ಆರ್‌ಸಿಬಿಯ ಹೊಸ ಅಧ್ಯಾಯ – ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು ಬಾಯ್ಸ್‌ಗೆ ಹೊಗಳಿಕೆಯ ಮಹಾಪೂರ!

Public TV
2 Min Read

ಬೆಂಗಳೂರು: ಈ ಬಾರಿ ಹೊಸ ಅಧ್ಯಾಯ ಎಂದು ಹೇಳಿಕೊಂಡು ಸೋಲಿನೊಂದಿಗೆ ಲೀಗ್‌ ಆರಂಭಿಸಿದ್ದ ಆರ್‌ಸಿಬಿ (RCB) ನಿಜಕ್ಕೂ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಮೊದಲ 8 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಲೀಗ್‌ ಸುತ್ತಿನಲ್ಲೇ ಹೊರ ಬೀಳುವ ಸಾಧ್ಯತೆಯಿತ್ತು. ಅಷ್ಟರಲ್ಲಿ ಪುಟಿದೆದ್ದ ಆರ್​ಸಿಬಿ ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ ಗೆದ್ದು ಪ್ಲೇ ಆಫ್​ಗೆ (IPL Playoffs) ಅಧಿಕೃತ ಎಂಟ್ರಿ ಕೊಟ್ಟಿದೆ.

ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್ (CSK)​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳಬೇಕಿತ್ತು. ಸದ್ಯ ಆರ್‌ಸಿಬಿ ತಂಡದ ಅದ್ಭುತ ಜಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಕ್ಸ್‌, ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳು ಆರ್‌ಸಿಬಿ (RCB Fans) ಪಂದ್ಯದ ಒಂದೊಂದೇ ದೃಶ್ಯಗಳನ್ನು ಹಂಚಿಕೊಳ್ಳುತ್ತಾ ಕೊಂಡಾಡುತ್ತಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗೌತಮ್‌ ಗಂಭೀರ್‌ ಹೆಸರು ಪ್ರಸ್ತಾಪ!

ಈ ಸಂಭ್ರಮದಲ್ಲಿ ಸಿನಿ ತಾರೆಯರೂ ಭಾಗಿಯಾಗಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾಗಳಲ್ಲಿ ಆರ್‌ಸಿಬಿ ತಂಡದ ಗೆಲುವನ್ನು ಕೊಂಡಾಡಿದ್ದಾರೆ. ಹಾಗಾದ್ರೆ ಯಾರು ಏನು ಹೇಳಿದ್ದಾರೆ ಎಂಬುದನ್ನೊಮ್ಮೆ ನೋಡೋಣ… ಇದನ್ನೂ ಓದಿ: ಆರ್‌ಸಿಬಿ ‘ರಾಯಲ್‌’ ಆಗಿ ಪ್ಲೇ-ಆಫ್‌ಗೆ; ಚೆನ್ನೈ ಮನೆಗೆ

ಕಿಚ್ಚ ಸುದೀಪ್‌ (Kichcha Sudeep):
ಅಭಿನಂದನೆಗಳು ಆರ್‌ಸಿಬಿ ಎಂತಹ ಹೊಂದಾಣಿಕೆ, ಆದ್ರೆ ದುರಾದೃಷ್ಟ ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚೆನ್ನಾಗಿ ಆಡಿದೆ ಎಂದು ಆರ್‌ಸಿಬಿ ಗೆಲುವನ್ನು ಹೊಗಳಿದ್ದಾರೆ.

ನಿರ್ದೇಶಕ ಸಿಂಪಲ್‌ ಸುನಿ (Simple Suni):
ಬರ್ತೀವಿ ಬರ್ತೀವಿ .. ಗುಜರಾತ್ ಗು ಬರ್ತೀವಿ, ಚೆನ್ನೈಗೂ ಬರ್ತೀವಿ, ಬರೀ ಹೊಡೆದಿಲ್ಲ ..ಇಷ್ಟ್ ರನ್ ಒಳಗೆ ಹೊಡಿತೀವಿ ಅಂತ ಹೇಳಿ ಹೊಡೆದಿರೋದು ಅಂತಾ ತಮ್ಮದೇ ಶೈಲಿಯಲ್ಲಿ ಶ್ಲಾಘಿಸಿದ್ದಾರೆ.

ಪಂದ್ಯ ವೀಕ್ಷಿಸಿದ ರಿಷಭ್‌ ಶೆಟ್ಟಿ (Rishab Shetty):
ಇನ್ನೂ ಮೊದಲಿನಿಂದಲೂ ಆರ್‌ಸಿಬಿ ಪಕ್ಕಾ ಫ್ಯಾನ್‌ ಆಗಿರುವ ಕಾಂತಾರ ನಟ ರಿಷಭ್‌ ಶೆಟ್ಟಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಸ್‌ಗೇಲ್‌ ಅವರೊಟ್ಟಿಗೆ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದಾರೆ. ಕೊನೆಯವರೆಗೂ ಕುಳಿತು ಆರ್‌ಸಿಬಿ ಗೆಲುವನ್ನು ಕಣ್ತುಂಬಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದು ಇತಿಹಾಸ, ಕ್ರೀಡಾಂಗಣದಲ್ಲಿ ನಾನು ವೀಕ್ಷಿಸಿದ ಮೊದಲ ಪಂದ್ಯ. ಮೇಲ್ಭಾಗದಲ್ಲಿ ನಿಮ್ಮನ್ನು ನೋಡೋಣ ಆರ್‌ಸಿಬಿ! ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Share This Article