ಗಣೇಶ ಚತುರ್ಥಿ – ಗಣಪತಿಯ ವಿವಿಧ ಹೆಸರುಗಳು ಯಾವುವು? ಅರ್ಥ ಏನು?

Public TV
2 Min Read

ಮ್ಮ ಕಷ್ಟಗಳನ್ನು ನಾಶಮಾಡಬಲ್ಲ ದೇವರೇ ಗಣಪತಿ. ಅದಕ್ಕೆ ಅಲ್ಲವೇ ಆತನನ್ನು ಸಂಕಷ್ಟಹರ ಗಣಪತಿ ಎಂದು ಕರೆಯುವುದು. ಗಣಪತಿಗೆ ಸಾವಿರಾರು ಹೆಸರಿದೆ. ಲಂಬೋದರ, ಗಜಾನನ, ಏಕದಂತ, ಈಶಪುತ್ರ, ಗೌರೀಸುತ ಹೀಗೆ ಹಲವು ಹೆಸರುಗಳಿವೆ. ಹೀಗಾಗಿ ಇಲ್ಲಿ ಆತನ ವಿವಿಧ ಪ್ರಸಿದ್ಧ ಹೆಸರುಗಳು ಮತ್ತು ಆ ಹೆಸರುಗಳು ಯಾಕೆ ಬಂದಿದೆ ಎಂಬ ಕಿರು ವಿವರವನ್ನು ತಿಳಿಸಲಾಗಿದೆ.

ಗಣಪತಿ: ಬಹಳ ಪ್ರಸಿದ್ಧವಾದ ಹೆಸರು. ʼಗಣʼ ಎಂದರೆ ಸಂಸ್ಕೃತದಲ್ಲಿ ‘ಸಮೂಹ’, ‘ಗುಂಪು’, ‘ಪಡೆ ಎಂದು ಕರೆಯಲಾಗುತ್ತದೆ. ಶಿವನ ಸೇವಕರ ಸಮೂಹವನ್ನು ‘ಗಣಗಳು’ ಎನ್ನಲಾಗುತ್ತದೆ. ಇವರು ಕೈಲಾಸ ಪರ್ವತದಲ್ಲಿ ವಾಸಿಸುತ್ತಾರೆ. ಗಣಪತಿಯು ಗಣಗಳ ನಾಯಕನಾಗಿರುವ ಕಾರಣ ಅವನಿಗೆ ‘ಗಣೇಶ’ ಅಥವಾ ‘ಗಣಪತಿ’ ಎಂಬ ಹೆಸರು ಬಂದಿದೆ.

ವಿನಾಯಕ: ವಿಘ್ನಗಳನ್ನು ನಿವಾರಿಸುವ ದೇವರು. ಅಡೆತಡೆಗಳನ್ನು ನಿವಾರಿಸುವವನ ಪಾತ್ರವನ್ನು ಸೂಚಿಸುತ್ತದೆ.

ಗಜಾನನ: ಗಜ ಆದರೆ ಆನೆ. ʼಆನೆ-ಮುಖʼ ಎಂಬ ಅರ್ಥವಿರುವ ಈ ಹೆಸರು ಆತನ ವಿಶಿಷ್ಟ ದೈಹಿಕ ಲಕ್ಷಣವನ್ನು ಸೂಚಿಸುತ್ತದೆ. ಇದನ್ನೂ ಓದಿ: ಗಣೇಶನಿಗೆ ಮೊದಲ ಪೂಜೆ ಯಾಕೆ?

ಏಕದಂತ: ಅಂದರೆ “ಒಂದು ದಂತ” ಎಂಬ ಅರ್ಥವಿರುವ ಈ ಹೆಸರು ಅವನ ಮುರಿದ ದಂತವನ್ನು ಸೂಚಿಸುತ್ತದೆ. ಜೀವನದ ಎಷ್ಟೇ ಕಷ್ಟ ಬಂದರೂ ದೃಢವಾಗಿ ನಿಲ್ಲಬೇಕು ಎಂಬುದನ್ನೂ ಸೂಚಿಸುತ್ತದೆ.

ಲಂಬೋದರ: “ದೊಡ್ಡ ಹೊಟ್ಟೆ” ಎಂಬ ಅರ್ಥವಿರುವ ಈ ಹೆಸರು ಆತನ ಭೌತಿಕ ರೂಪವನ್ನು ವಿವರಿಸುತ್ತದೆ. ವಿಶ್ವದ ಎಲ್ಲಾ ಸುಖ-ದು:ಖಗಳನ್ನು ತನ್ನ ಒಳಗೆ ಇಟ್ಟುಕೊಂಡು ಲೋಕವನ್ನು ರಕ್ಷಿಸುವ ಗಣಪತಿಯ ಸಾಮರ್ಥ್ಯವನ್ನು ತೋರಿಸುತ್ತದೆ. ಇದನ್ನೂ ಓದಿ: ಬಲಮುರಿ ಹಾಗೂ ಎಡಮುರಿ ಗಣಪತಿಗೆ ಇರುವ ವ್ಯತ್ಯಾಸವೇನು?

ವಿಘ್ನೇಶ್ವರ: ವಿಘ್ನಗಳನ್ನು ನಿವಾರಿಸುವವನು. ವಿಘ್ನಗಳನ್ನು ನಿವಾರಿಸಿ ಜಯವನ್ನು ತಂದುಕೊಡುವವನು.

ಬಾಲಚಂದ್ರ: ಚಂದ್ರನ ಒಂದು ರೂಪವನ್ನು (ಅರ್ಧಚಂದ್ರ) ತಲೆಯ ಮೇಲೆ ಧರಿಸುತ್ತಿರುವ ಕಾರಣ ಬಾಲಚಂದ್ರ ಎಂಬ ಹೆಸರು ಬಂದಿದೆ.

ವಕ್ರತುಂಡ: ಸಂಸ್ಕೃತದಲ್ಲಿ ʼವಕ್ರʼ ಎಂದರೆ ಬಾಗಿದ ಅಥವಾ ವಕ್ರವಾದ ಮತ್ತು ʼತುಂಡʼ ಎಂದರೆ ತುದಿ ಎಂದರ್ಥ. ಗಣೇಶನ ಬಾಗಿದ ಸೊಂಡಿಲು, ಅವನ ವಿಶಿಷ್ಟವಾದ ಆನೆಯ ತಲೆ ಮತ್ತು ಅಡೆತಡೆಗಳನ್ನು ನಿವಾರಿಸುವ ಅವನ ಕೆಲಸವನ್ನು ಸೂಚಿಸುತ್ತದೆ.

ಹೇರಂಬ: ತಾಯಿಯ ಪ್ರೀತಿಯ ಮಗನಾಗಿರುವ ಕಾರಣ ಹೇರಂಬ ಎಂದು ಕರೆಯಲಾಗುತ್ತದೆ. ಇದು ಅವನ ತಾಯಿ ಪಾರ್ವತಿಯೊಂದಿಗಿನ ಆತನ ಸಂಬಂಧವನ್ನು ತೋರಿಸುತ್ತದೆ.

ಸಿದ್ಧಿವಿನಾಯಕ: ಯಶಸ್ಸನ್ನು ನೀಡುವವನು ಎಂದರ್ಥ. ಆಸೆಗಳನ್ನು ಈಡೇರಿಸುವ ಮತ್ತು ಸಾಧನೆ ಮಾಡಲು ಪ್ರೇರಣೆ ನೀರುವ ದೇವರು ಎಂದೂ ಕರೆಯಲಾಗುತ್ತದೆ.

Share This Article