ನಾಳೆಯಿಂದ ಕಾಂಗ್ರೆಸ್‍ನವರು ರಸ್ತೆಯಲ್ಲಿ ಓಡಾಡೋದು ಕಷ್ಟ ಆಗುತ್ತೆ – ಬಿಎಸ್‍ವೈ

Public TV
1 Min Read

ಬೆಂಗಳೂರು: ನಾಳೆಯಿಂದ ಕಾಂಗ್ರೆಸ್‍ನವರು ರಸ್ತೆಯಲ್ಲಿ ಓಡಾಡೋದು ಕಷ್ಟ ಆಗುತ್ತೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಗುಜರಾತ್, ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಡಿಯೂರಪ್ಪ, ಬಹಳ ಸಂತೋಷದ ವಾತಾವರಣ ಇದೆ. ನಮ್ಮ ಮನೆ ತುಂಬ ಜನ ಇದ್ದಾರೆ. ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಈ ಎರಡೂ ಚುನಾವಣೆಯ ಫಲಿತಾಂಶದ ಪರಿಣಾಮ ಏನೆಂಬುದು ಎಲ್ಲಾ ಮಾಧ್ಯಮಗಳಲ್ಲಿ ಬಂದಿದೆ. ಇವತ್ತು ಎರಡೂ ಕ್ಷೇತ್ರಗಳಲ್ಲಿ ಇಂತಹ ಸಾಧನೆ ಮಾಡಿರೋದು ಕರ್ನಾಟಕದಲ್ಲಿ 150 ಕ್ಷೇತ್ರಗಳನ್ನ ಗೆಲ್ಲೋಕೆ ಶಕ್ತಿ ತುಂಬಿದಂತಾಗಿದೆ. ನಾಳೆಯಿಂದ ಕಾಂಗ್ರೆಸ್‍ನವರು ರಸ್ತೆಯಲ್ಲಿ ಓಡಾಡೋದು ಕಷ್ಟ ಆಗುತ್ತೆ ಅಂದ್ರು.

ನಾಳೆಯಿಂದ ನಮ್ಮ ಪರಿವರ್ತನಾ ಸಮಾವೇಶದಲ್ಲಿ ಯಾವ ರೀತಿ ಜನಸಾಗರ ಸೇರುತ್ತೆ ಅನ್ನೋದು ಕಣ್ಣಾರೆ ನೋಡ್ತೀರಿ. ಮೋದಿ ಅವರ ಎಲ್ಲಾ ಕಾರ್ಯಕ್ರಮಕ್ಕೆ ಗುಜರಾತ್, ಹಿಮಾಚಲಪ್ರದೇಶದಲ್ಲಿ ಮನ್ನಣೆ ಸಿಕ್ಕಿದೆ, ಕರ್ನಾಟಕದಲ್ಲೂ ಮನ್ನಣೆ ಸಿಗುತ್ತೆ. ಕಾಂಗ್ರೆಸ್ ವೈಫಲ್ಯತೆ, ರಾಜ್ಯ ಸರ್ಕಾರದ ವೈಫಲ್ಯತೆ ಎಲ್ಲಾ ಸೇರಿ ನಾವು 150 ಕೇತ್ರಗಳನ್ನ ಗೆಲ್ಲೋಕೆ ಇವೆಲ್ಲವೂ ದೊಡ್ಡ ಶಕ್ತಿ ಕೊಟ್ಟಂತಾಗಿದೆ ಅಂತ ಹೇಳಿದ್ರು.

ನಾಳೆಯಿಂದ ಕಾಂಗ್ರೆಸ್‍ನವರಿಗೆ ಅವರ ಬಗೆಗಿನ ವಿಶ್ವಾಸವೇ ಕಡಿಮೆಯಾಗಿ, ನಾಯಕತ್ವವೇ ಇಲ್ಲದೆ ತಬ್ಬಲಿಗಳಂತೆ ಅಲೆದಾಡೋ ವಾತಾವರಣ ಉಂಟಾಗೋದನ್ನ ನೀವೇ ನೋಡ್ತೀರ. ಜನರ ಮನಸ್ಸಿನಲ್ಲಿ ಆ ಭಾವನೆ ಇದೆ ಅದ್ನೋದು ಸ್ಪಷ್ಟವಾಗುತ್ತೆ ಅಂದ್ರು.

https://www.youtube.com/watch?v=lK5P0Liiya4

Share This Article
Leave a Comment

Leave a Reply

Your email address will not be published. Required fields are marked *