– ರಾಜ್ಯಪಾಲರು ದ್ವೇಷ ಭಾಷಣ ಬಿಲ್ ರಿಜೆಕ್ಟ್ ಮಾಡಿಲ್ಲ ಎಂದ ಸಚಿವರು
ಬೆಂಗಳೂರು: ರಾಜ್ಯಪಾಲರು ದ್ವೇಷ ಭಾಷಣ ಬಿಲ್ (Hate Speech Bill) ರಿಜೆಕ್ಟ್ ಮಾಡಿಲ್ಲ, ಸ್ಪಷ್ಟೀಕರಣವನ್ನೂ ಕೇಳಿಲ್ಲ. ಅವರು ಅಧ್ಯಯನ ಮಾಡಲು ಇಟ್ಕೊಂಡಿದ್ದಾರೆ ಅಂತ ಗೃಹ ಸಚಿವ ಪರಮೇಶ್ವರ್ (G Parameshwar) ಹೇಳಿದರು.
ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಅವರು, ಸ್ಪಷ್ಟೀಕರಣ ಕೇಳಿದ್ರೆ ಕೊಡ್ತೀವಿ, ರಿಜೆಕ್ಟ್ ಮಾಡಿದ್ರೆ ಮುಂದೇನು ಮಾಡಬೇಕು ತೀರ್ಮಾನ ಮಾಡ್ತೀವಿ. ಒಳಮೀಸಲಾತಿ ಬಗ್ಗೆಯೂ ಸ್ಪಷ್ಟೀಕರಣ ಕೇಳಿದ್ದಾರೆ ಕೊಡ್ತೀವಿ ಅಂದರು. ಅಲ್ಲದೇ ಬಳ್ಳಾರಿ ಪ್ರಕರಣ, ಸಿಐಡಿಗೆ ಕೊಟ್ಟಿದ್ದೇವೆ. ತನಿಖೆ ನಡೆಯಲಿ, ಸತ್ಯ ಹೊರ ಬರಲಿ ಅಂತಾ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಶೂಟೌಟ್ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ – ವಿಡಿಯೋನಲ್ಲಿದ್ದ ಬಹುತೇಕರು ಬಳ್ಳಾರಿಯವರೇ ಅಲ್ವಾ?
ಇದೇ ವೇಳೆ ಆರ್‌ಸಿಬಿ ಮ್ಯಾಚ್ ಸ್ಥಳಾಂತರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕೆಎಸ್‌ಸಿಎಗೆ ಸೂಚಿಸಿದ್ದೇವೆ, ಕುನ್ಹಾ ಸಮಿತಿ ವರದಿಯಂತೆ ಮಾರ್ಗಸೂಚಿ ಪಾಲಿಸಬೇಕು. ಮಾರ್ಗಸೂಚಿ ಅನ್ವಯ ಕೆಎಸ್‌ಸಿಎ ಸರಿಪಡಿಸಿದ್ರೆ ಖಂಡಿತ ಅನುಮತಿ ಕೊಡ್ತೀವಿ ಅಂತೇಳಿದ್ರು.
ಆರ್‌ಸಿಬಿ ಮ್ಯಾನೇಜ್ಮೆಂಟ್ ನಮ್ಮ ಬಳಿ ಮಾತುಕತೆಗೆ ಬಂದಿಲ್ಲ, ಕೆಎಸ್‌ಸಿಎ ಆಡಳಿತ ಮಂಡಳಿ ಅವರು ಮಾತ್ರ ಬಂದಿದ್ರು ಅಂತಾ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ನಾಡಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಕೇಸ್ – ಮೂವರು ಆರೋಪಿಗಳ ಬಂಧನ


