ಐಷಾರಾಮಿ ಕಾರಲ್ಲಿ ಬಂದು ಜಿ20 ಕಾರ್ಯಕ್ರಮಕ್ಕಾಗಿ ಇಟ್ಟಿದ್ದ ಹೂಕುಂಡ ಕದ್ದೊಯ್ದ ಕಳ್ಳ ಅರೆಸ್ಟ್‌

Public TV
1 Min Read

ಲಕ್ನೋ: ಐಷಾರಾಮಿ ಕಾರಿನಲ್ಲಿ (Car) ಬಂದ ವ್ಯಕ್ತಿಗಳಿಬ್ಬರು ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಕಾರ್ಯಕ್ರಮಕ್ಕಾಗಿ (G20 Event) ಹಾಕಲಾಗಿದ್ದ ಹೂವಿನ ಕುಂಡಗಳನ್ನು (Flower Pot) ಕದ್ದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ.

ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್ ವೇನಲ್ಲಿರುವ ಆಂಬಿಯೆನ್ಸ್ ಮಾಲ್ ಎದುರು ಈ ಘಟನೆ ನಡೆದಿದೆ. ಹೂವಿನ ಕುಂಡವನ್ನು ಕದಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಬ್ಬರು ಪುರುಷರು ಹೂವಿನ ಕುಂಡವನ್ನು ಕದ್ದು ಕಾರಿನಲ್ಲಿ ಹಾಕುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

ಟ್ವಿಟ್ಟರ್‌ನಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಅವರು ಘಟನೆ ಕುರಿತು ತನಿಖೆ ನಡೆಸುವಂತೆ ಗುರುಗ್ರಾಮ್ ಪೊಲೀಸರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ: ಸುಮಲತಾ ಅಂಬರೀಶ್

ಈ ವೇಳೆ ಗಾಂಧಿನಗರ ನಿವಾಸಿ ಮನಮೋಹನ್ ಎಂಬಾತನನ್ನು ಬಂಧಿಸಿದ್ದು, (Arrest) ಪ್ರಕರಣದ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಜೊತೆಗೆ ಹೂವಿನ ಕುಂಡಗಳನ್ನು ಇಡಲಾಗಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾದಿಂದ ತೈಲಕ್ಕೆ ಭಾರೀ ಬೇಡಿಕೆ – ಆದ್ರೂ ರಷ್ಯಾಗೆ ಭಾರತದ ಕಡೆ ಒಲವೇಕೆ?

Share This Article
Leave a Comment

Leave a Reply

Your email address will not be published. Required fields are marked *