G20 ಸಭೆಗೆ ಆಗಮಿಸುತ್ತಿರೋ ಜೋ ಬೈಡನ್‌ಗಾಗಿ ಮೂರು ಹಂತದ ಭದ್ರತೆ

Public TV
1 Min Read

ನವದೆಹಲಿ: ಭಾರತದಲ್ಲಿ ಜಿ20 ಶೃಂಗಸಭೆ (G20 summit 2023) ಹಿನ್ನೆಲೆ ಅಮೆರಿಕಾದ (America) ಅಧ್ಯಕ್ಷರು ದೆಹಲಿಗೆ ಆಗಮಿಸುತ್ತಿದ್ದು ಜೋ ಬೈಡನ್‍ಗಾಗಿ (Joe Baiden) ಮೂರು ಹಂತದ ಭದ್ರತೆ ಒದಗಿಸಲಾಗುತ್ತಿದೆ. ಶುಕ್ರವಾರ ಸಂಜೆ 7 ಗಂಟೆಗೆ ಬೋಯಿಂಗ್ ಸಿ -17 ಗ್ಲೋಬ್ ಮಾಸ್ಟರ್ III ನಲ್ಲಿ ಯುಎಸ್ ಮೂಲಕ ಆಗಮಿಸುತ್ತಿದ್ದು, ಐಟಿಸಿ ಮೌರ್ಯ ಹೋಟೆಲ್‍ನಲ್ಲಿ ತಂಗಲಿದ್ದಾರೆ.

ಅಮೆರಿಕಾದ ಅಧ್ಯಕ್ಷರ ವಾಸ್ತವ್ಯಕ್ಕೆ 400 ಕೊಠಡಿಗಳ ಇಡೀ ಹೋಟೆಲ್ ಬುಕ್ ಮಾಡಲಾಗಿದ್ದು, 14 ಮಹಡಿಯಲ್ಲಿರುವ ವಿಶೇಷ ಕೊಠಡಿಯಲ್ಲಿ ಅವರು ತಂಗಲಿದ್ದಾರೆ. ದೆಹಲಿಯಲ್ಲಿ ಸಂಚರಿಸಲು ಬುಲೆಟ್ ಪ್ರೂಫ್ ದಿ ಬೀಸ್ಟ್ ಕಾರನ್ನು ಬಳಕೆ ಮಾಡಲಾಗುತ್ತಿದೆ.

ಇನ್ನು ಅವರ ಸಂಚಾರ ಸಮಯದಲ್ಲಿ ಭದ್ರತೆಗೆ ಹೊರ ಅಥವಾ ಮೂರನೇ ಪದರದಲ್ಲಿ ಅರೆಸೇನಾ ಪಡೆಯ ಸಿಬ್ಬಂದಿಯನ್ನು, ಎರಡನೇ ಪದರವು ಭಾರತದ ವಿಶೇಷ ರಕ್ಷಣಾ ಗುಂಪಿನ ಕಮಾಂಡೋಗಳನ್ನು ಮತ್ತು ಒಳಗಿನ ವಲಯವು ರಹಸ್ಯ ಸೇವಾ ಏಜೆಂಟ್‍ಗಳನ್ನು ಹೊಂದಿರುತ್ತದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಅಸಮಾನತೆ ಇರೋವರೆಗೂ ಮೀಸಲಾತಿ ಮುಂದುವರಿಯಬೇಕು, ಅದಕ್ಕೆ RSS ಸಹಕಾರವಿದೆ: ಮೋಹನ್‌ ಭಾಗವತ್‌

ಜೋ ಬೈಡನ್ ತಂಗಿರುವ ವೇಳೆ ಹೋಟೆಲ್ ಮೇಲೆ ಕಣ್ಣಿಡಲು ವಾಯುಸೇನೆ ಮತ್ತು ಭಾರತೀಯ ಸೇನೆಯ ಹೆಲಿಕಾಪ್ಟರ್‍ಗಳು ನಿರಂತರವಾಗಿ ಆಕಾಶದಲ್ಲಿ ಸುತ್ತಲಿವೆ. ಈ ಹೆಲಿಕಾಪ್ಟರ್ ಗಳಲ್ಲಿ ಸೇನೆ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‍ಎಸ್‍ಜಿ) ಕಮಾಂಡೋಗಳು ಇರಲಿದ್ದಾರೆ. ಬಹುಮಹಡಿ ಕಟ್ಟಡಗಳ ಮೇಲೆ ಎನ್‍ಎಸ್‍ಜಿ ಮತ್ತು ಸೇನಾ ಸ್ನೈಪರ್ ಗಳನ್ನು ನಿಯೋಜಿಸಲಾಗಿದೆ. ಹಲವೆಡೆ ಆ್ಯಂಟಿ ಡ್ರೋನ್ ವ್ಯವಸ್ಥೆ ಅಳವಡಿಸಲಾಗಿದೆ.

ಸೆಪ್ಟೆಂಬರ್ 8 ರಂದು ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಬಳಿಕ ಸೆ. 9-10 ರಂದು ಜಿ20 ಶೃಂಗಸಭೆ ಸಭೆಯಲ್ಲಿ ಭಾಗಿಯಾಗಿ ಅಮೆರಿಕಾಕ್ಕೆ ವಾಪಸ್ ಆಗಲಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್