ಕೊನೆಗೂ ನಮ್ಮ ಕನಸು ನನಸಾಗಿದೆ: ಆಲಿಯಾ ಹೀಗೆಂದಿದ್ದೇಕೆ?

Public TV
2 Min Read

ಮುಂಬೈ: ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಕೊನೆಗೂ ನಮ್ಮ ಕನಸು ನನಸಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾದ ‘ಧೋಲಿಡಾ’ ಸಾಂಗ್ ಇಂದು ರಿಲೀಸ್ ಆಗಿದೆ. ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾಗಳಲ್ಲಿ ಡ್ಯಾನ್ಸ್ ಗೆ ಯಾವಾಗಲೂ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತೆ. ಅದೇ ರೀತಿ ಇಂದು ರಿಲೀಸ್ ಆದ ‘ಧೋಲಿಡಾ’ ಹಾಡಿನಲ್ಲಿ ಡ್ಯಾನ್ಸ್ ಸಖತ್ ಆಗಿ ಮೂಡಿಬಂದಿದೆ. ಇದನ್ನೂ ಓದಿ: ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!

ಇನ್‍ಸ್ಟಾಗ್ರಾಮ್‍ನಲ್ಲಿ ಆಲಿಯಾ, ಕೊನೆ ನಮ್ಮ ಕನಸು ನನಸಾಗಿದೆ. ಸಂಜಯ್ ಲೀಲಾ ಬನ್ಸಾಲಿ ಅವರು ಸಂಯೋಜಿಸಿದ ಡ್ಯಾನ್ಸ್ ಕೊನೆಗೂ ಇಂದು ರಿಲೀಸ್ ಆಗಿದೆ. ನನ್ನ ಹೃದಯ ಯಾವಾಗಲೂ ‘ಧೋಲಿಡಾ’ಗಾಗಿ ಮಿಡಿಯುತ್ತಿರುತ್ತೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಡ್ಯಾನ್ಸ್ ನೋಡಿ ಫುಲ್ ಫಿದಾ ಆಗಿದ್ದಾರೆ.

 

View this post on Instagram

 

A post shared by Gangubai ???????? (@aliaabhatt)

ಗಂಗೂಬಾಯಿ ಪಾತ್ರಧಾರಿಯಾದ ಆಲಿಯಾ ಡ್ಯಾನ್ಸ್ ಮಾಡಿದ್ದು, ವೀಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಸಾಂಗ್‍ನಲ್ಲಿ ಆಲಿಯಾ ಬಿಳಿ ಸೀರೆಯನ್ನು ಧರಿಸಿದ್ದು, ಫುಲ್ ಜೋಶ್‍ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಹಾಡಿನ ಕೊನೆಯ ಸೀನ್ ಹೈಲೈಟ್ ಆಗಿದೆ. ಈ ಹಾಡನ್ನು ಸಂಜಯ್ ಲೀಲಾ ಬನ್ಸಾಲಿ ಸಂಯೋಜಿಸಿದ್ದಾರೆ. ಜಾಹ್ನವಿ ಶ್ರೀಮಾನ್ಕರ್ ಮತ್ತು ಶೈಲ್ ಹಾಡಿದ್ದಾರೆ. ಸಾಹಿತ್ಯವನ್ನು ಕುಮಾರ್ ಅವರು ಬರೆದಿದ್ದಾರೆ.

Sanjay Leela Bhansali

ಕಥೆಯ ಎಳೆ!
ಗಂಗೂಬಾಯಿ ಕಥಿಯವಾಡಿ ಮುಂಬೈನ ಕಾಮತಿಪುರದಲ್ಲಿ ಲೈಂಗಿಕ ಕಾರ್ಯಕರ್ತೆ, ಚಿಕ್ಕ ವಯಸ್ಸಿನಲ್ಲಿಯೇ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟ ನಿಜ ಜೀವನದ ಮಹಿಳೆಯ ಪ್ರಯಾಣವನ್ನು ಈ ಸಿನಿಮಾದಲ್ಲಿ ಚಿತ್ರೀಕರಿಸಲಾಗಿದೆ.

ಈ ಸಿನಿಮಾ ಫೆಬ್ರವರಿ 25 ರಂದು ಬಿಡುಗಡೆಯಾಗಲಿದೆ. ಭಿನ್ನ ರೀತಿಯ ಸಿನಿಮಾವನ್ನು ಮಾಡಲು ಸಂಜಯ್ ಲೀಲಾ ಬನ್ಸಾಲಿ ಯಾವಾಗಲೂ ಉತ್ಸುಕರಾಗಿರುತ್ತಾರೆ. ಬನ್ಸಾಲಿ ಅವರ ಜೊತೆ ಆಲಿಯಾ ಅವರಿಗೆ ‘ಗಂಗೂಬಾಯಿ ಕಥಿಯಾವಾಡಿ’ ಚೊಚ್ಚಲ ಸಿನಿಮಾವಾಗಿದೆ. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

‘ಗಂಗೂಬಾಯಿ ಕಥಿಯಾವಾಡಿ’ ಹೊರತುಪಡಿಸಿ, ಆಲಿಯಾ ಭಟ್ ರಾಜಮೌಳಿ ನಿರ್ದೇಶನದ ‘RRR’ ಸಿನಿಮಾದಲ್ಲಿಯೂ ಐತಿಹಾಸಿಕ ಪಾತ್ರದಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಯ ಹಂತದಲ್ಲಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಸಹ ನಟಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‍ಟಿಆರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *