– ಇದು ಫೈಟರ್‌ಜೆಟ್ ಅಲ್ಲ, ನಮ್ಮ ಕುಟುಂಬದ ಸದಸ್ಯ
– ಯುದ್ಧ ವಿಮಾನಕ್ಕೆ ಭಾವನಾತ್ಮಾಕ ವಿದಾಯ ಹೇಳಿದ ರಕ್ಷಣಾ ಸಚಿವ
ಚಂಡೀಗಢ: ಭಾರತೀಯ ವಾಯುಸೇನೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಮಿಗ್-21 (MiG-21) ಯುದ್ಧ ವಿಮಾನ (Fighter Jet) ಹಲವಾರು ವೀರ ಕಾರ್ಯಗಳಿಗೆ ಸಾಕ್ಷಿಯಾಗಿದೆ. 1971ರ ಯುದ್ಧ, ಕಾರ್ಗಿಲ್ ಯುದ್ಧ, ಬಾಲಕೋಟ್ ವೈಮಾನಿಕ ದಾಳಿ ಮತ್ತು ಆಪರೇಷನ್ ಸಿಂಧೂರದಲ್ಲಿಯೂ ಸಹ ಫೈಟರ್ ಜೆಟ್ ನಿರ್ಣಾಯಕ ಪಾತ್ರ ವಹಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದರು.
ಮಿಗ್-21 ಯುದ್ಧ ವಿಮಾನದ ವಿದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಿಗ್ 21 ನಮ್ಮ ಸಶಸ್ತ್ರ ಪಡೆಗಳಿಗೆ ಅಗಾಧ ಶಕ್ತಿಯನ್ನು ಒದಗಿಸದ ಒಂದು ಕ್ಷಣವೂ ಇರಲಿಲ್ಲ. ಐತಿಹಾಸಿಕ ಕಾರ್ಯಾಚರಣೆಗಳು ನಡೆದಾಗಲೆಲ್ಲಾ, ಮಿಗ್ -21 ತ್ರಿವರ್ಣ ಧ್ವಜದ ಗೌರವವನ್ನು ಹೆಚ್ಚಿಸಿದೆ. ಆದ್ದರಿಂದ, ಈ ವಿದಾಯವು ನಮ್ಮ ಸಾಮೂಹಿಕ ನೆನಪುಗಳು, ನಮ್ಮ ರಾಷ್ಟ್ರೀಯ ಹೆಮ್ಮೆ ಮತ್ತು ಧೈರ್ಯ, ತ್ಯಾಗ ಮತ್ತು ಶ್ರೇಷ್ಠತೆಯ ಕಥೆಯನ್ನು ಬರೆದ ಆ ಪ್ರಯಾಣದ ಬಗ್ಗೆಯೂ ಆಗಿದೆ ಎಂದರು. ಇದನ್ನೂ ಓದಿ: ಬಿಹಾರ ಚುನಾವಣೆಗೂ ಮುನ್ನವೇ ಭರ್ಜರಿ ಗಿಫ್ಟ್ – 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ. ವರ್ಗಾವಣೆ
ಮಿಗ್-21 ದೇಶದ ನೆನಪುಗಳು ಮತ್ತು ಭಾವನೆಗಳಲ್ಲಿ ಆಳವಾಗಿ ಹುದುಗಿದೆ. 1963ರಲ್ಲಿ ಸೇನೆಗೆ ಸೇರ್ಪಡೆಯಾದಾಗಿನಿಂದ ಈ ವಿಮಾನವು ಆರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದೆ. ನಮಗೆಲ್ಲರಿಗೂ ಇದು ಕೇವಲ ಫೈಟರ್ ಜೆಟ್ ಅಲ್ಲ, ಬದಲಾಗಿ ನಾವು ಆಳವಾದ ಬಾಂಧವ್ಯ ಹೊಂದಿರುವ ಕುಟುಂಬ ಸದಸ್ಯ. ಮಿಗ್-21 ನಮ್ಮ ವಿಶ್ವಾಸವನ್ನು ರೂಪಿಸಿದೆ, ನಮ್ಮ ಕಾರ್ಯತಂತ್ರವನ್ನು ಬಲಪಡಿಸಿದೆ ಮತ್ತು ಜಾಗತಿಕ ವೇದಿಕೆಯಲ್ಲಿ ನಮ್ಮನ್ನು ನಾವು ಸ್ಥಾಪಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: MiG-21 Retires | 6 ದಶಗಳ ಸೇವೆಗೆ ವಿದಾಯ – ʻಹಾರುವ ಶವಪೆಟ್ಟಿಗೆʼ ಮಿಗ್-21ಗೆ ಗುಡ್‌ಬೈ ಹೇಳಿದ ಭಾರತ

 
			 
		 
		 
		 
                                
                              
		