ಮೋಜು, ಮಸ್ತಿ, ಡ್ಯಾನ್ಸ್ ಅದೊಂದು ಅದ್ಭುತ ರಾತ್ರಿ – ಸಂಗೀತ್ ಫೋಟೋ ಹಂಚಿಕೊಂಡ ವಿಜಯ್, ರಶ್ಮಿಕಾ

1 Min Read

ದಯಪುರದಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿಜಯ್ ದೇವರಕೊಂಡ (Vijay Deverakonda) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಸಂಗೀತ್ ಕಾರ್ಯಕ್ರಮದ ಕೆಲವು ಅದ್ಭುತ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ, ಅದ್ದೂರಿಯಾಗಿ ನಡೆದ ಸಂಗೀತ್ ಕಾರ್ಯಕ್ರಮದ ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಪ್ರೀತಿ, ಕಣ್ಣೀರು, ನಗು, ಸಂಗೀತ, ಹಾಡು ಎಲ್ಲದರಿಂದ ಕೂಡಿದ್ದ ಆ ರಾತ್ರಿ ನಿಜಕ್ಕೂ ಅತ್ಯಂತ ಅದ್ಭುತವಾಗಿತ್ತು. ಇಡೀ ರಾತ್ರಿ ನೃತ್ಯ ಮಾಡಿ ಆನಂದಿಸಿದೆವು. ನಮ್ಮಿಬ್ಬರ ಕುಟುಂಬಸ್ಥರು ಸಂಭ್ರಮದಲ್ಲೇ ಮೈಮರೆತು ನೃತ್ಯ ಮಾಡುವುದನ್ನು ಕಂಡು ನಿಜಕ್ಕೂ ಸಂತೋಷವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತೆಲಂಗಾಣದ ಹೊಸ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ ವಿಜಯ್‌-ರಶ್ಮಿಕಾ

ಸಂಗೀತ್ ಕಾರ್ಯಕ್ರಮದಲ್ಲಿ ಫಲ್ಗುಣಿ ಶೇನ್ ಪೀಕಾಕ್ ಉಡುಪಿನಲ್ಲಿ ವಿಜಯ್ ರಾಯಲ್ ಬ್ಲೂ ಶೇರ್ವಾನಿ, ಆಕಾಶ ನೀಲಿ ಕೇಪ್‌ನಲ್ಲಿ ರಾಜನಂತೆ ಹಾಗೂ ರಶ್ಮಿಕಾ ಉದ್ದನೆಯ ದುಪಟ್ಟಾದೊಂದಿಗೆ ವಜ್ರದಂತೆ ಹೊಳೆಯುವ ಲೆಹೆಂಗಾವನ್ನು ಧರಿಸಿದ್ದರು. ವಿಜಯ್‌ಗೆ ಅಚ್ಚರಿ ಮೂಡಿಸಲು ರಶ್ಮಿಕಾ `ಪುಷ್ಪ 2′ ಸಿನಿಮಾ ಅಂಗಾರನ್‌ಗೆ ನೃತ್ಯ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಂಚಿಕೊಂಡ ಫೋಟೋಗಳಲ್ಲಿ, ರಶ್ಮಿಕಾ, ವಿಜಯ್ ಡ್ಯಾನ್ಸ್ ಮಾಡುತ್ತಾ, ಕೈ ಹಿಡಿದು ನಡೆದು ಬರುತ್ತಾ, ಮಿನುಗುವ ಲೈಟ್‌ಗಳ ಮಧ್ಯೆ ಆನಂದಿಸುತ್ತಾ, ಮುಗುಳ್ನಗೆ ಬೀರುತ್ತಿರುವ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಮಂಡಿಯೂರಿ ವಿಜಯ್‌ಗೆ ಪ್ರಪೋಸ್ ಮಾಡಿದ್ದಲ್ಲದೇ, ವಿಜಯ್ ತಮ್ಮ ಆನಂದ ಜೊತೆಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ.ಇದನ್ನೂ ಓದಿ: Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ

 

Share This Article