ಕಾಮಾಕ್ಯ ದೇವಿಯ ದರ್ಶನ ಪಡೆದ ‘ಗಾಳಿಪಟ 2’ ನಟಿ

Public TV
0 Min Read

ನ್ನಡದ ‘ಗಾಳಿಪಟ 2’ (Galipata 2) ಸಿನಿಮಾದ ಮೂಲಕ ಕನ್ನಡದ ಪ್ರೇಕ್ಷಕರಿಗೆ ಪರಿಚಿತರಾದ ಮಲೆಯಾಳಿ ಸುಂದರಿ ಸಂಯುಕ್ತಾ ಮೆನನ್ (Samyuktha) ಇದೀಗ ಕಾಮಾಕ್ಯ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಅಸ್ಸಾಂ ಗುವಾಹಟಿಯ ನೀಲಾಂಚರ್ ಹಿಲ್ಸ್‌ನಲ್ಲಿರುವ ಕಾಮಾಕ್ಯ ದೇವಿಯ (Kamakhya Temple) ದರ್ಶನ ಪಡೆದಿದ್ದಾರೆ. ವಿಶೇಷ ಮಾಡಿಸಿ ಕೆಲ ಕಾಲ ನಟಿ ಸಮಯ ಕಳೆದಿದ್ದಾರೆ. ಈ ಕುರಿತ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಕಾಸರಗೋಡಿನಲ್ಲಿ ಕಾಣಿಸಿಕೊಂಡ ನಟಿ ಸನ್ನಿ ಲಿಯೋನ್

ತೆಲುಗಿನ ವಿರೂಪಾಕ್ಷ, ಡೆವಿಲ್ ಸಿನಿಮಾದ ನಂತರ ಸೌತ್‌ನ ಹಲವು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

Share This Article