ಭಾರತ-ಮಧ್ಯಪ್ರಾಚ್ಯ-ಯುರೋಪ್ ನಡುವೆ ಮೆಗಾ ಕಾರಿಡಾರ್; ಜಿ20 ಶೃಂಗಸಭೆಯಲ್ಲಿ ಬಿಗ್ ಡೀಲ್

Public TV
2 Min Read

ನವದೆಹಲಿ: ದೇಶದ ಆರ್ಥಿಕತೆಗೆ ಭವಿಷ್ಯದಲ್ಲಿ ಬಿಗ್ ಬೂಸ್ಟ್ ನೀಡುವ ಮಹತ್ತರ ಕೆಲಸಕ್ಕೆ ಜಿ20 ಶೃಂಗಸಭೆಯಲ್ಲಿ (G20 Summit) ಪ್ರಧಾನಿ ಮೋದಿ (Narendra Modi) ನಾಂದಿ ಹಾಡಿದ್ದಾರೆ. ಏಷ್ಯಾದಲ್ಲಿ ಚೀನಾದ ಅಧಿಪತ್ಯಕ್ಕೆ ಕೊನೆ ಹಾಡುವ ದೃಷ್ಟಿಯಿಂದ ಭಾರತ-ಮಧ್ಯಪ್ರಾಚ್ಯ-ಯುರೋಪ್ (India-Middle East-Europe Mega Corridor) ನಡುವೆ ಮೆಗಾ ಎಕಾನಾಮಿಕ್ ಕಾರಿಡಾರ್ ಆರಂಭಿಸುವ ಘೋಷಣೆಯನ್ನು ಪ್ರಧಾನಿ ಮೋದಿ ಮಾಡಿದ್ದಾರೆ.

ಭಾರತ, ಸೌದಿ ಅರೇಬಿಯಾ, ಯುಎಇ, ಐರೋಪ್ಯ ಒಕ್ಕೂಟ, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಅಮೆರಿಕಾ ದೇಶಗಳು ರೈಲ್ವೇ-ಬಂದರು ಸಂಪರ್ಕದ ಮೆಗಾ ಯೋಜನೆಯ ಭಾಗವಾಗಲಿವೆ. ಜಗತ್ತಿನ ಸುಸ್ಥಿರ ಅಭಿವೃದ್ಧಿ ಮತ್ತು ಸಂಪರ್ಕ ವ್ಯವಸ್ಥೆಗೆ ಈ ಕಾರಿಡಾರ್ ಹೊಸ ದಿಕ್ಸೂಚಿ ಆಗಲಿದೆ ಎಂದು ಪ್ರಧಾನಿ ಮೋದಿ ವ್ಯಾಖ್ಯಾನಿಸಿದ್ದಾರೆ. ಇದನ್ನೂ ಓದಿ: G20 Summit – ಜಾಗತಿಕ ಜೈವಿಕ ಇಂಧನ ಮೈತ್ರಿಕೂಟಕ್ಕೆ ಮೋದಿ ಚಾಲನೆ

ಇದನ್ನು ಗೇಮ್‌ಚೇಂಜಿಂಗ್ ಹೂಡಿಕೆ, ಬಿಗ್ ಡೀಲ್ ಎಂದು ಅಮೆರಿಕಾ ಅಧ್ಯಕ್ಷ ಬೈಡೆನ್ ಬಣ್ಣಿಸಿದ್ದಾರೆ. ಈ ಯೋಜನೆ ರೈಲ್ವೇ ಲಿಂಕ್, ವಿದ್ಯುತ್ ಕೇಬಲ್, ಹೈಡ್ರೋಜನ್ ಪೈಪ್‌ಲೈನ್, ಹೈಸ್ಪೀಡ್ ಡೇಟಾ ಕೇಬಲ್ ಒಳಗೊಂಡಿರಲಿದೆ. ಈ ಮಧ್ಯೆ, ದೆಹಲಿ ಡಿಕ್ಲರೇಷನ್‌ಗೆ ಜಿ-20 ರಾಷ್ಟ್ರಗಳು ಸರ್ವಸಮ್ಮತ ಒಪ್ಪಿಗೆ ಸೂಚಿಸಿವೆ.

ರಷ್ಯಾ- ಉಕ್ರೇನ್ ಯುದ್ಧದ ವಿಚಾರದಲ್ಲಿಯೂ ಒಮ್ಮತಾಭಿಪ್ರಾಯ ಮೂಡಿದೆ. ಯಾವುದೇ ದೇಶದ ಸಾರ್ವಭೌಮತೆಗೆ ಭಂಗ ತರಬಾರದು. ಅಣ್ವಸ್ತ್ರಗಳನ್ನು ತೋರಿಸಿ ಬೆದರಿಕೆ ಒಡ್ಡುವುದನ್ನು ಒಪ್ಪಲಾಗದು. ಬಿಕ್ಕಟ್ಟು ಬಗೆಹರಿಸಲು ಶಾಂತಿಯೊಂದೇ ಮಾರ್ಗ. ರಾಜತಾಂತ್ರಿಕ ಮಾರ್ಗಗಳ ಮೂಲಕ ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆ ಆಗಬೇಕು ಎಂಬ ತೀರ್ಮಾನವನ್ನು ಅಂಗೀಕರಿಸಿದೆ. ಇದನ್ನೂ ಓದಿ: G20 ಡಿನ್ನರ್‌ಗೆ ಸಿರಿಧಾನ್ಯಗಳ ವೈವಿಧ್ಯತೆ – ಮೆನುವಿನಲ್ಲಿ ಏನೇನಿತ್ತು?

ಜಿ20 ಗುಂಪಿನ ವಿಸ್ತರಣೆ ಆಗಿದೆ. ಸಬ್ ಸಾಥ್ ತತ್ವದ ಆಧಾರದ ಮೇಲೆ ಜಿ-20 ಗುಂಪಿನಲ್ಲಿ ಆಫ್ರಿಕಾ ಒಕ್ಕೂಟಕ್ಕೆ ಶಾಶ್ವತ ಸದಸ್ಯತ್ವ ನೀಡಲಾಗಿದೆ. ಬ್ರಿಟನ್, ಇಟಲಿ ಪ್ರಧಾನಿಗಳ ಜೊತೆ ಮೋದಿ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ನಾಳೆ ಮೂರನೇ ಸೆಷನ್‌ನಲ್ಲಿ ಭವಿಷ್ಯದ ಬಗ್ಗೆ ಚರ್ಚೆಗಳು ನಡೆಯಲಿವೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್