ್ಟ್

Share This Article