ಬಾನು ಮುಷ್ತಾಕ್‍ಗೆ ಚಾಮುಂಡಿ ತಾಯಿಯ ಮೇಲೆ ನಂಬಿಕೆ ಇದ್ರೆ ಉದ್ಘಾಟನೆಗೆ ಬರುತ್ತಾರೆ: ಜಿಟಿಡಿ

Public TV
1 Min Read
  • ಧರ್ಮಸ್ಥಳ ಕೇಸಲ್ಲಿ ತಪ್ಪಿತಸ್ಥರನ್ನು ಗಲ್ಲಿಗೆ ಹಾಕಿ

ಮೈಸೂರು: ಸಾಹಿತಿ ಬಾನು ಮುಷ್ತಾಕ್ (Banu Mushtaq) ಅವರಿಗೆ ಚಾಮುಂಡಿ ತಾಯಿಯ ಮೇಲೆ ನಂಬಿಕೆ ಇದ್ದರೆ ಉದ್ಘಾಟನೆಗೆ ಬರುತ್ತಾರೆ. ನಂಬಿಕೆ ಇಲ್ಲದಿದ್ದರೆ ಬರಲ್ಲ ಎಂದು ಶಾಸಕ ಜಿ.ಟಿ ದೇವೇಗೌಡ (Devegowda) ಹೇಳಿದ್ದಾರೆ.

ಮೈಸೂರಿನಲ್ಲಿ (Mysuru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ದಸರಾ ಉದ್ಘಾಟಕರ ಆಯ್ಕೆ ಅಧಿಕಾರವನ್ನು ಸಿಎಂ ಕೊಟ್ಟಿದ್ದೆವು. ಅದು ಅವರ ಪರಮ ಅಧಿಕಾರ. ಸಿಎಂ ತಮ್ಮ ಅಧಿಕಾರ ಬಳಸಿ ಆಯ್ಕೆ ಮಾಡಿದ್ದಾರೆ. ಅದರ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸಂತಸ ತಂದಿದೆ, ಇದರಲ್ಲಿ ಬೇಧ ಭಾವ ಬೇಡ: ರೇವಣ್ಣ


ಧರ್ಮಸ್ಥಳ ಪ್ರಕರಣದಲ್ಲಿ ತಪ್ಪಿಸ್ಥರನ್ನ ನೇಣಿಗೆ ಹಾಕಬೇಕು. ಯಾರಿಂದಲೂ ಧರ್ಮಸ್ಥಳ ಹಾಗೂ ವಿರೇಂದ್ರ ಹೆಗೆಡೆ ಅವರಿಗೆ ಕೆಟ್ಟ ಹೆಸರಲು ಸಾಧ್ಯವಿಲ್ಲ. ಅವರನ್ನ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ಇದು ಎಲ್ಲಾ ಕನ್ನಡಿಗರಿಗೆ ನೋವಾಗಿದೆ. ಅವರಿಗೆ ಇಡೀ ಪ್ರಪಂಚಾದ್ಯಂತ ಭಕ್ತರಿದ್ದಾರೆ ಎಂದು ತಿಳಿಸಿದ್ದಾರೆ.

ಸರ್ಕಾರ ಈ ವಿಚಾರದಲ್ಲಿ ಷಡ್ಯಂತ್ರ ಮಾಡಿದವರನ್ನು ಪತ್ತೆ ಹಚ್ಚಬೇಕು. ತನಿಖಾ ವರದಿ ಆದಷ್ಟು ಹೊರಬರಲಿ. ದಿನ ಒಬ್ಬೊಬ್ಬರು ಧರ್ಮಸ್ಥಳ ಉಳಿಸುತ್ತೇನೆಂದು ಹೋರಾಟ ಮಾಡುವುದರಲ್ಲಿ ಅರ್ಧ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟಿಸುವ ಮುನ್ನ ಭಾನು ಮುಷ್ತಾಕ್ ತಾಯಿ ಭುವನೇಶ್ವರಿ, ಚಾಮುಂಡೇಶ್ವರಿ ಬಗೆಗಿನ ಗೌರವ ಸ್ಪಷ್ಟಪಡಿಸಬೇಕು: ಯದುವೀರ್‌

 

Share This Article