ಫ್ಯಾಮಿಲಿ ಜೊತೆ ಅಮೂಲ್ಯ ಕ್ಯೂಟ್ ಫೋಟೋಶೂಟ್

Public TV
1 Min Read

‘ಚೆಲುವಿನ ಚಿತ್ತಾರ’ ಸಿನಿಮಾದ ನಟಿ ಅಮೂಲ್ಯ (Amulya) ಅವರು ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಿಂದ ಅಂತರ ಕಾಯ್ದುಕೊಂಡಿರುವ ನಟಿ ಈಗ ಫ್ಯಾಮಿಲಿ ಜೊತೆಗಿನ ಕ್ಯೂಟ್ ಆಗಿರೋ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ನಿರ್ಮಾಣದ ‘ವಿಡಿಯೋ’ ಚಿತ್ರದ ಟೀಸರ್ ರಿಲೀಸ್

ಫ್ಯಾಮಿಲಿ ಫಂಕ್ಷನ್‌ವೊಂದರಲ್ಲಿ ನಟಿ ಮಿಂಚಿದ್ದಾರೆ. ಪತಿ ಜಗದೀಶ್ (Jagadeesh) ಮತ್ತು ಅವಳಿ ಮಕ್ಕಳೊಂದಿಗೆ ಫೋಟೋಶೂಟ್ ಮಾಡಿಸಿದ್ದಾರೆ. ರೇಷ್ಮೆ ಸೀರೆಯುಟ್ಟು ಮುದ್ದಾಗಿ ಲಕ್ಷ್ಮಿಯಂತೆ ಕಂಗೊಳಿಸಿದ್ದಾರೆ ಅಮೂಲ್ಯ. ಕುಟುಂಬದ ಜೊತೆ ಹ್ಯಾಪಿ ಮೂಡ್‌ನಲ್ಲಿ ಕ್ಯಾಮೆರಾ ಪೋಸ್ ನೀಡಿದ್ದಾರೆ. ನಟಿಯ ಈ ಫೋಟೋಶೂಟ್ ನೋಡಿ ಯಾರ ಕೆಟ್ಟ ದೃಷ್ಟಿಯೂ ಈ ಕುಟುಂಬದ ಮೇಲೆ ಬೀಳದಿರಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ. ಇದನ್ನೂ ಓದಿ:ಧ್ರುವ ಸರ್ಜಾಗೆ ‘ಭೈರತಿ ರಣಗಲ್’ ಡೈರೆಕ್ಟರ್ ಆ್ಯಕ್ಷನ್ ಕಟ್

ಮದುವೆಯಾಗಿ ಇಬ್ಬರೂ ಮಕ್ಕಳಿದ್ರೂ ಅಮೂಲ್ಯಗೆ ಚಾರ್ಮ್ ಕಮ್ಮಿಯಾಗಿಲ್ಲ. ಇಂದಿಗೂ ಈ ನಟಿಯ ಮೇಲೆ ಫ್ಯಾನ್ಸ್‌ಗೆ ಕ್ರೇಜ್ ಇದೆ. ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿ ಸಿನಿಮಾ ಮಾಡಲಿ ಎಂಬುದು ಅಭಿಮಾನಿಗಳ ಆಶಯ. ನಟಿಯ ಕಡೆಯಿಂದ ಚಿತ್ರದ ಬಗ್ಗೆ ಗುಡ್ ನ್ಯೂಸ್ ಸಿಗಲಿ ಎಂದು ಕಾಯ್ತಿದ್ದಾರೆ.

 

View this post on Instagram

 

A post shared by Amulya (@nimmaamulya)

ಬಾಲನಟಿಯಾಗಿ ಎಂಟ್ರಿ ಕೊಟ್ಟಿದ್ದ ಅಮೂಲ್ಯ ಅವರು 2007ರಲ್ಲಿ ಗಣೇಶ್ ನಾಯಕಿಯಾಗಿ ‘ಚೆಲುವಿನ ಚಿತ್ತಾರ’ ಚಿತ್ರದಲ್ಲಿ ನಟಿಸಿದ್ದರು. ನಾನು ನನ್ನ ಕನಸು, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ಖುಷಿ ಖುಷಿಯಾಗಿ, ಮಳೆ, ಮಾಸ್ತಿ ಗುಡಿ, ಕೃಷ್ಣ ರುಕ್ಕು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Share This Article