ಬೆಂಗಳೂರಲ್ಲಿ ಬೀದಿ ನಾಯಿ ಮೇಲೆ ಗ್ಯಾಂಗ್‌ ರೇಪ್‌; ನಶೆಯಲ್ಲಿದ್ದ ಕಾಮುಕರಿಂದ ಪೈಶಾಚಿಕ ಕೃತ್ಯ

Public TV
1 Min Read

ಬೆಂಗಳೂರು: ಕುಡಿದ ನಶೆಯಲ್ಲಿದ್ದ ನಾಲ್ವರು ವಿಕೃತ ಕಾಮುಕರು ಬೀದಿ ನಾಯಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿಸುವ ಪೈಶಾಚಿಕ ಕೃತ್ಯ ಬೆಂಗಳೂರಿನ (bengaluru) ಕೊಡತಿ ಗ್ರಾಮದಲ್ಲಿ ನಡೆದಿದೆ.

ಅ.13ರಂದು ರಾತ್ರಿ 10:30ರ ಸುಮಾರಿಗೆ ಘಟನೆ ನಡೆದಿದ್ದು, ಗ್ರಾಮಸ್ಥರು ಬೆಳ್ಳಂದೂರು ಪೊಲೀಸರಿಗೆ ದೂರು ನೀಡಿದ ಬಳಿಕ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪ್ರೇಯಸಿ ಕೊಲೆಗೈದ ಪಾಗಲ್‌ ಪ್ರೇಮಿಗಾಗಿ ಹುಡುಕಾಟ; ತಮಿಳುನಾಡಿಗೆ ಎಸ್ಕೇಪ್‌ ಆಗಿರೋ ಶಂಕೆ

ಏನಿದು ಪ್ರಕರಣ?
ನಾಯಿ ಕಾಣೆಯಾಗಿರುವುದಾಗಿ ವರ್ತೂರು ಪೊಲೀಸ್ ಠಾಣೆಯಲ್ಲಿ (Varthur Police Station) ದೂರು ದಾಖಲಿಸಿಕೊಂಡಿದ್ದರು. ಬಳಿಕ ಬೆಳ್ಳಂದೂರು ಠಾಣೆಯಲ್ಲಿ ನಾಯಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆಂದು ದೂರು ದಾಖಲಾಗಿತ್ತು. ಮಹಿಳೆಯೊಬ್ಬರು ನಾಯಿಗೆ ವಾಕ್‌ ಮಾಡಿಸುತ್ತಿದ್ದರು. ಈ ವೇಳೆ ಮತ್ತೊಂದು ನಾಯಿ ಕಿರುಚಿದ ಶಬ್ಧ ಕೇಳಿಬಂದಿದೆ. ಅಲ್ಲಿ ಹೋಗಿ ನೋಡಿದಾಗ ಪೈಶಾಚಿಕ ಕೃತ್ಯ ನಡೆದಿರೋದು ಬೆಳಕಿಗೆ ಬಂದಿದೆ. ಗುರುವಾರ ಮಧ್ಯಾಹ್ನ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Share This Article