ಡ್ರಾಪ್ ನೆಪದಲ್ಲಿ ಮಾಡ್ತಿದ್ಲು ಸೆಕ್ಸ್ ದಂಧೆ – ಟೆಕ್ಕಿಗಳನ್ನ ಯಾಮಾರಿಸ್ತಿದ್ದ ಗ್ಯಾಂಗ್ ಅರೆಸ್ಟ್

Public TV
2 Min Read

ಬೆಂಗಳೂರು: ನಗರದಲ್ಲಿ ಅಪರಾಧ ಲೋಕ ವಿವಿಧ ರೀತಿಯಲ್ಲಿ ಬೆಳೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಸೆಕ್ಸ್ ದಂಧೆ ಹೆಚ್ಚಾಗ್ತಿದೆ. ಸೆಕ್ಸ್‍ಗಾಗಿ ಹಪಹಪಿಸೋ ಯುವಕರನ್ನೇ, ಅದರಲ್ಲೂ ಟೆಕ್ಕಿಗಳನ್ನೇ ಟಾರ್ಗೆಟ್ ಮಾಡೋ ಖತರ್ನಾಕ್ ಗ್ಯಾಂಗ್‍ವೊಂದನ್ನ ಸಿಸಿಬಿ ಪೊಲೀಸರು ಮಫ್ತಿಯಲ್ಲಿ ಬೇಟೆಯಾಡಿದ್ದಾರೆ.

ಈ ದಂಧೆಯಲ್ಲಿ ಲತಾ, ಆಕೆಯ ಲವರ್ ಕಿರಣ್ ಹಾಗೂ ಆತನ ಸಹಚರರು ಭಾಗಿಯಾಗಿ ಟೆಕ್ಕಿಗಳನ್ನ ಹೆದರಿಸುತ್ತಿದ್ದರು. ಮೊದಲಿಗೆ ಡ್ರಾಪ್ ಕೇಳುವ ನೆಪದಲ್ಲಿ ಲತಾ ಟೆಕ್ಕಿಗಳನ್ನ ಮಾತನಾಡಿಸುತ್ತಾಳೆ. ತದನಂತರ ಸ್ನೇಹಿತೆಯ ರೂಪದಲ್ಲಿ ಹುಡುಗರನ್ನ ಪಟಾಯಿಸುತ್ತಾಳೆ. ಇದಾದ ಬಳಿಕ ಪಟಾಯಿಸಿದ ಹುಡುಗರನ್ನು ರೂಮಿಗೆ ಕೂಡ ಕರೆಯುತ್ತಾಳೆ. ಆದರೆ ಆ ರೂಮಿನಲ್ಲಿ ಬೇರೆ ಯಾರೋ ಹುಡುಗಿ ಇರುತ್ತಾಳೆ. ಅವಳೊಂದಿಗೆ ಸೆಕ್ಸ್ ಮಾಡಲು ಲತಾ ಹೇಳುತ್ತಾಳೆ. ಅಲ್ಲಿಂದ ಲತಾ ಕಾಲ್ಕೀಳುತ್ತಾಳೆ. 10 ನಿಮಿಷದ ಬಳಿಕ ಲತಾಳ ಲವರ್ ಕಿರಣ್ ಹಾಗೂ ಆತನ ಸ್ನೇಹಿತರು ಐದೂ ಜನ ಒಟ್ಟಿಗೆ ಟೆಕ್ಕಿ ಇರುವ ಮನೆಗೆ ದಾಳಿ ಮಾಡುತ್ತಾರೆ. ಬಳಿಕ ಟೆಕ್ಕಿಯ ಬೆತ್ತಲೆ ಚಿತ್ರಣ ಹಾಗೂ ಹುಡುಗಿಯೊಂದಿಗೆ ಇರುವ ವಿಡಿಯೋ ಮಾಡುತ್ತಾರೆ. ಆರೋಪಿ ಕಿರಣ್ ಹಾಗೂ ರಾಘವೇಂದ್ರ ಟೆಕ್ಕಿಗೆ ಧಮ್ಕಿ ಹಾಕುತ್ತಾರೆ. ತದನಂತರ ಲತಾ ಮನೆಗೆ ಬಂದು ಹಣ, ಒಡವೆ ಹಾಗೂ ಮೊಬೈಲ್ ಕೀಳುತ್ತಾಳೆ.

ಎರಡು ದಿನಗಳ ಹಿಂದೆ ಹೊಂಗಸಂದ್ರ ರಸ್ತೆಯಲ್ಲಿರುವ ಮನೆಗೆ ಖಾಸಗಿ ಉದ್ಯೋಗಿಯೊಬ್ಬರು ಕಾರಿನಲ್ಲಿ ಬರುವಾಗ ಲತಾ ಹಾಗೂ ಆತನ ಹುಡುಗರು ಉದ್ಯೋಗಿಯನ್ನ ತಡೆದು ಹೊಂಗಸಂದ್ರ ಮುಖ್ಯರಸ್ತೆಯಲ್ಲಿರುವ 3ನೇ ಅಡ್ಡರಸ್ತೆಗೆ ಕರೆದೊಯ್ದು ಲತಾಳ ಮನೆಯಲ್ಲಿ ಇರಿಸಿದ್ರು. ಬಳಿಕ ಲತಾ ಹುಡುಗಿಯನ್ನ ಕರೆಸಿ ಬೆತ್ತಲೆ ಮಾಡಿ ಉದ್ಯೋಗಿ ಶಿವಕುಮಾರ್‍ನೊಂದಿಗೆ ಫೋಟೋವನ್ನೂ ಸಹ ತೆಗೆಸಿದ್ದಳು. ಲತಾಳ ಹುಡುಗರಾದ ಕಿರಣ್ ಹಾಗೂ ಸಂಗಡಿಗರು ಉದ್ಯೋಗಿಯ ಮೊಬೈಲ್ ಕಸಿದು ಬೇರೆ ಮೊಬೈಲ್ ನೀಡಿ 50 ಸಾವಿರ ಹಣವನ್ನು ತರಲು ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ದೂರು ಸ್ವೀಕರಿಸಿದ ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಂಡವನ್ನು ರಚನೆ ಮಾಡಿ ಇನ್ಸ್ ಪೆಕ್ಟರ್ ಕುಲಕರ್ಣಿ ನೇತೃತ್ವದಲ್ಲಿ ಆರೋಪಿಗಳನ್ನ ಸೆರೆ ಹಿಡಿದಿದ್ದಾರೆ.

ಉದ್ಯೋಗಿಗೆ ಬೆಳಗ್ಗಿನಿಂದ ಕರೆ ಮಾಡಿ 50 ಸಾವಿರ ಬೇಡಿಕೆ ಇಟ್ಟಿದ್ದ ಕಿರಣ್ ಹಾಗೂ ಆತನ ಸ್ನೇಹಿತರು ಉದ್ಯೋಗಿ ಶಿವಕುಮಾರ್‍ನನ್ನು ಸಿಲ್ಕ್‍ಬೋರ್ಡ್ ಬಳಿ ಇರುವ ಖಾಸಗಿ ಶೋರೋ ಬಳಿ ಬರಲು ಹೇಳಿದ್ದಾರೆ. ಇನ್ನು ಸಿಸಿಬಿ ತಂಡ ಎಚ್ಚರ ವಹಿಸಿ ನಿಗಾ ಇಟ್ಟು ಅಲ್ಲೇ ಬೀಡು ಬಿಟ್ಟಿದ್ದರು. ಸಿಸಿಬಿ ಪೊಲೀಸರು ಮಫ್ತಿನಲ್ಲಿ ಇದ್ದು, ಶಿವಕುಮಾರ್ ಆರೋಪಿ ರಾಘವೇಂದ್ರನೊಂದಿಗೆ ಮಾತನಾಡುತ್ತಿದ್ದ. ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನುಳಿದ ಆರೋಪಿಗಳು ಓಡಲು ಪ್ರಾರಂಭಿಸಿದರು. ಇವರನ್ನು ಹಿಂಬಾಲಿಸಿದ ಸಿಸಿಬಿ ಪೊಲೀಸರು ಉಳಿದ ಮೂವರು ಆರೋಪಿಗಳನ್ನು ಹಿಡಿದರು.

ಪ್ರಮುಖ ಆರೋಪಿ ಲತಾ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಪ್ರಯತ್ನಪಟ್ಟಳು. ಆದರೆ ಅವಳ ಪ್ಲಾನ್ ಠುಸ್ ಆದ ಕಾರಣ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

 

Share This Article
Leave a Comment

Leave a Reply

Your email address will not be published. Required fields are marked *