ಪರಾರಿಯಾಗಿದ್ದ ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಸರೆಂಡರ್

Public TV
1 Min Read

ಚಂಡೀಗಢ: ಪರಾರಿಯಾಗಿದ್ದ ಸಿಖ್ ಮೂಲಭೂತವಾದಿ, ಧರ್ಮಪ್ರಚಾರಕ ಅಮೃತಪಾಲ್ ಸಿಂಗ್ (Amritpal Singh) ಭಾನುವಾರ ಮೊಗಾದಲ್ಲಿ ಪಂಜಾಬ್ ಪೊಲೀಸರ (Punjab Police) ಮುಂದೆ ಶರಣಾಗಿದ್ದಾನೆ. ಆತನನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

ಮಾಚ್ 18 ರಂದು ಪರಾರಿಯಾಗಿದ್ದ ಖಲಿಸ್ತಾನಿ ಬೆಂಬಲಿಗ ಅಮೃತ್‌ಪಾಲ್ ಸಿಂಗ್‌ನನ್ನು ಪತ್ತೆ ಹಚ್ಚಲು ಪಂಜಾಬ್ ಪೊಲೀಸರು ಹಲವು ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೂ ಅಮೃತ್‌ಪಾಲ್ ಯಾರ ಕಣ್ಣಿಗೂ ಬೀಳದಂತೆ ತನ್ನ ಸ್ಥಳಗಳನ್ನು ಆಗಾಗ ಬದಲಿಸುತ್ತಾ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದ. ಆತನಿಗಾಗಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ನೂರಾರು ಬೆಂಬಲಿಗರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಇದೀಗ ಅಮೃತ್‌ಪಾಲ್ ಸಿಂಗ್ ಬಂಧನವನ್ನು ಪಂಜಾಬ್ ಪೊಲೀಸರು ದೃಢೀಕರಿಸಿದ್ದಾರೆ. ನಗರದಲ್ಲಿ ಶಾಂತಿ ಕಾಪಾಡುವಂತೆ ಹಾಗೂ ಸುಳ್ಳು ಸುದ್ದಿಗಳನ್ನು ಹರಡದಂತೆ ಅಧಿಕಾರಿಗಳು ಕೇಳಿಕೊಂಡಿದ್ದಾರೆ.

ಅಮೃತ್‌ಪಾಲ್‌ ಸಿಂಗ್‌ ಯಾರು?: ಪಂಜಾಬ್‌ನಲ್ಲಿ ತನ್ನದೇ ಸಶಸ್ತ್ರ ಗುಂಪುಗಳನ್ನು ಕಟ್ಟಿಕೊಂಡು ತಿರುಗಾಡುತ್ತಿದ್ದ ಈತ ‘ವಾರಿಸ್ ಪಂಜಾಬ್ ದಿ’ ಹೆಸರಿನ ಧಾರ್ಮಿಕ ಸಂಘಟನೆ ನಡೆಸುತ್ತಿದ್ದ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆ 3 ದಿನಗಳ ಕಾಲ ಮಳೆ

ಅಮೃತ್‍ಪಾಲ್ ಸಿಂಗ್‌ಗೆ ಪಾಕಿಸ್ತಾನದ (Pakistan) ಗುಪ್ತಚರ ಇಲಾಖೆ ಐಎಸ್‌ಐ (ISI) ಬೆಂಬಲವಿದೆ ಎಂದು ಗುಪ್ತಚರ ಇಲಾಖೆ ಹೇಳಿತ್ತು. ಅಮೃತಪಾಲ್‌ ಸಿಂಗ್‌ ಜಾರ್ಜಿಯಾಕ್ಕೆ ಭೇಟಿಯಾಗಿದ್ದ. ಅಲ್ಲಿ ಆತನಿಗೆ ಬೋಧನೆ ಮಾಡಲಾಗಿದೆ. ಖಲಿಸ್ತಾನ ಹೋರಾಟವನ್ನು ಜೀವಂತವಾಗಿಡಲು ಭಾರತದಲ್ಲಿ ಐಎಸ್‌ಐಗೆ ವ್ಯಕ್ತಿ ಬೇಕಿತ್ತು ಎಂದು ಗುಪ್ತಚರ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿತ್ತು. ಇದನ್ನೂ ಓದಿ:  ಚುನಾವಣೆಗೂ ಮುನ್ನ ರಾಜ್ಯಕ್ಕೆ ಮತ್ತೆ ಮೋದಿ

Share This Article