ಹರ್ಷ ಹತ್ಯೆ ಹಿಂದೆ SDPI, CFI ಕೈವಾಡವಿದೆ: ಮಾಜಿ ಎಂಎಲ್‍ಸಿ ಗಣೇಶ್ ಕಾರ್ಣಿಕ್

By
1 Min Read

ಮಡಿಕೇರಿ: ಭಾರತ ಸಂವಿಧಾನವನ್ನು ಒಪ್ಪದ ಮನಸ್ಸುಗಳಿಂದ ಶಿವಮೊಗ್ಗದ ಬಜರಂಗದಳದ ಯುವಕ ಹರ್ಷ ಹತ್ಯೆಯಾಗಿದ್ದು, ಎಸ್‍ಡಿಪಿಐ, ಸಿಎಫ್‍ಐಗಳ ಕೈವಾಡವಿದೆ ಮಾಜಿ ಎಂಎಲ್‍ಸಿ ಗಣೇಶ್ ಕಾರ್ಣಿಕ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಪುನರುತ್ಥಾನ ಸಹಿಸದವರಿಂದ ಈ ಕೃತ್ಯ ನಡೆದಿದೆ. ಶಾಂತವಾಗಿರುವ ಜಿಲ್ಲೆಯಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡಲು ಹೊರಟಿದ್ದಾರೆ. ನಾವು ಪ್ರತ್ಯೇಕ, ಇದೊಂದು ಇಸ್ಲಾಂ ರಾಷ್ಟ್ರವಾಗಬೇಕೆಂಬ ಭಾವನೆಯೊಂದಿಗೆ ಶಾಂತಿ ಸುವ್ಯವಸ್ಥೆ ಹಾಳು ಮಾಡಲಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಪಪ್ರಚಾರ ಮಾಡಿದವರು ಕೊನೆಗೆ ಲಸಿಕೆ ಹಾಕಿಸಿಕೊಂಡರು: ಅಖಿಲೇಶ್‍ಗೆ ಮೋದಿ ಟಾಂಗ್

ಹರ್ಷನ ಹತ್ಯೆ ಮಾಡಿರುವವರಿಗೂ ಹರ್ಷನಿಗೂ ಯಾವುದೇ ವೈಯಕ್ತಿಕ ದ್ವೇಷಗಳಿರಲಿಲ್ಲ. ಆದರೆ ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಹರ್ಷ ಎಲ್ಲಿಗೆ, ಎಷ್ಟೊತ್ತಿಗೆ ಹೋಗುತ್ತಾನೆ ಎಂಬುದನ್ನು ಪ್ಲಾನ್ ಮಾಡಲಾಗಿದೆ. ಹತ್ಯೆಯ ಹಿಂದೆ ಹಿಜಬ್ ವಿಚಾರ ಕೂಡ ತಳಕು ಹಾಕಿಕೊಂಡಿದೆ. ಇದರ ಹಿಂದೆ ಎಸ್‍ಡಿಪಿಐ, ಸಿಎಫ್‍ಐಗಳ ಕೈವಾಡವಿದೆ. ಅದೆಲ್ಲವನ್ನೂ ಸರ್ಕಾರ ಪತ್ತೆ ಹಚ್ಚಬೇಕಾಗಿದೆ. ಶಿವಮೊಗ್ಗದಲ್ಲಿ ನಡೆದಿರುವ ಇದೊಂದೆ ಘಟನೆಯಲ್ಲ. ದೇಶದಾದ್ಯಂತ ಭಯವನ್ನುಟ್ಟಿಸಿ ಭಯೋತ್ಪಾದನೆ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಲಯಾಳಂ ಗೊತ್ತಿದ್ರೆ ಮಾತ್ರ ಸರ್ಕಾರಿ ಉದ್ಯೋಗ ಎಂದ ಸಿಎಂ – ಗಡಿಭಾಗದ ಕನ್ನಡಿಗರಲ್ಲಿ ಆತಂಕ

Share This Article
Leave a Comment

Leave a Reply

Your email address will not be published. Required fields are marked *