ಪಾನಿಪೂರಿ ವ್ಯಾಪಾರಕ್ಕೂ ತಟ್ಟಿದ ಗ್ಯಾಸ್ ಬಿಸಿ

1 Min Read

ಬೀದರ್: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ದೊಡ್ಡ ಉದ್ಯಮಗಳು ಸೇರಿದಂತೆ ಬೀದಿಬದಿಯ ವ್ಯಾಪಾರಿಗಳಿಗೂ ಸಮಸ್ಯೆ ಎದುರಾಗಿದೆ. ಅದರಂತೆ ಪಾನಿಪೂರಿ ವ್ಯಾಪಾರಕ್ಕೂ ಗ್ಯಾಸ್ ಸಿಲಿಂಡರ್ (Gas Cylinder) ಎಫೆಕ್ಟ್ ತಟ್ಟಿದೆ.

ಗಡಿ ಜಿಲ್ಲೆ ಬೀದರ್‌ನ ಪಾನಿಪೂರಿ ವ್ಯಾಪಾರಕ್ಕೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಿಸಿ ತಟ್ಟಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳು ಸಿಗದೇ ನಾಲ್ಕೈದು ದಿನಗಳಿಂದ ಪಾನಿಪೂರಿ ವ್ಯಾಪಾರಸ್ಥರು ತಮ್ಮ ಗಾಡಿಗಳನ್ನು ಬಂದ್ ಮಾಡಿದ್ದಾರೆ. ಖಾಲಿ ಗ್ಯಾಸ್ ಸಿಲಿಂಡರ್‌ಗಳನ್ನು ಹಿಡಿದು ಎಜೆನ್ಸಿಗಳಿಗೆ ಹೋದರೂ ಗ್ಯಾಸ್ ಸಿಗುತ್ತಿಲ್ಲ. ಇನ್ನೂ ಕಾಳಸಂತೆಯಲ್ಲಿ ನಾಲ್ಕೈದು ಸಾವಿರ ರೂ. ನೀಡಿದ್ರೂ ಕೂಡ ಗ್ಯಾಸ್ ಸಿಗುತ್ತಿಲ್ಲ. ಹೀಗಾಗಿ ಪ್ರತಿದಿನ 2 ಸಾವಿರದಿಂದ 3 ಸಾವಿರ ರೂ. ದುಡಿದು ಜೀವನ ಮಾಡುತ್ತಿದ್ದ ಪಾನಿಪೂರಿ ವ್ಯಾಪಾರಸ್ಥರು ಎಲ್‌ಪಿಸಿ ಸಿಲಿಂಡರ್ ಸಿಗದೇ ವ್ಯಾಪಾರ ಕ್ಲೋಸ್ ಮಾಡಿದ್ದಾರೆ.  ಇದನ್ನೂ ಓದಿ: ಸೈಬರ್ ವಂಚಕರಿಂದ ಸಂಕಷ್ಟಕ್ಕೆ ಸಿಲುಕಿದ ಯೋಧ – ಅಕೌಂಟ್ ಅನ್‌ಫ್ರೀಜ್ ಮಾಡುವಂತೆ ಬೆಂಗ್ಳೂರು ಖಾಕಿಗೆ ಮನವಿ

ನಗರದ ಸೇರಿದಂತೆ ಜಿಲ್ಲೆಯಾದ್ಯಂತ ಪಾನಿಪೂರಿ ವ್ಯಾಪಾರಕ್ಕೆ ಗ್ಯಾಸ್ ಬಿಸಿ ತಟ್ಟಿ ವ್ಯಾಪಾರ ಬಂದ್ ಮಾಡಲಾಗಿದೆ. ಗ್ಯಾಸ್‌ಗಾಗಿ ಅಲೆದು ಅಲೆದು ಸುಸ್ತಾಗಿದ್ದು, ಕಾಳಸಂತೆಯಲ್ಲಿ ನಾಲ್ಕೈದು ಸಾವಿರ ರೂ.ಗೆ ಗ್ಯಾಸ್ ಪಡೆದು ಲಾಭ ಗಳಿಸೋಕೆ ಸಾಧ್ಯವಿಲ್ಲ. ಹೀಗಾದ್ರೆ ಜೀವನ ನಡೆಸೋದು ಹೇಗೆ ಎಂದು ಪಾನಿಪೂರಿ ವ್ಯಾಪಾರಸ್ಥರು ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Share This Article