ದೆಹಲಿ ಕೋರ್ಟ್‌ನಲ್ಲಿ ಗುಂಡು ಹಾರಿಸಿದ್ದ ಆರೋಪಿ ತಿಹಾರ್ ಜೈಲಿನಲ್ಲಿ ಹತ್ಯೆ

Public TV
1 Min Read

ನವದೆಹಲಿ: ಕೋರ್ಟ್‌ನಲ್ಲಿ (Court) ಗುಂಡು ಹಾರಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಗ್ಯಾಂಗ್‌ಸ್ಟರ್ (Gangster) ಟಿಲ್ಲು ತಾಜ್‌ಪುರಿಯಾನನ್ನು (Tillu Tajpuriya) ಬೇರೊಂದು ಗ್ಯಾಂಗ್‌ನ ಸಹ ಕೈದಿಗಳು ಥಳಿಸಿ ಹತ್ಯೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಮುಂಜಾನೆ ತಿಹಾರ್ ಜೈಲಿನಲ್ಲಿದ್ದ (Tihar Jail) ಟಿಲ್ಲು ತಾಜ್‌ಪುರಿಯಾ ಅಲಿಯಾಸ್ ಸುನೀಲ್ ಮಾನ್‌ನನ್ನು ಮತ್ತೊಬ್ಬ ಗ್ಯಾಂಗ್‌ಸ್ಟರ್ ಯೋಗೇಶ್ ತುಂಡಾ ಹಾಗೂ ಆತನ ಸಹಚರರು ಕಬ್ಬಿಣದ ರಾಡ್‌ಗಳಿಂದ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಟಿಲ್ಲುನನ್ನು ತಕ್ಷಣ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅಲ್ಲಿ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಘಟನೆಯೇನು?
2021ರಲ್ಲಿ ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ (Rohini Court) ಗ್ಯಾಂಗ್‌ಸ್ಟರ್ ಜಿತೇಂದರ್ ಗೋಗಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ಟಿಲ್ಲು ಪ್ರಮುಖ ಆರೋಪಿಯಾಗಿದ್ದ. ನ್ಯಾಯಾಲಯದ ಒಳಗಡೆ ಇಬ್ಬರು ವಕೀಲರ ವೇಷದಲ್ಲಿ ಬಂದಿದ್ದ ಗ್ಯಾಂಗ್‌ಸ್ಟರ್‌ಗಳು ಜಿತೇಂದರ್ ಗೋಗಿ ಮೇಲೆ ಗುಂಡು ಹಾರಿಸಿ ಕೊಂದಿದ್ದರು. ಆ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿ ಆರೋಪಿಗಳಿಬ್ಬರನ್ನೂ ಗುಂಡಿಕ್ಕಿ ಕೊಂದಿದ್ದರು. ಇದನ್ನೂ ಓದಿ: ಮಳೆ, ಹಿಮಪಾತ – ತಂಗಿರುವ ಸ್ಥಳದಲ್ಲಿಯೇ ಇರಿ: ಕೇದಾರನಾಥ ಯಾತ್ರಾರ್ಥಿಗಳಿಗೆ ಎಚ್ಚರಿಕೆ

ಜಿತೇಂದರ್ ಗೋಗಿ ಗ್ಯಾಂಗ್ ಹಾಗೂ ಟಿಲ್ಲು ಗ್ಯಾಂಗ್ ನಡುವೆ ಹಲವು ವರ್ಷಗಳಿಂದ ದ್ವೇಷವಿತ್ತು. ಈ ಹಿನ್ನೆಲೆ ಗುಂಡಿನ ದಾಳಿ ನಡೆಸಿದ್ದರು. ಜಿತೇಂದರ್ ಗೋಗಿ ಮೇಲೆ ಗುಂಡು ಹಾರಿಸಲು ಟಿಲ್ಲು ತಾಜ್‌ಪುರಿಯಾ ಫೋನ್ ಕಾಲ್ ಮೂಲಕ ಆರೋಪಿಗಳಿಗೆ ಸೂಚನೆಯನ್ನು ನೀಡಿದ್ದ ಎಂಬುದು ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಖರ್ಗೆ ತವರಿನಲ್ಲಿ ಮೋದಿ ದಂಡಯಾತ್ರೆ – 25 ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು

Share This Article