ಸಮಂತಾಗೆ ಹೋಲಿಸಿದ ನೆಟ್ಟಿಗರಿಗೆ `ಗಾಳಿಪಟ 2′ ನಾಯಕಿ ಏನಂದ್ರು ಗೊತ್ತಾ?

Public TV
1 Min Read

ಸೌತ್ ನಟಿ ಸಮಂತಾ (Samantha) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇದೀಗ ಸಮಂತಾರಂತೆಯೇ ಕಾಣುವ ಮಾಲಿವುಡ್ (Mollywood)  ನಟಿ ಸಂಯುಕ್ತಾಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ನೆಟ್ಟಿಗರು ಸಮಂತಾಗೆ ಹೋಲಿಸಿ ಸಂಯುಕ್ತಾ ಮೆನನ್‌ (Samyuktha Menon) ಅವರನ್ನ  ಹಾಡಿಹೊಗಳಿದ್ದಾರೆ. ಈ ಬಗ್ಗೆ ನಟಿ ಕೂಡ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:`ಬಿಗ್ ಬಾಸ್’ ಖ್ಯಾತಿಯ ಅಕ್ಷತಾ ಕುಕ್ಕಿ ಮದುವೆ ಡೇಟ್ ಫಿಕ್ಸ್

ಕನ್ನಡ, ಮಲಯಾಳಂ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಮಿಂಚಿರುವ ನಟಿ ಸಂಯುಕ್ತಾ ಮೆನನ್ ಸದ್ಯ ಧನುಷ್ (Dhanush) ಜೊತೆಗಿನ `ವಾತಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಸಂದರ್ಶನದ ವೇಳೆ, ನೆಟ್ಟಿಗರು ಸಂಯುಕ್ತಾರನ್ನ ಸಮಂತಾಳಿಗೆ ಹೋಲಿಸಿರುವ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಈ ವಿಚಾರವಾಗಿ ನಟಿ ಮಾತನಾಡಿದ್ದಾರೆ.

 

View this post on Instagram

 

A post shared by Samyuktha (@iamsamyuktha_)

ನಾನು ಸಮಂತಾ ತರಹ ಕಾಣುತ್ತೇನೆ ಎಂದು ಕೆಲವರು ಹೇಳುತ್ತಾರೆ. ಆದರೆ ಸಮಂತಾರಂತೆಯೇ ನಟಿಸುತ್ತೀರಿ ಎಂದು ಯಾರಾದರೂ ಹೇಳಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು ಎಂದು ಸಂಯುಕ್ತಾ ಮೆನನ್ ಪ್ರತಿಕ್ರಿಯೆ ನೀಡಿದ್ದಾರೆ.

 

View this post on Instagram

 

A post shared by Samyuktha (@iamsamyuktha_)

ಭೀಮ್ಲಾ ನಾಯಕ್, ಕಡುವ, ಕಲ್ಕಿ, ಕನ್ನಡದ ಗಾಳಿಪಟ 2 (Galipata 2) ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಂಯುಕ್ತಾ ನಟಿಸಿದ್ದಾರೆ. `ಗಾಳಿಪಟ 2’ನಲ್ಲಿ ದಿಗಂತ್‌ಗೆ (Diganth) ನಾಯಕಿಯಾಗಿ ಸಂಯುಕ್ತಾ ಗಮನ ಸೆಳೆದಿದ್ದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *