ಸನ್ನಿ ಡಿಯೋಲ್ ನಟನೆಯ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

Public TV
1 Min Read

‘ಗದರ್ 2′ (Gadar 2) ಸಿನಿಮಾದ ಸಕ್ಸಸ್ ನಂತರ ಸಾಕಷ್ಟು ಸಿನಿಮಾಗಳ ಆಫರ್ಸ್ ಸನ್ನಿ ಡಿಯೋಲ್‌ಗೆ (Sunny Deol) ಅರಸಿ ಬರುತ್ತಿವೆ. ಇತ್ತೀಚೆಗಷ್ಟೇ ತೆಲುಗು ನಿರ್ದೇಶಕ ಗೋಪಿಚಂದ್ ಮಲಿನೇನಿ (Gopichand Malineni) ಹೊಸ ಚಿತ್ರದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ಮಾಡಿದ್ದರು. ಈಗ ಈ ಚಿತ್ರಕ್ಕೆ ಸಖತ್ ಆಗಿರೋ ಟೈಟಲ್ ಅನ್ನು ಚಿತ್ರತಂಡ ಫೈನಲ್‌ ಮಾಡಿದೆ.

ತೆಲುಗಿನ ಕ್ರ್ಯಾಕ್, ವೀರ ಸಿಂಹ ರೆಡ್ಡಿ ಸಿನಿಮಾಗಳ ನಿರ್ದೇಶಕ ಗೋಪಿಚಂದ್ ಈಗ ಬಾಲಿವುಡ್ ನಟ ಸನ್ನಿ ಡಿಯೋಲ್ ಡೈರೆಕ್ಟ್ ಮಾಡಿದ್ದಾರೆ. ಈ ಸಿನಿಮಾ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಚಿತ್ರಕ್ಕೆ ‘ಜಟ್’ (Jatt) ಎಂಬ ಕ್ಯಾಚಿ ಟೈಟಲ್ ಇಟ್ಟಿದ್ದಾರೆ.

ರಣ್‌ಬೀರ್ ಕಪೂರ್ ನಟನೆಯ ‘ರಾಮಾಯಣ’ದಲ್ಲಿ ಹನುಮಾನ್ ಮತ್ತು ‘ಬಾರ್ಡರ್ 2’ ಸಿನಿಮಾಗಳು ಕೈಯಲ್ಲಿರುವ ಕಾರಣ, ಸೆಪ್ಟೆಂಬರ್ ಒಳಗೆ ‘ಜಟ್’ ಚಿತ್ರದ ಶೂಟಿಂಗ್ ಮುಗಿಯಲಿದೆ ಎನ್ನಲಾಗಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.‌ ಇದನ್ನೂ ಓದಿ:‘ಬಿಗ್ ಬಾಸ್’ ಖ್ಯಾತಿಯ ಹಿನಾ ಖಾನ್‌ಗೆ ಸ್ತನ ಕ್ಯಾನ್ಸರ್

‘ಜಟ್’ ಚಿತ್ರದಲ್ಲಿ ಸೈಯಾಮಿ ಖೇರ್ (Saiyami Kher) ಮತ್ತು ರೆಜಿನಾ ಕಸ್ಸಂದ್ರ (Regina (Cassandra) ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಈ ಇಬ್ಬರೂ ಹಾಟ್ ನಟಿಯರ ಜೊತೆ ಸನ್ನಿ ಡಿಯೋಲ್ ರೊಮ್ಯಾನ್ಸ್ ಮಾಡಲಿದ್ದಾರೆ. ರಿಷಿ ಪಂಜಾಬಿ ಛಾಯಾಗ್ರಹಣ, ತಮನ್ ಎಸ್ ಸಂಗೀತ, ನವೀನ್ ನೂಲಿ ಸಂಕಲನ ಚಿತ್ರಕ್ಕಿದೆ.

Share This Article