ಮಕ್ಕಳಿಗೆ ಗಣೇಶ ಅಂದ್ರೆ ಯಾಕಿಷ್ಟ ಗೊತ್ತಾ…? ಗಣಪನಿಗೂ ಪುಟಾಣಿಗಳಿಗೂ ಇದೆ ತುಂಟ ಸಂಬಂಧ!

Public TV
2 Min Read

ಗಣೇಶ (Ganesha) ಅಂದ್ರೆ ಪುಟ್ಟ ಮಕ್ಕಳಿಗೆ (Childrens) ಏನೋ ವಿಶೇಷ ಪ್ರೀತಿ..! ಪುಟಾಣಿಗಳಿಗೆ ಗಣಪ ದೇವರು ಹೌದು, ಗೊಂಬೆಯೂ ಹೌದು, ಸ್ನೇಹಿತನೂ ಸಹ! ಅದಕ್ಕೆ ಮಕ್ಕಳಿಗೆ ಗಣಪತಿ ಅಂದ್ರೆ ಇಷ್ಟ. ಪುಟ್ಟ ಸೊಂಡಿಲು, ಜೊತೆಗೆ ವಾಹನ ಪುಟಾಣಿ ಇಲಿರಾಯ, ಕೈತುಂಬಾ ತಿಂಡಿ ಇಟ್ಟುಕೊಂಡು ಸದಾ ಹಸನ್ಮುಖನಾಗಿರುವ ಗಣಪ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ?

ಗಣೇಶನಿಗೆ ಹಾಗೂ ಮಕ್ಕಳಿಗೆ ಇರುವ ಗೆಳೆತನಕ್ಕೆ ಇನ್ನೂ ಒಂದು ಕಾರಣವಿದೆ. ಪುಟಾಣಿಗಳ ಜೊತೆ ಗಣಪತಿ ತುಂಟಾಟ ಆಡ್ತಾನಂತೆ. ತೊಟ್ಟಿಲಲ್ಲೋ ಅಥವಾ ಇನ್ನೆಲ್ಲೋ ಆಟ ಆಡುತ್ತಾ ಇರುವ ಪುಟಾಣಿಗಳ ಕಣ್ಣಿಗೆ ಮಾತ್ರ ಗಣಪ ಕಾಣಿಸಿಕೊಂಡು, ತಮಾಷೆ ಮಾಡ್ತಾನಂತೆ. ಲಡ್ಡು, ಕಾಯಿಕಡುಬು, ಹಣ್ಣುಗಳನ್ನು ತನ್ನ ಸೊಂಡಿಲಲ್ಲಿ ಮಕ್ಕಳಿಗೆ ಕೊಡುವುದು, ಮತ್ತೆ ಕಸಿದು ಕೊಳ್ಳೋದು, ಸೊಂಡಿಲಲ್ಲಿ ಕಚಕುಳಿ ಕೊಡೋದು ಹೀಗೆ ತುಂಟಾಟ ಆಡ್ತಾನಂತೆ ಮುದ್ದು ಗಣಪ. ಇದಕ್ಕೆ ಅಂತೆ ತೊಟ್ಟಿಲಲ್ಲಿರೋ ಕಂದಮ್ಮಗಳು ಆಗಾಗ ಕಾರಣವೇ ಇಲ್ಲದೇ ಕಿಲಕಿಲ ಅಂತ ನಗಾಡ್ತಾ ಇರ್ತವೆ! ಅಂತಾರೆ ಹಿರಿಯರು. ಇದನ್ನೂ ಓದಿ: ಮೋದಕ ಅಷ್ಟೇ ಅಲ್ಲ ಈ ಸಿಹಿ ತಿಂಡಿಗಳೂ ವಿನಾಯಕನಿಗೆ ತುಂಬಾ ಇಷ್ಟ!

ಎಷ್ಟೋ ಕಡೆಗಳಲ್ಲಿ ಗಣೇಶನ ಹಬ್ಬ (Ganesh Chaturthi) ಮುಗಿದ ಬಳಿಕ ನೀರಿಗೆ ಬಿಡುವಾಗ ಮಕ್ಕಳು ಅಳುವುದು ಇದೆ. ಗಣೇಶನನ್ನು ನೀರಿಗೆ ಬಿಡದಂತೆ ಹಠ ಮಾಡುವುದು ಇದೆ. ಹೀಗೆ ಗಣಪ ಹಬ್ಬಕ್ಕೆ ಬಂದವನು ಮಕ್ಕಳ ಜೊತೆ ಬೆರೆತು ಬಿಡ್ತಾನೆ! ಎಷ್ಟರ ಮಟ್ಟಿಗೆ ಅಂದ್ರೆ ಮಕ್ಕಳನ್ನು ಸಮಾದಾನ ಮಾಡಿ ಗಣೇಶನನ್ನು ನೀರಿಗೆ ಬಿಡುವಾಗ ದೊಡ್ಡವರು ಹೈರಾಣಾಗಿ ಹೋಗಿರ‍್ತಾರೆ!

ವಿದ್ಯೆ ಬುದ್ದಿ ಪ್ರಾಪ್ತಿಗಾಗಿ ಬುಧವಾರ ಮಕ್ಕಳ ಕೈಯಿಂದ ಗಣೇಶನನ್ನು ಪೂಜಿಸುತ್ತಾರೆ. ಈ ದಿನ ಗಣಪತಿಯನ್ನು ಶ್ರದ್ಧಾ – ಭಕ್ತಿಯಿಂದ ಪೂಜಿಸುವ ಸಂಪ್ರದಾಯವಿದೆ. ಗಣಪತಿಯ ಆರಾಧನೆ ಸಂತೋಷವನ್ನು ನೀಡುತ್ತದೆ ಮತ್ತು ದುಃಖವನ್ನು ನಮ್ಮ ಜೀವನದಿಂದ ದೂರ ಮಾಡುತ್ತದೆ. ಈ ಕಾರಣಕ್ಕಾಗಿ ಜನರು ಗಣಪತಿಯನ್ನು ವಿಧಿ – ವಿಧಾನಗಳ ಪ್ರಕಾರ ಪೂಜಿಸುತ್ತಾರೆ. ಗಣಪತಿ ಪೂಜೆಯಿಂದ ದುಃಖ, ತೊಂದರೆಗಳು ದೂರಾಗುವುದು ಮಾತ್ರವಲ್ಲ, ಬುದ್ಧಿಯೂ ಚುರುಕಾಗುತ್ತದೆ ಎನ್ನುವ ನಂಬಿಕೆಯಿದೆ.

ಗಣೇಶನಿಗೆ 11 ಗಂಟುಗಳ ದುರ್ವಾವನ್ನು ಅರ್ಪಿಸಬೇಕು. ಇದನ್ನು ಭಕ್ತಿಯಿಂದ ಮಾಡಬೇಕು. ಮಗುವಿನ ಕೈಯಿಂದ ಪೂಜೆ ಮಾಡಿಸುವುದರಿಂದ ಮಗುವಿನ ಬುದ್ದಿ ಚುರುಕಾಗುತ್ತದೆ. ಇನ್ನೂ ಗಣೇಶ ಚತುರ್ಥಿಯ ದಿನ ಮಕ್ಕಳಿಗೆ ಅಕ್ಷರಾಭ್ಯಾಸವನ್ನೂ ಸಹ ಮಾಡಿಸಲಾಗುತ್ತದೆ. ಗಜಾನನನ್ನು ಸ್ಮರಿಸುವುದರಿಂದ ನಾನಾ ತೊಂದರೆಗಳು ಸಹ ದೂರ ಆಗುತ್ತವೆ. ಇದನ್ನೂ ಓದಿ: ಗಣೇಶನಿಗೆ ಪ್ರಿಯವಾದ ಮೋದಕ ಮಾಡೋದು ಹೇಗೆ?

Share This Article