ಪಾಕ್‌ ಜೊತೆ ಮಾತುಕತೆ ನಡೆದ್ರೆ ಭಯೋತ್ಪಾದನೆ, POK ಬಗ್ಗೆ ಮಾತ್ರ: ಮೋದಿ ಖಡಕ್‌ ಮಾತು

By
1 Min Read

ನವದೆಹಲಿ: ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ಮಾತುಕತೆ ನಡೆದರೆ, ಅದು ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ.

ಆಪರೇಷನ್ ಸಿಂಧೂರ (Operation Sindoor) ಸೇನಾ ಕಾರ್ಯಾಚರಣೆ ಮತ್ತು ಭಾರತ-ಪಾಕಿಸ್ತಾನ ಕದನ ವಿರಾಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಭಯೋತ್ಪಾದನೆ ವಿರುದ್ಧ ಸಮರ ಸಾರಿದ ಮೋದಿ, ನಮ್ಮ ಸೇನಾ ಸಾಮರ್ಥ್ಯವನ್ನು ಕೊಂಡಾಡಿದರು. ಇದನ್ನೂ ಓದಿ: ನಿಮ್ಮ ನ್ಯೂಕ್ಲಿಯರ್‌ ಬ್ಲ್ಯಾಕ್‌ಮೇಲ್‌ಗೆ ನಾವು ಬೆದರಲ್ಲ: ಪಾಕ್‌ಗೆ ಮೋದಿ ಎಚ್ಚರಿಕೆ

ಭಯೋತ್ಪಾದಕತೆ ಮತ್ತು ಮಾತುಕತೆ ಒಂದೇ ಸಮಯದಲ್ಲಿ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ನಡೆಯಲು ಸಾಧ್ಯವಿಲ್ಲ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆದರೆ ಅದು ಭಯೋತ್ಪಾದನೆ ಮತ್ತು ಪಿಒಕೆ ಬಗ್ಗೆ ಮಾತ್ರ ಎಂದು ನಾನು ಅಂತರರಾಷ್ಟ್ರೀಯ ಸಮುದಾಯಕ್ಕೆ ಹೇಳಲು ಬಯಸುತ್ತೇನೆ ಎಂದು ಹೇಳಿದರು.

ಕಾಶ್ಮೀರದ ಬಗ್ಗೆ ನಮಗೆ ಸ್ಪಷ್ಟವಾದ ನಿಲುವು ಇದೆ. ಪಿಒಕೆ ಮರಳುವುದು ಒಂದು ಬಾಕಿಯಿದೆ. ಅವರು ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತನಾಡಿದರೆ, ನಾವು ಮಾತನಾಡಬಹುದು ಅಷ್ಟೇ ಎಂದು ಕಠಿಣ ಪದಗಳಲ್ಲಿ ತಿಳಿಸಿದರು. ಇದನ್ನೂ ಓದಿ: ಅಣ್ವಸ್ತ್ರ ಸಂಗ್ರಹ ಇರೋ ಬೆಟ್ಟದ ಮೇಲೆ ದಾಳಿ ಚರ್ಚೆ – ಪತ್ರಕರ್ತನಿಗೆ ಥ್ಯಾಂಕ್ಸ್‌ ಹೇಳಿದ ವಾಯುಸೇನೆ

ಮೋದಿ ಈ ರೀತಿ ಹೇಳುವ ಮೂಲಕ ಅಮಾನತಿನಲ್ಲಿರುವ ಸಿಂಧೂ ನದಿಯ ಒಪ್ಪಂದ ಹಾಗೆಯೇ ಮುಂದುವರಿಯಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಧಿಸಿರುವ ನಿರ್ಬಂಧಗಳು ಹಾಗೆಯೇ ಮುಂದುವರಿಯಲಿರುವ ಸುಳಿವನ್ನು ನೀಡಿದರು.

Share This Article